ಮನೆ ಶೃಂಗಾರಕ್ಕೆ ಸಾಮಾನ್ಯ ಸಂಗತಿಗಳು ಅತ್ಯಗತ್ಯ. ಕೆಲವು ಅಲಂಕಾರಗಳು ಸರಳವಾಗಿದ್ದರೂ ತುಂಬಾ ಆಕರ್ಷಣೀಯವಾಗಿ ಕಾಣುತ್ತವೆ.
ಸರಳ ಅಲಂಕಾರಗಳ ಬಗ್ಗೆ ಟಿಪ್ಸ್...
ಹಾಲ್‌ನಲ್ಲಿ ಇಟ್ಟಿರುವ ಖುರ್ಚಿಗಳು ಅಥವಾ ದಿವಾನಾ ಮೇಲೆ ಒಂದು ಜೊತೆ ತಲೆದಿಂಬನ್ನು (ಚಿತ್ತಾರವಿರುವ ತಲೆದಿಂಬು) ಇಟ್ಟಿರಿ. ಅದು ಗೋಡೆಗಳ ಬಣ್ಣಕ್ಕೆ ತಕ್ಕನಾಗಿದ್ದು ಇರಲಿ.
ದೊಡ್ಡದಾದ ಬೆಡ್‌ರೂಮ್ ಇದ್ದರೆ ಚಿಕ್ಕ ಪ್ರಮಾಣದ ಕಾಟು, ಚೇರ್‌ಗಳಾಗಲಿ, ಬೆಡ್ ಆಗಲಿ ಇಡಬೇಡಿ. ಸ್ವಲ್ಪ ಅದಕ್ಕೆ ಹೊಂದಿಕೊಳ್ಳುವ ದೊಡ್ಡ ಪ್ರಮಾಣದ್ದೇ ಇಟ್ಟಿರಿ. ಇದರಿಂದ ಕೋಣೆಯ ಕಳೆ ಹೆಚ್ಚುತ್ತದೆ.
ಹಾಲ್‌ನಲ್ಲಿ ಅಲ್ಮೆರಾ ಇದ್ದರೆ ಅದನ್ನು ಯಾವಾಗಲು ಮುಚ್ಚಿಡಬೇಡಿ. ತೆರೆದಿಡಿ. ಅಲ್ಮೆರಾದಲ್ಲಿರುವ ವಸ್ತುಗಳನ್ನು ಯಾವಾಗಲೂ ನೀಟಾಗಿ ಜೋಡಿಸಿಡಿ. ಇದು ಅತಿಥಿಗಳನ್ನು ಆಕರ್ಷಿಸಲು ಒಂದು ದಾರಿ ಕೂಡ ಹೌದು.
ಒಂದೊಂದು ಸಲ ಕಪ್ಪುಬಣ್ಣದ ಗೋಡೆಯೂ ಆಕರ್ಷಣೀಯವಾಗಿ ಕಾಣುತ್ತದೆ. ಅದು ಸಣ್ಣ ಕೋಣೆಯನ್ನೂ ದೊಡ್ಡದರಂತೆ ಬಿಂಬಿಸುತ್ತದೆ. ಹೀಗಾಗಿ ಮನೆಯೊಳಗಿನ ಯಾವುದಾದರೊಂದು ಕೋಣೆಗೆ ಕಪ್ಪು ಬಣ್ಣ ಬಳಿಯಿರಿ.
ಬಾತ್‌ರೂಮ್‌ನಲ್ಲಿ ಯಾವಾಗಲು ಒದ್ದೆ ತಡೆಯುವ ಮ್ಯಾಟ್ ಬಳಸಿ. ಹೊರಗಡೆಯೂ ಒಂದು ಒದ್ದೆ ತಡೆಯುವ ಮ್ಯಾಟ್ ಹಾಕಿರಿ. ಅಲ್ಲದೆ, ಬಾತ್‌ರೂಮ್ ಒಳಗಿನ ಮ್ಯಾಟ್ ಅನ್ನು ನಿತ್ಯ ಬಿಸಿಲಿಗೆ ಒಣಗಿಸಿಡಿ. ಇದರಿಂದ ವಾಸನೆ ಬರುವುದಿಲ್ಲ.
ಹಾಲ್‌ನಲ್ಲಿ ಸೋಫಾ ಇದ್ದರೆ ಚೆನ್ನ ಎನ್ನುವ ನಂಬಿಕೆ ಬೇಡಿ. ಅದು ಇಲ್ಲದಿದ್ದರೂ ಬರೀ ಚೇರ್‌ಗಳನ್ನೇ ಸುತ್ತಲು ಇಟ್ಟು, ನಡುವೆ ಒಂದು ಸಣ್ಣದಾದ ಟೇಬಲ್ ಇಟ್ಟರೂ ಸಾಕು.
ಮನೆ ಒಳಗಿನ ಗೋಡೆಗೆ ಬಿಳಿ ಬಣ್ಣ ಬಳಿಯಿರಿ. ನಿತ್ಯ ನಿಮಗೆ ಅದು ಉಲ್ಲಾಸವನ್ನು ನೀಡುತ್ತದೆ. ಜೊತೆಗೆ ಆಂತರಿಕ ವಿನ್ಯಾಸಕ್ಕೆ ಎಂತಹ ವಸ್ತುಗಳನ್ನು ತಂದಿಟ್ಟರೂ ಅದಕ್ಕೆ ಒಗ್ಗಿಕೊಳ್ಳುತ್ತದೆ.