ಮಹಿಳೆ-ಮನೆ-ಬದುಕು

ಸ್ವಾಭಿಮಾನಿ

ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಗೌಡ್ರು ಅನಸೂಯಮ್ಮ ರೊಟ್ಟಿ ತಟ್ಟಿ, ಮಾರಾಟ ಮಾಡಿ ಇಡೀ ಕುಟುಂಬ ತೂಗಿಸಿ...

ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಗೌಡ್ರು ಅನಸೂಯಮ್ಮ ರೊಟ್ಟಿ ತಟ್ಟಿ, ಮಾರಾಟ ಮಾಡಿ ಇಡೀ ಕುಟುಂಬ ತೂಗಿಸಿಕೊಂಡು ಹೋಗುತ್ತಿದ್ದಾರೆ. ಅಂದಹಾಗೆ ಇವರು ಈ ಕಾಯಕವನ್ನು ಆಶ್ರಯಿಸಿರುವುದು ಕಳೆದ ಹದಿನೈದು ವರ್ಷಗಳಿಂದ. ಅನಸೂಯಮ್ಮಳಂತೆ ಪಟ್ಟಣದಲ್ಲಿ ಇತರರೂ ರೊಟ್ಟಿ ತಟ್ಟಿ ಮಾರಾಟ ಮಾಡುತ್ತಾರೆ. ಆದರೆ ಅನಸೂಯಮ್ಮಳ ಕೈಯಲ್ಲಿ ಬೆಂದ ರೊಟ್ಟಿಗೆ ಬೇಡಿಕೆ ಹೆಚ್ಚು. ಪಟ್ಟಣದ ಅನೇಕ ಹೋಟೆಲ್‌ಗಳು ಇವರ ಕಾಯಂ ಗಿರಾಕಿಯಾದರೆ, ಮತ್ತೆ ಕೆಲವರು ದಿನನಿತ್ಯ ಇವರ ಮನೆಬಾಗಿಲಿಗೆ ಬಂದು ರೊಟ್ಟಿಗಾಗಿ ಬೇಡಿಕೆ ಇಡುತ್ತಾರೆ.
ಈ ವಯೋವೃದ್ಧೆಗೆ ಬರೋಬ್ಬರಿ 83 ವರ್ಷ ವಯಸ್ಸು. ಎಡಗಣ್ಣಿಗೆ ಈಗಾಗಲೇ ಶಸ್ತ್ರಚಿಕಿತ್ಸೆಯಾಗಿದ್ದು, ಮೊದಲಿದ್ದ ಚೈತನ್ಯ ಇಲ್ಲವಾಗುತ್ತಿದೆ. ಆದರೆ ಸ್ವಾವಲಂಬಿ ಜೀವನ ನಡೆಸುವ ಇವಳ ಇಚ್ಚೆ ಮಾತ್ರ ಕಿಂಚಿತ್ತೂ ಕಡಿಮೆಯಾಗಲಿಲ್ಲ.
'ಕೊಟ್ಟ ಹೆಣ್ಣು ಕುಲಕ್ಕೆ ಹೊರಗು' ಎಂಬ ಮಾತು ಇವರಿಗೆ ಅನ್ವಯಿಸಲಿಲ್ಲ. ಮದುವೆಯಾದ ನಂತರವೂ ಪತಿಯ ಮನಮೊಲಿಸಿ, ತವರು ಮನೆಯಲ್ಲಿಯೇ ಇದ್ದು ತನ್ನ ಜವಬ್ದಾರಿಯನ್ನು ನಿರ್ವಹಿಸುವಲ್ಲಿ ಯಶಸ್ವಿಯಾದರು. ಗಂಡ ಸೋಗಿ ಈರಣ್ಣ ಬೇಸಾಯದ ಜತೆಗೆ ಊರಿನವರ ಕಷ್ಟಸುಖಗಳಲ್ಲಿ ಭಾಗಿಯಾದರೆ, ಅನಸೂಯಮ್ಮ ಮನೆಯ ಬಾಳ್ವೆಯನ್ನು ತೂಗಿಸುವಲ್ಲಿ ನಿರತರಾದರು. ತನ್ನ ಒಡಹುಟ್ಟಿದವರಿಗೆ ಮದುವೆ ಮಾಡಿ ಅವರಿಗೆ ನೆಲೆ ಕಲ್ಪಿಸಿಕೊಡುವಲ್ಲಿ ಅನಸೂಯಮ್ಮ ನಿರ್ಣಾಯಕ ಪಾತ್ರವಹಿಸಿದರು. ಕಸುಬಿನಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಾ, ಕೊನೆಯದಾಗಿ ರೊಟ್ಟಿ ತಟ್ಟಿ ಮಾರಲು ಪ್ರಾರಂಭಿಸಿದರು. ಪ್ರಾರಂಭದಲ್ಲಿ ಬೆರಳಣಿಕೆಷ್ಟು ರೊಟ್ಟಿಗಳು ಖರ್ಚಾದವು. ಕ್ರಮೇಣ ಇವರ ನೈಪುಣ್ಯತೆಯೇ ಮಾರುಕಟ್ಟೆಯನ್ನು ಸೃಷ್ಟಿಸಿತು. ಪಟ್ಟಣದ ಬಹುತೇಕರ ಮನೆಯಲ್ಲಿ  ಜರುಗುವ ಔತಣಕೂಟಕ್ಕೆ, ಪ್ರವಾಸಕ್ಕೆ, ರೊಟ್ಟಿಗಳು ಬೇಕಾದರೆ ಮೊದಲು ನೆನಪಾಗುವುದು ಅನಸೂಯಮ್ಮ. ಕೇವಲ ಪಟ್ಟಣದಲ್ಲಿ ಮಾತ್ರವಲ್ಲದೇ, ಇವರ ರೊಟ್ಟಿಗಳು ಬೆಂಗಳೂರಿಗೂ ಪೂರೈಕೆಯಾಗುತ್ತವೆ. ಪ್ರಾರಂಭದಲ್ಲಿ ಸ್ಯಾವಗಿ, ಹಪ್ಪಳ, ಸಂಡಗಿ ಇತ್ಯಾದಿಗಳನ್ನು ಮಾಡಿ, ಮಾರಿ ಅದರಿಂದ ಬಂದ ಆದಾಯದಿಂದ ಸಂಸಾರ ತೂಗಿಸಿದರು. ಇಂದು ಅನಸೂಯಮ್ಮಳಲ್ಲಿ ಕೈಯಲ್ಲಿ ಅರಳಿದ ರೊಟ್ಟಿಗಳೆಂದರೆ ಕಣ್ಣು ರೆಪ್ಪೆ ಬಡಿಯುವುದರಲ್ಲಿ ಖರ್ಚಾಗುತ್ತವೆ. ಕೇವಲ ಮೆದು, ಖಡಕ್ ಜೋಳದ ರೊಟ್ಟಿಗಳನ್ನು ಮಾತ್ರವಲ್ಲದೇ, ಸಜ್ಜಿ, ರಾಗಿ ರೊಟ್ಟಿ ಸೇರಿದಂತೆ ವಿವಿಧ ಧಾನ್ಯಗಳ ಪುಡಿಗಳನ್ನು ಗಿರಾಕಿಗಳು ಬಯಸಿದರೆ ಮಾಡಿಕೊಡುತ್ತಾರೆ. ಈಗಾಗಲೇ ಮರಿಮೊಮ್ಮಕ್ಕಳನ್ನು ಕಂಡಿರುವ ಅನಸೂಯಮ್ಮಳಿಗೆ ಅರ್ಥಿಕ ಸಂಕಷ್ಟವಿಲ್ಲ. ಆದರೆ ಸ್ವಾವಲಂಬನೆಯಿಂದ ಬದುಕುವ ಇಂಗಿತವಿದೆ. ಹಾಗಾಗಿ ಈ ಇಳಿವಯಸ್ಸಿನಲ್ಲಿಯೂ ಅದೇ ಲವಲವಿಕೆಯಿಂದ ರೊಟ್ಟಿ ಮಾಡುವ ಅನಸೂಯಮ್ಮಳಿಗೆ ಮನೆಯ ಸದಸ್ಯರೆಲ್ಲ ಸಾಥ್ ನೀಡುತ್ತಿದ್ದಾರೆ. ತನ್ನ ಜೀವಿತದ ಉದ್ದಕ್ಕೂ ಶ್ರಮಜೀವಿಯಾಗಿ, ದಿಟ್ಟ ಮಹಿಳೆಯಾಗಿ, ಕುಟುಂಬಕ್ಕೆ ಕಣ್ಣಾಗಿ ಅದೆಲ್ಲದಿಕ್ಕಿಂತ ಮಿಗಿಲಾಗಿ ಸ್ವಾಭಿಮಾನಿಯಾಗಿ ಬದುಕುತ್ತಿದ್ದಾರೆ. ಅನಸೂಯಮ್ಮಳಿಗೆ (99455978991) ಈಗ 83 ವರ್ಷ. ಯಾವುದೇ ಕಾಯಕವನ್ನು ಶ್ರದ್ಧೆಯಿಂದ ಮಾಡಿದರೆ ಫಲ ಕಟ್ಟಿಟ್ಟ ಬುತ್ತಿ ಎಂಬುವುದಕ್ಕೆ ಮಾದರಿಯಾಗಿ ನಮ್ಮ ನಡುವೆ ಇದ್ದಾರೆ. ಇವರನ್ನು ಸಂಘ-ಸಂಸ್ಥೆಗಳು ಗುರುತಿಸಿ ಗೌರವ ಸಲ್ಲಿಸಬೇಕಿದೆ.


- ವಿ.ಜಿ ವೃಷಭೇಂದ್ರ ಕೂಡ್ಲಿಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!