ಮಹಿಳೆ-ಮನೆ-ಬದುಕು

ಹಳೆಯ ಸರಕು ಬಿಸಾಕಿ ಬಿಡಿ

ಎಷ್ಟೋ ಸಾರಿ ಹೇಳಿ ಬಿಡಬೇಕು ಎಂದು ಬಾಯಿಗೆ ಬಂದ ಪದಗಳು ಅವನ ಪ್ರೀತಿಯಲಿ ಕರಗಿ...

ಎಷ್ಟೋ ಸಾರಿ ಹೇಳಿ ಬಿಡಬೇಕು ಎಂದು ಬಾಯಿಗೆ ಬಂದ ಪದಗಳು ಅವನ ಪ್ರೀತಿಯಲಿ ಕರಗಿ ಮತ್ತೆ ಗಂಟಲೊಳಗೇ ಇಳಿದು ಬಿಡುತ್ತವೆ. ಅವನು ಏನೆಂದುಕೊಳ್ಳುವನೋ, ಅಕಸ್ಮಾತ್ ನಮ್ಮ ಸಂಬಂಧ ಹದಗೆಟ್ಟರೇನು ಗತಿ ಎನ್ನುವ ಭಯ ಅವಳನ್ನು ಕಾಡುತ್ತಿರುತ್ತದೆ. ಸಾಧ್ಯವಾದಷ್ಟೂ ಮನಸಿಗೆ ಬೇಲಿಯ ಹಾಕುತಾ ನೆನಪುಗಳ ಕಿತ್ತೊಗೆಯಲು ಕಚ್ಚೆ ಕಟ್ಟಿ ನಿಲ್ಲುತ್ತಾಳೆ.

ಮೃದುಲಾಗೆ ಮದುವೆಯಾಗಿ ಆರು ತಿಂಗಳಾಗುತ್ತಿವೆ. ಸಂಗಾತಿಯೆಡೆಗೆ ಪ್ರೀತಿ ತೋರಿಸಲು ಅವಳು ಆದಷ್ಟು ಕಷ್ಟ ಪಡುತ್ತಿದ್ದಾಳೆ. ಆದರೆ ಸಾಧ್ಯವಾಗುತ್ತಿಲ್ಲ. ಗಂಡ ಬಹಳಷ್ಟು ಬಾರಿ ಕೇಳಿಯೂ ಬಿಟ್ಟಿದ್ದಾನೆ. ಮದುವೆಗೆ ಮುಂಚೆ ಯಾರನ್ನಾದರೂ ಪ್ರೀತಿಸಿದ್ದೆಯಾ ಎಂದು. ಇಲ್ಲ ಹಾಗೇನೂ ಇಲ್ಲ. ಹೊಸ ವಾತಾವರಣ, ಹೊಸ ಜನ ಹೊಂದಿಕೊಳ್ಳಲು ಸಮಯ ಬೇಕಷ್ಟೇ. ಅದೇ ಪ್ರಯತ್ನದಲ್ಲಿದ್ದೇನೆ ಎಂದು ಮಾತು ಮರೆಸಿ ಎದ್ದು ಹೋಗಿದ್ದಾಳೆ.

ಈ ಮೌನದ ಒಳಗೆ ಗುಟ್ಟೇನೋ ಇರಬೇಕು ಎಂದು ಯೋಚಿಸಿ ಅವಳ ಬಗ್ಗೆ ಅನುಮಾನ ಪಡುವಷ್ಟು ಕೆಳ ಮನಸ್ಥಿತಿಯ ಗಂಡನಲ್ಲ. ಅವಳೇ ಮೊದಲಿಗಳು, ಅವಳೇ ಕೊನೆಯವಳು ಎಂದು ಪ್ರೀತಿಯ ಕಡಲಲಿ ಮುಳುಗಿಸುತ್ತಿರುತ್ತಾನೆ ಅವನು. ಇನ್ನೇನು ನಾನು ಸಂಪೂರ್ಣ ಅವನ ಪ್ರೇಮದಲ್ಲಿ ಐಕ್ಯವಾಗಿ ಬಿಟ್ಟಿದ್ದೇನೆ ಎನ್ನುವ ಸಂದರ್ಭಕ್ಕೆ ಅವಳಿಗೆ ಹಳೆಯ ಪ್ರೇಮಿಯ ನೆನಪು ಸುನಾಮಿಯಂತೆ ಬಂದು ಅಪ್ಪಲಿಸುತ್ತದೆ.

ಅಪರಾಧಿ ಭಾವ ಅವಳನ್ನು ಹಿಂಡಿ ಕೊಲ್ಲುತ್ತದೆ. ಅಪರಾಧಿ ಭಾವ ಅವಳನ್ನು ಹಿಂಡಿ ಕೊಲ್ಲುತ್ತದೆ. ಆ ದಿನಗಳ ನೆನಪಿನ ರಾಶಿ ಹೊಸ ಜೀವನಕೆ ಹೊಂದಿಕೊಳ್ಳಲು ಬಿಡದೆ ಅವಳನ್ನು ಅಂತರ್ಮುಖಿಯನ್ನಾಗಿ ಮಾಡುತ್ತದೆ. ಗಂಡನ ದೃಷ್ಟಿಯಲ್ಲಿ ತಾನು ಕೆಳಮಟ್ಟಕ್ಕೆ ಕುಸಿಯುತ್ತಿದ್ದೇನಾ ಎನ್ನುವ ಪ್ರಶ್ನೆ ಅವಳನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತದೆ.

ಎಷ್ಟೋ ಸಾರಿ ಹೇಳಿ ಬಿಡಬೇಕು ಎಂದು ಬಾಯಿಗೆ ಬಂದ ಪದಗಳು ಅವನ ಪ್ರೀತಿಯಲಿ ಕರಗಿ ಮತ್ತೆ ಗಂಟಲೊಳಗೇ ಇಳಿದು ಬಿಡುತ್ತವೆ. ಅವನು ಏನೆಂದುಕೊಳ್ಳುವನೋ, ಅಕಸ್ಮಾತ್ ನಮ್ಮ ಸಂಬಂಧ ಹದಗೆಟ್ಟರೇನು ಗತಿ ಎನ್ನುವ ಭಯ ಅವಳನ್ನು ಕಾಡುತ್ತಿರುತ್ತದೆ. ಸಾಧ್ಯವಾದಷ್ಟೂ ಮನಸಿಗೆ ಬೇಲಿಯ ಹಾಕುತಾ ನೆನಪುಗಳ ಕಿತ್ತೊಗೆಯಲು ಕಚ್ಚೆ ಕಟ್ಟಿ ನಿಲ್ಲುತ್ತಾಳೆ.

ಪುನರಾಗಮನ
ಇಂಥ ಸಂದರ್ಭದಲ್ಲಿ ಅವನು ಮತ್ತೆ ತನ್ನ ಬಾಳಲಿ ಎಂದಿಗೂ ಬರದಿರಲಿ. ಮತ್ತೆ ಯಾವುದೋ ಸಂದರ್ಭಕೆ ಬಿದ್ದು ಈ ಜೀವನ ಹಾಳಾಗದಿರಲಿ ಎನ್ನುವುದೇ ಅವಳ ಪ್ರತಿದಿನದ ಪ್ರಾರ್ಥನೆ. ಇಂಥದ್ದೇ ಸಂದರ್ಭ ಹುಡುಕುತ್ತಿದ್ದ ವಿಧಿ, ಒಂದು ದಿನ ಆಕಸ್ಮಿಕವಾಗಿ ಅವನು ಮತ್ತೆ ಎದುರಾಗುವಂತೆ ಮಾಡುತ್ತದೆ. ಕಾಲ್ಕೆಳಗಿನ ಭೂಮಿಯೇ ಕುಸಿದು ನುಂಗುತ್ತಿರುವ ಅನುಭವ.

ಗಂಡನಿಗೆ ಗೊತ್ತಾದರೆ ಮುಂದೇನು ಕಾದಿದೆಯೋ ಎಂದು ಕಂಡರೂ ಕಾಣದವಳ ಹಾಗೆ ನಡೆದು ಬಿಡುತ್ತಾಳೆ. ಆಗ ಹಳೇ ಪ್ರೇಮಿಯ ಮನಸ್ಸು ಇವಳ ಹಿಂದಿನ ಮಾತುಗಳ ಪ್ರೀತಿಯ ನೆನೆದು ಕುದಿಯುತ್ತದೆ. ಇವಳೇನಾ ಒಂದಾಗಿ ಬದುಕಲು ಸಾಧ್ಯಾವಾಗದಿದ್ದರೆ ಒಂದಾಗಿ ಸಾಯೋಣಾ ಎಂದಿದ್ದು? ಇವಳಿಗೆ ಬುದ್ಧಿ ಕಲಿಸಬೇಕು ಎಂದುಕೊಂಡು ಅವನು ಅಪಪ್ರಚಾರ ಮಾಡಲೂಬಹುದು. ಅಥವಾ ತನ್ನ ಪ್ರೀತಿಯ ಸಾವನ್ನು ಕಣ್ಣೆದುರಿಗೆ ಕಂಡು ದೇವದಾಸನ ಹಾಗೆ ನಾಲ್ಕಾರು ಬಾರಿ ನಿಮ್ಮ ಕಣ್ಣಿಗೆ ಬೀಳಲೂಬಹುದು.

ಆಗ ಹೆಣ್ಣಿನ ಮನಸ್ಸು ಕರಗುವ ಪ್ರಯತ್ನದಲ್ಲಿರುತ್ತದೆ. ಅಂಥ ಸಂದರ್ಭದಲ್ಲಿ ಎಚ್ಚರಿಕೆಯಿಂದ ಸಂಭಾಲಿಸಿಕೊಳ್ಳವುದು ಮುಖ್ಯ. ಎದುರಿಗಿರುವ ಗಂಡನ ಪರಿಸ್ಥಿತಿಯನ್ನೊಮ್ಮೆ ನೋಡಿ. ತನ್ನದಲ್ಲದ ತಪ್ಪಿನಲಿ ಹೊಂದಿಕೊಳ್ಳಲು ಅವನು ಮಾಡುತ್ತಿರುವ ಪ್ರಯತ್ನಗಳಿಗೆ ತಲೆಬಾಗಿ. ಹಳೆಯ ಪ್ರೇಮಿಯೊಂದಿಗೆ ಹೋಲಿಕೆ ನಿಲ್ಲಿಸಿ. ಅವನು ಇರುವಂತೆಯೇ ಪ್ರೀತಿಸಲು ಪ್ರಯತ್ನಿಸಿ. ನಿನ್ನೆ ನಿನ್ನೆಗೆ, ಇಂದು ಅದರ ಬಗ್ಗೆ ಯೋಚಿಸುತ್ತಾ ಕುಳಿತರೆ ನಾಳೆ ನರಕವಾಗಿ ಬಿಡುತ್ತದೆ. ಆದ್ದರಿಂದ ಮರೆತು ಮುನ್ನುಗ್ಗುವುದು ಉತ್ತಮ.

ಸಾಮಾನ್ಯವಾಗಿ ಸಂಬಂಧಗಳಲ್ಲಿ ಅಥವಾ ಒಂದೇ ಊರಿನವರಾಗಿದ್ದರೆ ಮತ್ತೆ ಮತ್ತೆ ಹಳೆಯ ಪ್ರೇಮಿಯನ್ನು ಭೇಟಿಯಾಗುವ ಸಂದರ್ಭಗಳು ಹೆಚ್ಚು. ಅಂಥ ಸಂದರ್ಭದಲ್ಲಿ ಒಂದು ಕ್ಯಾಶುಯಲ್ ಮಾತುಕತೆ ಬಿಟ್ಟರೆ ಮತ್ತೇನಕ್ಕೂ ಅವಕಾಶ ಕೊಡಬೇಡಿ. ಹಳೆಯ ಸರಕನು ಮನೆಯಂಗಳದಲ್ಲಿ ಇಟ್ಟುಕೊಂಡು ಮಾಡುವುದೇನೂ ಇಲ್ಲ. ಇದ್ದಷ್ಟು ಹೊತ್ತೂ ಕೊಳೆತು ನಾರುತ್ತದೆ. ಮನದಿಂದ ಹೊರಗೆ ಬಿಸಾಕಿ ಶುಭ್ರತೆಯಲಿ ಸಂತಸ ಪಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT