ಮಹಿಳೆ-ಮನೆ-ಬದುಕು

ಎತ್ತ ಹಾರಿತು...ನೀತಿಯ ಗಾಳಿಪಟ

ರಸ್ತೆಯಲ್ಲಿ ಆ ದೃಶ್ಯ ಕಣ್ಣಿಗೆ ಬಿತ್ತು. ದಟ್ಟ ಜನ, ವಾಹನಗಳಿದ್ದ ಅಲ್ಲಿ ತಂದೆ- ಮಗ ಕೂತಿದ್ದ ದ್ವಿಚಕ್ರವಾಹನವೊಂದು ಅಜ್ಜ-ಅಜ್ಜಿ ಸಾಗುತ್ತಿದ್ದ ಮತ್ತೊಂದು ...

ರಸ್ತೆಯಲ್ಲಿ ಆ ದೃಶ್ಯ ಕಣ್ಣಿಗೆ ಬಿತ್ತು. ದಟ್ಟ ಜನ, ವಾಹನಗಳಿದ್ದ ಅಲ್ಲಿ ತಂದೆ- ಮಗ ಕೂತಿದ್ದ ದ್ವಿಚಕ್ರವಾಹನವೊಂದು ಅಜ್ಜ-ಅಜ್ಜಿ ಸಾಗುತ್ತಿದ್ದ ಮತ್ತೊಂದು ವಾಹನಕ್ಕೆ ಢಿಕ್ಕಿ ಹೊಡೆಯಿತು. ಆ ಮಧ್ಯವಯಸ್ಕ ತಂದೆಯದ್ದೇ ತಪ್ಪಿದ್ದುದನ್ನು ಗಮನಿಸಿದ ಜನರು ಹಿರಿಯರ ಸಹಾಯಕ್ಕೆ ಧಾವಿಸಿದರು. ಇದನ್ನು ಗಮನಿಸಿದ ಮಧ್ಯವಯಸ್ಕ ತನ್ನ ಬೈಕ್ ಎತ್ತಿಕೊಂಡಿದ್ದೇ, ಮಗನನ್ನೂ ಕೂರಿಸಿಕೊಳ್ಳದೇ ಪರಾರಿಯಾದ! ಹುಡುಗನನ್ನು ಹಿಡಿದುಕೊಂಡಿದ್ದ ಜನ ಮುಖ ಮುಖ ನೋಡಿಕೊಳ್ಳುತ್ತಿದ್ದರೆ ಆ ಹುಡುಗ ಅಪ್ಪನನ್ನು ಕರೆಯುತ್ತಾ ಅಳುತ್ತಿದ್ದ. ಸ್ವಂತ ಮಗನನ್ನೇ ಬಿಟ್ಟು ಓಡಿಹೋದ ತಂದೆಯನ್ನು ಏನನ್ನಬೇಕು?
-
ನಿತ್ಯ ಆಟೋದಲ್ಲಿ ಶಾಲೆಗೆ ಹೋಗುತ್ತಿದ್ದ ಮಗುವನ್ನು ಅಂದು ತಾಯಿ ಮನೆಗೆ ಕರೆದೊಯ್ಯಲು ಬಂದಳು. ಶಾಲೆಯ ಗೇಟ್ ಹೊರಗೆ ಬಂದ ಮಗು ಸ್ಕೂಟರ್ ಹತ್ತದೆ ನಿಂತಿರುತ್ತದೆ. ತಾಯಿ ಯಾಕೆಂದು ಕೇಳಲು ಮಗು ಕೊಟ್ಟ ಉತ್ತರ ಆ ತಾಯಿಗಲ್ಲದೆ ಸಮಾಜಕ್ಕೂ ನೀತಿಪಾಠದಂತಿದೆ... ಆ ಮಗುವನ್ನು ಕರೆದೊಯ್ಯುವ ಆಟೋ ಡ್ರೈವರ್ಗೆ ಒಂದು ಕಾಲಿಲ್ಲ. ದಿನವೂ ಆತ ಗೇಟ್ ಹೊರಗೆ ಮಕ್ಕಳನ್ನು ಕರೆದೊಯ್ಯಲು ಕಾಯುತ್ತಿರುತ್ತಾನೆ. 'ಅವರು ನನಗಾಗಿ ಕಾಯುವುದಿಲ್ಲವೇ? ಅವರಿಗೊಂದು ಮಾತೂ ಹೇಳದೆ ಹೋದರೆ ಹೇಗೆ?' ಪ್ರಶ್ನೆ ರೂಪದ ಉತ್ತರ ಕೇಳಿದ ತಾಯಿ ಕಣ್ಣಲ್ಲಿ ನೀರು. ದಿನವೂ ಕಾದು ಕುಳಿತು ಕರೆದೊಯ್ಯುವವರ ಬಗ್ಗೆ ಮಗುವಿಗೆ ಕೊಂಚ ಕಾಳಜಿ. ಇಂಥ ಮೌಲ್ಯಗಳನ್ನು ಎಷ್ಟು ಮಂದಿಯಲ್ಲಿ ಕಾಣಲು ಸಾಧ್ಯ? ಅಂದಹಾಗೆ, ಮಗುವಿಗೆ ಇಂಥ ಮೌಲ್ಯ ತನ್ನ ಅಜ್ಜ-ಅಜ್ಜಿಯರ ಬಳುವಳಿ.
-
ನಗರದಲ್ಲಿ ದ್ವಿಪಥಗಳು ನಿರ್ಮಾಣವಾದ ಮೇಲೆ, ವಾಹನ ಸವಾರರು ಮತ್ತೊಬ್ಬ ಸವಾರನನ್ನು ಹಿಂದಿಕ್ಕಿ ಮುನ್ನುಗ್ಗುವುದಿಲ್ಲ. ಬದಲಿಗೆ ಎಡ ಬಲ ವ್ಯತ್ಯಾಸಗಳಿಲ್ಲದೆ ನಿಧಾನವಾಗಿ ಸಾಗುವವರನ್ನು ಹಿಂದಿಕ್ಕುತ್ತಾರೆ. ಹೀಗೇ ಒಬ್ಬ ಹಾವಿನಂತೆ ಚಲಿಸುತ್ತಿದ್ದ. ಇಬ್ಬರು ಮೂವರನ್ನು ಹಿಂದಿಕ್ಕಿ ಮುನ್ನುಗ್ಗುವಾಗ ಒಬ್ಬ ಮಹಿಳೆಯ ವಾಹನಕ್ಕೆ ತಗುಲಿ ಆಕೆ ಆಯತಪ್ಪಿ ಬೀಳುವಂತಾದರೂ ಹೇಗೋ ಸಂಭಾಳಿಸಿಕೊಂಡು ಹೋಗುತ್ತಿದ್ದರು. ಆದರೆ ಈತನೇ ಆಕೆಯನ್ನು 'ಕಣ್ಣು ಕಾಣುವುದಿಲ್ಲವೇ?' ಎಂದ. ತಕ್ಷಣಕ್ಕೆ ಆಕೆ ಈತನನ್ನು ಹಿಗ್ಗಾಮುಗ್ಗಾ ಬಯ್ಯತೊಡಗಿದಳು. ಬೈಸಿಕೊಂಡು ಆತ ಸುಮ್ಮನಿದ್ದನೇ? ಇಲ್ಲ. ಕನಿಷ್ಠ ನೈತಿಕತೆಯನ್ನೂ ಆತ ಮರೆತಿದ್ದ.
-
ಮಗು ಬೆಳೆಯುವ ಪ್ರತಿ ಹಂತದಲ್ಲೂ ನೀತಿಪಾಠ ಅತ್ಯಗತ್ಯ. ಆದರೆ, ಇಂದಿನ ತಾಯಿ ತಂದೆಯರಿಗೆ ಪುರುಸೊತ್ತೆಲ್ಲಿದೆ? ಬೇಬಿಕೇರ್ಗಳಲ್ಲಿ ಬೆಳೆಯುವ ಮಗು ಸಾಮಾಜಿಕ ಕಳಕಳಿ, ಜವಾಬ್ದಾರಿ, ಮಾನವೀಯ ಮೌಲ್ಯಗಳನ್ನು ಕಲಿಯುವುದಾದರೂ ಹೇಗೆ?
ಒಳ್ಳೆಯವರ ಆತ್ಮ ಪರಮಾತ್ಮನಲ್ಲಿ ಬೇಡುತ್ತದಂತೆ, ಸುಸಂಸ್ಕೃತ ತಂದೆ ತಾಯಿಯ ಸಂತಾನವಾಗುವಂತೆ ತನ್ನನ್ನು ಹರಸು ಎಂದು. ಹಾಗೆಂದು ಯಾವ ತಂದೆ ತಾಯಿಯೂ ತಮ್ಮ ಮಕ್ಕಳಿಗೆ ಕೆಟ್ಟ ಬುದ್ಧಿಯನ್ನಾಗಲೀ, ಚಾಳಿಗಳನ್ನಾಗಲೀ ಕಲಿಸುವುದಿಲ್ಲ. ಆದರೂ ಇಂಥವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದನ್ನು ನೋಡಿದರೆ ನೈತಿಕ ಮೌಲ್ಯಗಳನ್ನು ಮನೆಯಲ್ಲಷ್ಟೇ ಅಲ್ಲ ಪಠ್ಯದಲ್ಲೂ ಬೋಧಿಸುವ ಅಗತ್ಯವಿದೆ ಎನಿಸುತ್ತದೆ.

-ಶ್ವೇತಾ ಎಂ.ಪಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ಮಾಜಿ ಸಿಇಸಿಗಳಿಗೆ ರಾಜ್ಯಪಾಲ, ಸಚಿವ ಸ್ಥಾನದ ಗಿಫ್ಟ್: ಕಾಂಗ್ರೆಸ್ ವಿರುದ್ಧ ಹಳೆಯ ಬಹುಮಾನಗಳ ಪಟ್ಟಿ ಬಿಚ್ಚಿಟ್ಟ ಬಿಜೆಪಿ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!