ಮಹಿಳೆ-ಮನೆ-ಬದುಕು

ಮರೆತೇನೆಂದರ

ರೀ ನೋಡ್ರಿ... ಅವ್ರ ಮಕ್ಳು ಎಷ್ಟು ಛಲೋ ಓದ್ತಾರೆ, ಆ ಹುಡುಗ(ಗಿ) ಓದಿದ್ದು ಮರೆಯುವುದೇ ಇಲ್ಲ. ನಮ್ಮ ಮಕ್ಳನ್ ನೋಡ್ರಿ... ಇವ್ರೂ ಓದ್ತಾರೆ. ಆದ್ರ, ಓದಿದ್ದು ನೆನಪಲ್ಲೇ ಉಳಿಯೋದಿಲ್ಲ. ಏನ್ರೀ ಮಾಡೋದು? ನಮ್ಗ ಮಕ್ಳ ಓದಿಂದೇ ದೊಡ್ಡ ಚಿಂತೆ...

ನೆಂಟರು, ಗೆಳೆಯರು, ಸಮಾನ ಮನಸ್ಕರ ಮನೆಗಳಿಗೆ ಹೋದಾಗೆಲ್ಲ ಪಾಲಕರಿಂದ ನೀವು ಇಂಥ ಮಾತುಗಳನ್ನು ಕೇಳಿರುತ್ತೀರಿ. ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ? ಅವ್ರ ಮಕ್ಳಿಗೆ ಮಾತ್ರ ಅದ್ಹೇಗೆ ಸಾಧ್ಯವಾಯಿತು? ನಮ್ಮ ಮಕ್ಕಳಿಗೇಕೆ ಆಗಿಲ್ಲ? ಎನ್ನುವ ಬಗ್ಗೆ ಪಾಲಕರು ಗಮನ ಹರಿಸದಿರುವುದೇ ಸಮಸ್ಯೆಗೆ ಮೂಲ ಕಾರಣ.

ಆಸಕ್ತಿ ಮೂಡಿಸಿ
ಮರೆವು ಉಂಟಾಗಲು ಪ್ರಮುಖ ಕಾರಣ, ಮಕ್ಕಳು ಕೇಳುವ, ಅಭ್ಯಸಿಸುವ ವಿಷಯದ ಬಗ್ಗೆ ಆಸಕ್ತಿ ಇಲ್ಲದಿರುವುದು. ಆಸಕ್ತಿಯಿಂದ ಪಾಲ್ಗೊಂಡ, ಓದಿದ ವಿಷಯಗಳು ಹಲವಾರು ವರ್ಷ ನೆನಪಿನಲ್ಲಿ ಉಳಿಯುತ್ತವೆ. ಸಣ್ಣ-ಪುಟ್ಟ ವಿಷಯಗಳನ್ನು ಮರೆಯುತ್ತೇವೆ, ಏಕೆ? ಎಂದು ಗಮನಿಸಿದಲ್ಲಿ ನಮಗೇ ಅರ್ಥವಾಗುತ್ತದೆ.
ಕೆಲಸವನ್ನು ಹೆಚ್ಚಿನ ಆಸಕ್ತಿಯಿಂದ ಮಾಡದ ಕಾರಣ ಅದು ನಮ್ಮ ಸ್ಮೃತಿಪಟಲದಿಂದ ಅಳಿಸಿರುತ್ತದೆ. ಅದಕ್ಕಾಗಿ ಮಕ್ಕಳಿಗೆ ಓದಿನ ಬಗ್ಗೆ, ಪರೀಕ್ಷೆಯ ಪೂರ್ವ ತಯಾರಿ ಕುರಿತು, ಶಾಲೆಗಳಲ್ಲಿ ನಡೆವ ಸೆಮಿನಾರ್‌ಗಳ ಬಗ್ಗೆ ಮೊದಲು ಮಾಡಬೇಕಾದ ಕೆಲಸ- ಮಕ್ಕಳಲ್ಲಿ ಆಸಕ್ತಿ ಬೆಳೆಸುವುದು. ಮಗುವಿಗೆ ಆಸಕ್ತಿ ಮೂಡಿದಲ್ಲಿ ಖಂಡಿತ ಯಶಸ್ಸು ಕಾಣುತ್ತದೆ. ಆಸಕ್ತಿ ಇಲ್ಲದೆ ಮಾಡಿದ ಕೆಲಸ, ಕಾರ್ಬನ್ ಕಾಪಿ. ಒತ್ತಡ ಹಾಕದೇ ಬರೆದಾಗ ಅಕ್ಷರಗಳು ಬಿಟ್ಟು ಹೋದಂತಾಗುತ್ತವೆ.

ಹೀಗೆ ಮಾಡಿ
ನೀವು ಅಥವಾ ಶಿಕ್ಷಕರು ನೀಡಿದ ಯಾವುದೇ ವಿಷಯವನ್ನು ಮಕ್ಕಳು ಹೇಗೆ ಗ್ರಹಿಸುತ್ತಾರೆ ಎಂದು ಗಮನಿಸಿ. ಗ್ರಹಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಿ, ಓದುವ ಸಂದರ್ಭ ಮನೆಯಲ್ಲಿ ಸಾಧ್ಯವಾದಷ್ಟು ಶಾಂತತೆ ಕಾಪಾಡಿ. ಯಾವ ವಿಷಯದಲ್ಲಿ ಮಗು ಹೆಚ್ಚಿನ ಮರೆವು ಹೊಂದಿರುತ್ತದೆ, ಆ ಬಗ್ಗೆ ಪಾಲಕರು ಮನೆಯಲ್ಲಿ ಪದೇ ಪದೆ ಓದಿಸುವ ಮೂಲಕ ಮಕ್ಕಳಲ್ಲಿನ ಭಯ ದೂರ ಮಾಡಿ. ಪರೀಕ್ಷೆ ಸಮೀಪಿಸಿದಾಗ ಅವರೇ ಸಿದ್ಧತೆ ಮಾಡಿಕೊಳ್ಳುತ್ತಾರೆ ಎನ್ನುವ ನಿರ್ಲಕ್ಷ್ಯ ತೆಗೆದು ಹಾಕಿ. ವರ್ಷದ ಪ್ರಾರಂಭದಿಂದಲೇ ನಿಯಮಿತ ಅಧ್ಯಯನಕ್ಕೆ ಒತ್ತು ನೀಡಿ, ಮಕ್ಕಳ ಮನಸ್ಸು ಓದುವತ್ತ ಕೇಂದ್ರೀಕರಿಸುವ ನಿಟ್ಟಿನಲ್ಲಿ ಪಾಲಕರು ಹೆಚ್ಚಿನ ಗಮನ ನೀಡಬೇಕು.

ಬದಲಾಯಿಸಿಕೊಳ್ಳಿ
ಮನೆಯಲ್ಲಿ ನಿಮ್ಮ ವರ್ತನೆ ಬದಲಿಸಿಕೊಳ್ಳಿ, ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಅವರ ಶಿಕ್ಷಣಕ್ಕಾಗಿಯೇ ನಿತ್ಯ ಒಂದು ಗಂಟೆಯನ್ನಾದರೂ ಮೀಸಲಿಡಿ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿದ್ದಲ್ಲಿ ಮಕ್ಕಳೆದುರು ಕಿತ್ತಾಡಬೇಡಿ. ಇದರಿಂದ ಮಕ್ಕಳ ಜ್ಞಾಪಕ ಶಕ್ತಿ ಕುಗ್ಗುತ್ತದೆ. ಮರೆವು ಕಡಿಮೆ ಮಾಡುತ್ತದೆ ಎನ್ನುವ ಜಾಹೀರಾತುಗಳಿಗೆ ಮರುಳಾಗಿ ಮಕ್ಕಳಿಗೆ ಏನೆಲ್ಲ ತಿನ್ನಿಸಬೇಡಿ. ಮಕ್ಕಳ ಆಸಕ್ತಿ ಗಮನಿಸಿ ವರ್ತಿಸಿ, ಕೇವಲ ಓದಿಗಷ್ಟೇ ಸೀಮಿತಗೊಳಿಸದೆ, ಪಠ್ಯೇತರ ಚಟುವಟಿಕೆ ಮೂಲಕ ಮಕ್ಕಳ ಆಸಕ್ತಿ ತಿಳಿದುಕೊಳ್ಳಿ. ಮರೆತು ಹೋಗುವ ವಿಷಯದ ಬಗ್ಗೆ ಅವರಲ್ಲಿರುವ ಬೇಜಾರು ಹೋಗಲಾಡಿಸಲು, ಹೆಚ್ಚೆಚ್ಚು ಅಧ್ಯಯನ ಮಾಡಿಸಿ, ಮಕ್ಕಳಲ್ಲಿನ ಮರೆವಿನ ಬಗ್ಗೆ ನಿರ್ಲಕ್ಷ್ಯ ಮಾಡುವುದು ಕೇವಲ ಮಗುವಿನ ಭವಿಷ್ಯಕ್ಕೆ ಮಾತ್ರವಲ್ಲ ನಿಮ್ಮ ಅಭಿವೃದ್ದಿಗೂ ತೊಡಕಾಗಲಿದೆ. ನಿಮ್ಮ ಮಕ್ಕಳಲ್ಲಿರುವ ಮರೆವನ್ನು ತೆಗೆದು ಹಾಕಲು ನೀವೇ ಪ್ರಯತ್ನಿಸಿ...

-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!