ಮಹಿಳೆ-ಮನೆ-ಬದುಕು

ಋತು ಸಂಧಿ

ಋತುಸಂಧಿ ಅಂದರೆ ಒಂದು ಋತುವಿನಿಂದ ಇನ್ನೊಂದಕ್ಕೆ ಬದಲಾಗುವ ಕಾಲ. ಆಯುರ್ವೇದದಲ್ಲಿ ಇದಕ್ಕೆ ಮಹತ್ತರ ಪ್ರಾಧಾನ್ಯತೆ. ಹಿಂದಿನ ಋತುವಿನ ಕೊನೇ ಏಳು ದಿನಗಳು ಹಾಗೂ ಹೊಸ ಋತುವಿನ ಮೊದಲ ಏಳು ದಿನಗಳನ್ನು ಋತುಸಂಧಿ ಎನ್ನುವರು. ಇದು ಒಂದು ಕಾಲದಿಂದ ಇನ್ನೊಂದಕ್ಕೆ ಬದಲಾಗುವುದು. ಇಷ್ಟು ದಿನ ಬೇಸಿಗೆ. ಈಗ ಮಳೆಗಾಲಕ್ಕೆ ಬದಲಾಗುತ್ತಿದೆ. ಈ ಸಂದರ್ಭದಲ್ಲಿ ಪರಿಸರದಲ್ಲಿ ಅನೇಕ ಬದಲಾವಣೆಗಳುಂಟಾಗುತ್ತವೆ. ಇದು ಪ್ರತಿ ವ್ಯಕ್ತಿಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
ಬದಲಾವಣೆಗಳೇನು?
    ಬೇಸಿಗೆ- ಮಳೆಗಾಲದ ಉಷ್ಣತೆಯ ಏರಿಳಿತದಲ್ಲಿ...
= ಹಸಿವಿಲ್ಲದಿರುವುದು, ಶೀತಜ್ವರ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
= ಮೊದಲ ಮಳೆಯಿಂದಾಗಿ ನೀರು ಸಂಪೂರ್ಣವಾಗಿ ಕಲುಷಿತಗೊಳ್ಳುತ್ತದೆ. ಇದು ಅತಿಸಾರ, ಜ್ವರ, ನೆಗಡಿಯ ಸಾಧ್ಯತೆ.
= ಧೂಳು ಮಿಶ್ರಿತ ಗಾಳಿಯು ಕಣ್ಣಿನ ತೊಂದರೆಗಳು, ಚರ್ಮವ್ಯಾಧಿಗಳು ಬರುತ್ತವೆ.
ಪರಿಹಾರ ಕ್ರಮಗಳು
= ಋತು ಬದಲಾವಣೆಯ ಸಂದರ್ಭದಲ್ಲಿ ಅಜೀರ್ಣದಂಥ ಬಾಧೆಗಳು ಕಾಡುವುದರಿಂದ ಆದಷ್ಟು ಸುಲಭವಾಗಿ ಜೀರ್ಣವಾಗುವಂಥ ಆಹಾರಗಳನ್ನು ಸೇವಿಸುವುದು ಒಳ್ಳೆಯದು.
= ಅತಿಯಾದ ಉಷ್ಣ, ಶೀತ, ಖಾರ, ಹುಳಿ ಪದಾರ್ಥಗಳ ಸೇವನೆ ಒಳ್ಳೆಯದಲ್ಲ.
= ಕುದಿಸಿ ಆರಿಸಿದ ನೀರನ್ನೇ ಬಳಸುವುದೊಳಿತು.
= ಜೀರ್ಣಶಕ್ತಿಯನ್ನು ವೃದ್ಧಿಸುವುದಕ್ಕೆ ಶುಂಠಿ- ಬೆಲ್ಲದ ಸೇವನೆ.
= ಜೀರಿಗೆ, ಧನಿಯಾ ಹಾಕಿ ಕುದಿಸಿದ ನೀರನ್ನು ಸೇವಿಸುವುದು.
= ಅಮೃತಬಳ್ಳಿ- ತುಳಸಿ ಎಲೆಗಳನ್ನು ಸೇವಿಸುವುದರಿಂದ ಶೀತಜ್ವರದ ಶಮನ.
= ರಕ್ತಶುದ್ಧಿ ಮಾಡುವಂಥ ಕಹಿಬೇವು, ಸೀರಿವಾ, ಮಂಜಿಷ್ಠಮೊದಲಾದವುಗಳ ಪ್ರಯೋಗ.
= ಪಿತ್ತ ಶಮನಕ್ಕಾಗಿ ಒಣದ್ರಾಕ್ಷಿ, ದನದ ತುಪ್ಪದ ಬಳಕೆ.
= ಚರ್ಮದ ಕಾಯಿಲೆಗಳನ್ನು ತಪ್ಪಿಸುವುದಕ್ಕಾಗಿ ತೈಲಾಭ್ಯಂಗ.
= ಹಸಿಶುಂಠಿ ರಸ- ಕಲ್ಲುಸಕ್ಕರೆ ಶೀತಜ್ವರ ಕಡಿಮೆ ಮಾಡುತ್ತದೆ. ಹಾಗೂ ಜೀರ್ಣಶಕ್ತಿ ಹೆಚ್ಚಿಸುತ್ತದೆ.
= ದಾಳಿಂಬೆ ಚಿಗುರು/ ರಸ ಅತಿಸಾರ, ಆಮಶಂಕೆಯನ್ನು ಕಡಿಮೆ ಮಾಡುತ್ತದೆ.
= ಜೀರಿಗೆ- ಕಾಳಜೀರಿಗೆ ಮಿಶ್ರಣದ ಕಷಾಯ ಸೇವನೆಯಿಂದ ಅತಿಸಾರ, ಜ್ವರ, ಅಜೀರ್ಣ ನಿವಾರಿಸಬಹುದು.
= ರಕ್ತಚಂದನ ತೇಯ್ದು ಚರ್ಮಕ್ಕೆ ಲೇಪಿಸುವುದರಿಂದ ಚರ್ಮವ್ಯಾಧಿ ಗುಣಪಡಿಸಬಹುದು.


-ಡಾ. ರಮ್ಯಾ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; 2 ದಿನಗಳ ಡೆಡ್‌ಲೈನ್‌!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ವಿವಿ ಫ್ರಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ