ಅಣ್ಣಾವ್ರ ಹಲವು ಚಿತ್ರಗಳ ಚಿತ್ರೀಕರಣ ಮೈಸೂರಿನಲ್ಲೇ ಆಗಿತ್ತು. ವಿಷ್ಣುವರ್ಧನ್ರಿಗಂತೂ ಮೈಸೂರಿನಲ್ಲಿ ಶೂಟಿಂಗ್ ಎಂದರೆ ಪಂಚಪ್ರಾಣ...
ಮೈಸೂರು ಅರಮನೆ ನಗರಿ ಅಷ್ಟೇ ಅಲ್ಲ, ಚಿತ್ರನಗರಿಯೂ ಹೌದು. ಪ್ರಕೃತಿದತ್ತ ಸುಂದರ ತಾಣಗಳು ಇಲ್ಲಿ ಯಥೇಚ್ಛ. ಕನ್ನಡ ಮಾತ್ರವಲ್ಲದೆ ತಮಿಳು, ತೆಲಗು, ಹಿಂದಿಯ ನೂರಾರು ಚಿತ್ರಗಳ ಶೂಟಿಂಗ್ ಇಲ್ಲಾಗಿದೆ.
ಹಿಂದೆ ಪ್ರೀಮಿಯರ್ ಸ್ಟುಡಿಯೋದಲ್ಲಿ ನಿರಂತರವಾಗಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದವು. 'ಟಿಪ್ಪುವಿನ ಖಡ್ಗ' ಧಾರಾವಾಹಿಯ ಚಿತ್ರೀಕರಣ ವೇಳೆ ನಡೆದ ಅಗ್ನಿ ದುರಂತ ಸೇರಿದಂತೆ ನಾನಾ ಕಾರಣಗಳಿಂದಾಗಿ ಈ ಸ್ಟುಡಿಯೋದಲ್ಲಿ ಚಿತ್ರೀಕರಣ ಬಂದ್ ಆಗಿ, ತನ್ನ ಕಳೆ ಕಳೆದುಕೊಂಡಿತು. ನಂತರ ಮೈಸೂರು ಹೊರಾಂಗಣ ಚಿತ್ರೀಕರಣಕ್ಕೆ ಫೇಮಸ್ ಆಯ್ತು.
ಮೈಸೂರು ನಗರದ ಸುತ್ತಮುತ್ತ ನೂರಾರು ಚಿತ್ರೀಕರಣ ತಾಣಗಳು ಇರುವುದೇ ಇದಕ್ಕೆ ಕಾರಣ. ಅಣ್ಣಾವ್ರ ಹಲವು ಚಿತ್ರಗಳ ಚಿತ್ರೀಕರಣ ಮೈಸೂರಿನಲ್ಲೇ ಆಗಿತ್ತು. ವಿಷ್ಣುವರ್ಧನ್ರಿಗಂತೂ ಮೈಸೂರಿನಲ್ಲಿ ಶೂಟಿಂಗ್ ಎಂದರೆ ಪಂಚಪ್ರಾಣ. ಇತ್ತೀಚಿನ ಬಹುತೇಕ ನಾಯಕರು, ನಿರ್ಮಾಪಕರು, ನಿರ್ದೇಶಕರು ಚಿತ್ರೀಕರಣಕ್ಕೆ ಮೈಸೂರನ್ನೇ ಇಷ್ಟಪಡುತ್ತಾರೆ. ಏಕೆಂದರೆ ಬೆಂಗಳೂರಿನಂತೆ ಇಲ್ಲಿ ಟ್ರಾಫಿಕ್ ಕಿರಿಕಿರಿ ಇಲ್ಲ. ಯಾವುದೇ ಸ್ಥಳವಾದರೂ ಹೆಚ್ಚೆಂದರೆ 15-20 ನಿಮಿಷಗಳಲ್ಲಿ ತಲುಪಬಹುದು. ಜನರೂ ಅಷ್ಟೇ. ಉತ್ತಮ ಸಹಕಾರ ನೀಡುತ್ತಾರೆ ಎಂಬುದು ಪ್ಲಸ್ ಪಾಯಿಂಟ್. ಅಮಿತಾಭ್ ಬಚ್ಚನ್, ರಜನಿಕಾಂತ್, ಪ್ರಕಾಶ್ ರೈ, ಮಣಿರತ್ನಂ ಮೊದಲಾದ ಖ್ಯಾತನಾಮರ ಚಿತ್ರಗಳನ್ನೂ ಇಲ್ಲೇ ಶೂಟಿಂಗ್ ಮಾಡಲಾಗಿದೆ.
ಇಲ್ಲಿ ಒಂದಲ್ಲ ಒಂದು ಕಡೆ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ. ಪಾರಂಪರಿಕ ಹಾಗೂ ಉತ್ತಮ ವಾಸ್ತುಶಿಲ್ಪ ಇರುವ ಕಟ್ಟಡಗಳು ಹೆಚ್ಚಿರುವುದು ಇದಕ್ಕೆ ಕಾರಣ. ಮೈಸೂರು- ಟಿ. ನರಸೀಪುರ ರಸ್ತೆಯಲ್ಲಿ ಬರುವ ದಂತವೈದ್ಯ ಡಾ. ಚಂಗಪ್ಪ ಅವರ ಫಾರಂ ಹೌಸ್ನಲ್ಲಿ ಶ್ರಾವಣಿ ಸುಬ್ರಹ್ಮಣ್ಯ, ಆಕ್ರಮಣ, ಹೃದಯವಂತ, ಮಾಸ್ಟರ್, ನಮ್ಮ ಪ್ರೀತಿಯ ರಾಮು, ಪಾರ್ಥ, ಶ್ರೀಮತಿ ಜಯಲಲಿತಾ ಸೇರಿದಂತೆ 30 ಚಿತ್ರಗಳು ಚಿತ್ರೀಕರಣ ಕಂಡಿವೆ. ಒಂದು ತಮಿಳು, 3 ಬೆಂಗಾಲಿ ಚಿತ್ರಗಳ ಚಿತ್ರೀಕರಣವೂ ನಡೆದಿದೆ.
ಮೈಸೂರು ಮಿನಿ ವಿಧಾನಸೌಧ ರಸ್ತೆಯಲ್ಲಿರುವ ಮಿಷನ್ ಬಂಗ್ಲೆಯಲ್ಲೂ ಹತ್ತಾರು ಚಿತ್ರಗಳ ಚಿತ್ರೀಕರಣ ನಡೆದಿದೆ. ಚಾಮುಂಡಿ ವಿಹಾರದಲ್ಲಿರುವ ಬೃಹತ್ ಪಾಳು ಬಂಗಲೆ ಫೈಟಿಂಗ್ ಸೀನ್ಗಳ ಚಿತ್ರೀಕರಣಕ್ಕೆ ಫೇವರಿಟ್ ಜಾಗ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 'ಜಾಕಿ', 'ಅಣ್ಣಾಬಾಂಡ್' ಸೇರಿದಂತೆ ಹಲವು ಚಿತ್ರಗಳ ಹೊಡೆದಾಟದ ದೃಶ್ಯಗಳ ಚಿತ್ರೀಕರಣ ಇಲ್ಲಿ ನಡೆದಿದೆ. ಮಾಜಿ ಉಪ ಮೇಯರ್ ಬಿ. ಸಿದ್ದರಾಜು ಅವರಿಗೆ ಸೇರಿದ ವಿದ್ಯಾರಣ್ಯಪುರಂನ ಮನೆಯಲ್ಲೂ ಇತ್ತೀಚೆಗೆ ಹೆಚ್ಚು ಚಿತ್ರಗಳ ಚಿತ್ರೀಕರಣ ನಡೆಯುತ್ತಿವೆ. ಈ ಮನೆಗಳು ಮಾತ್ರವಲ್ಲದೇ ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿರುವ ಜಯಲಕ್ಷ್ಮಿ ವಿಲಾಸ ಅರಮನೆ, ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಲಲಿತಮಹಲ್ ಹೋಟೆಲ್, ಮೈಸೂರು ಅರಮನೆ, ರಾಜವಂಶಸ್ಥರು ವಾಸಿಸುವ ಕರಿಕಲ್ಲು ತೊಟ್ಟಿಯ ಭಾಗದಲ್ಲಿ ಹೆಚ್ಚಿನ ಚಿತ್ರಗಳ ಚಿತ್ರೀಕರಣ ನಡೆದಿವೆ. ಸಿದ್ದಾರ್ಥನಗರದಲ್ಲಿ ಎಂಜಿನಿಯರ್ ಅನಂತಪದ್ಮನಾಭ ಅವರಿಗೆ ಸೇರಿದ ಮನೆಯಲ್ಲಿ ಈ ಹಿಂದೆ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಅವರು ಮಾರಾಟ ಮಾಡಿ, ಕುಟುಂಬದವರು ಬೆಂಗಳೂರಿಗೆ ಸ್ಥಳಾಂತರಗೊಂಡ ನಂತರ ಅಲ್ಲಿ ಅಪಾರ್ಟ್ಮೆಂಟ್ ಬಂದಿದೆ. ಅದೇ ರೀತಿ ವಾಣಿವಿಲಾಸ ರಸ್ತೆಯ ಕಟ್ಟಡದ ಕಥೆಯೂ ಹೌದು. ಒಂಟಿಕೊಪ್ಪಲಿನಲ್ಲಿ ಶೂಟಿಂಗ್ಗೆ ಬಳಕೆಯಾಗುತ್ತಿದ್ದ ಹಳೇ ಶೈಲಿಯ ಮನೆ ಈಗ ಮದ್ಯದ ದೊರೆಯೊಬ್ಬರ ಅತಿಥಿಗೃಹವಾಗಿದೆ.
ಮೈಸೂರಿನಲ್ಲಿ ಕಾಯಂ ಶೂಟಿಂಗ್ ಮನೆ ಎಂಬ ಪರಿಕಲ್ಪನೆ ಇಲ್ಲವಾದರೂ ಅಗತ್ಯವಿದ್ದಾಗಲೆಲ್ಲ ತಮ್ಮ ಲೊಕೇಶನ್ಗೆ ಹೊಂದಾಣಿಕೆಯಾಗುವ ಮನೆಗಳಲ್ಲಿ ಶೂಟಿಂಗ್ ನಡೆಯುತ್ತಲೇ ಇರುತ್ತವೆ.

-ಅಂಶಿ ಪ್ರಸನ್ನಕುಮಾರ್