ಮಹಿಳೆ-ಮನೆ-ಬದುಕು

ಪ್ರಕರಣದ ರಾಣಿ ಕಾರಣ ಹೆಣ್ಣೇ ಅಲ್ಲವೇ?

ನಮ್ಮ ಮನೆಯಲ್ಲಿ ತುಂಬಾ ಕಷ್ಟ, ಯಾವುದಕ್ಕೂ ಸ್ವಾತಂತ್ರ್ಯ ಅನ್ನೋದೇ ಇಲ್ಲ. ಸಾಸಿವೆ ತರಬೇಕೆಂದರೂ ಅತ್ತೆಯನ್ನು...

ನಮ್ಮ ಮನೆಯಲ್ಲಿ ತುಂಬಾ ಕಷ್ಟ, ಯಾವುದಕ್ಕೂ ಸ್ವಾತಂತ್ರ್ಯ ಅನ್ನೋದೇ ಇಲ್ಲ. ಸಾಸಿವೆ ತರಬೇಕೆಂದರೂ ಅತ್ತೆಯನ್ನು ಕೇಳಬೇಕು. ತವರಿಗೆ ಹೋಗಬೇಕೆಂದರೂ ವಾರದ ಮುಂಚೆಯೇ ಅಪ್ಪಣೆ ಪಡೆಯಬೇಕು. ನಮ್ಮ ಅತ್ತೆ ಸ್ವಲ್ಪ ಬಜಾರಿ ಎಲ್ಲರನ್ನೂ ಕಂಟ್ರೋಲ್ ಮಾಡುತ್ತಾರೆ- ಇದು ಅತ್ತೆಯ ಬಗ್ಗೆ ಸೊಸೆಯ ಉವಾಚ.
ನಮ್ಮನೆ ತೊಳೆಯಲು ಬಂದಿರುವ ಗೂಬೆ. ಅವಳ ಮುಂದೆ ನಮ್ಮದಿರಲಿ ಮಗನದೂ ಏನೂ ನಡೆಯುವುದಿಲ್ಲ. ಶಾಸ್ತ್ರ ಸಂಪ್ರದಾಯದ ಬಗ್ಗೆ ಕಾಳಜಿಯೇ ಇಲ್ಲ. ಹಾಕುವ ಬಟ್ಟೆಯ ಮೇಲೆ, ಮಾಡುವ ಖರ್ಚಿನ ಮೇಲೆ ಯಾವುದೇ ಹಿಡಿತ ಇಲ್ಲ. ನಮ್ಮನ್ನು ನೋಡಿಕೊಳ್ಳುವುದಿರಲಿ ಮುಖ ಕೊಟ್ಟು ಮಾತನಾಡಿಯೇ ಎಷ್ಟೋ ದಿನಗಳಾಗಿವೆ. ಮೊಮ್ಮಕ್ಕಳನ್ನು ನಮ್ಮ ಹತ್ತಿರಕ್ಕೂ ಬಿಡುವುದಿಲ್ಲ. ಬಂದರೆ ಇಲ್ಲ ಸಲ್ಲದ ಕ್ಯಾತೆ ತೆಗೆದು ಅವರನ್ನು ಹೊಡೆಯುತ್ತಾಳೆ. ನಮ್ಮ ಆಸ್ತಿಯ ಮುಖ ನೋಡಿ ಇನ್ನೂ ಮನೆಯಲ್ಲೇ ಇದ್ದಾಳೆ, ಇಲ್ಲದಿದ್ದರೆ ಯಾವತ್ತೋ ಬೇರೆಯಾಗುತ್ತಿದ್ದರು- ಎನ್ನುವುದು ಅತ್ತೆಯ ವರಸೆ.
ಕೆಲವರಿರುತ್ತಾರೆ, ಅವರಿಗೆ ಬೇರೆಯವರು ಏನು ಮಾಡಿದರೂ ಸರಿಯಾಗುವುದೇ ಇಲ್ಲ. ನೀವು ಏನು ಮಾಡಿದರೂ ವ್ಯಂಗ್ಯ. ಸೀರೆ ಉಟ್ಟರೂ ತಪ್ಪು ಚೂಡಿದಾರ್ ಹಾಕಿದರೂ ತಪ್ಪು. ಎಣ್ಣೆ ಹಾಕಿದರೂ ತಪ್ಪು ಹಾಕದಿದ್ದರೂ ಪ್ರಮಾದ. ಇದನ್ನೆಲ್ಲ ನಾವು ಏನೆಂದು ಕರೆಯಬೇಕು? ದೌರ್ಜನ್ಯ, ಹಿಂಸೆ ಅಥವಾ ಕಿರುಕುಳ? ನಿಜ ಹೇಳಬೇಕೆಂದರೆ ಈ ಎಲ್ಲ ಪದಗಳೂ ಸರಿಯೇ. ದೌರ್ಜನ್ಯ ಎಂದರೆ ನಮ್ಮ ಮನದಲ್ಲಿ ಮೂಡುವ ಚಿತ್ರ ದೈಹಿಕ ಹಿಂಸೆ, ಅದೂ ಪುರುಷ ಮಹಿಳೆಗೆ ನೀಡುವುದು ಎಂದುಕೊಂಡುಬಿಡುತ್ತೇವೆ. ಆದರೆ ಹಿಂಸೆಯ ನಿಜವಾದ ಅರ್ಥ ಮಾನಸಿಕ, ಲೈಂಗಿಕ ಅಥವಾ ಯಾವುದೇ ರೀತಿಯ ದೈಹಿಕ ನೋವನ್ನುಂಟುಮಾಡುವ ಕಾರ್ಯ.
ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ, ಹೆಣ್ಣು ಶಿಶು ಹತ್ಯೆ, ಅತ್ಯಾಚಾರ, ಸ್ತ್ರೀ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದು ಈ ಎಲ್ಲದರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸ್ತ್ರೀ ಪಾತ್ರ ಇದ್ದೇ ಇರುತ್ತದೆ ಮತ್ತು ತನ್ನ ಮಗ ಏನು ಮಾಡಿದರೂ ಸರಿ ಎಂದು ಬಿಂಬಿಸುವ ಭಾವ ಮನದಲ್ಲಿ ಮನೆಮಾಡಿರುತ್ತದೆ. ನೀಚ ಕೃತ್ಯವಾದ ಅತ್ಯಾಚಾರದಲ್ಲೂ ಗಂಡಸನ್ನು ಸಮರ್ಥಿಸಿಕೊಳ್ಳುವ ತಾಯಿ, ಸಹೋದರಿ, ಸಂಬಂಧಿಕಳು, ಸ್ನೇಹಿತೆಯ ಪಾತ್ರ ಹೆಚ್ಚಾಗಿರುತ್ತದೆ. ಹಾಗೆಯೇ ಮಾನಸಿಕ ಹಿಂಸೆಗಳಾದ ಬಯ್ಯುವುದು, ಭಾವನೆಗಳೊಂದಿಗೆ ಆಟ ಆಡುವುದು, ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು, ತವರು ಮನೆಗೆ ಹೋಗದಂತೆ ತಡೆಯುವುದು, ಗಂಡನ ಅನೈತಿಕ ಸಂಬಂಧ ಈ ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣಿನ ಕೊಡುಗೆಯೇ ಹೆಚ್ಚು. ವಯಸ್ಸಾದ ಅತ್ತೆಯನ್ನು ಬೀದಿಪಾಲು ಮಾಡುವ ಸೊಸೆ, ಚಿಕ್ಕ ವಯಸ್ಸಿಗೇ ಮಗಳಿಗೆ ಮದುವೆ ಮಾಡಿ ತನ್ನ ಕರ್ತವ್ಯದಿಂದ ಮುಕ್ತಿ ಪಡೆಯುವ ತಾಯಿ, ಸೊಸೆಯನ್ನು ಶತ್ರುವಿನ ಸ್ಥಾನದಲ್ಲಿಡುವ ಅತ್ತೆ, ಹೆಣ್ಣಿಗೇಕೆ ಓದು ಎಂದು ಶಾಲೆಯನ್ನೇ ಬಿಡಿಸುವ ಅಮ್ಮ... ಈ ಎಲ್ಲ ಕಾರ್ಯಗಳೂ ಹೆಣ್ಣಿಂದಲೇ.
ಹೆಣ್ಣು ತನಗಾದ ಕಹಿ ಅನುಭವಗಳ ಮೇಲೆ ಸೇಡು ತೀರಿಸಿಕೊಳ್ಳಲು, ಅಸುರಕ್ಷಿತ ಭಾವನೆಗಳಿಂದ ಸಮಾಧಾನ ಪಡೆಯಲು ಮುಂದಾಗುತ್ತಾಳೆ. ಅದು ದೌರ್ಜನ್ಯ ಎಂದು ಒಪ್ಪಿಕೊಳ್ಳಲು ಅವಳು ತಯಾರಿರುವುದಿಲ್ಲ. ದೈಹಿಕ ಹಿಂಸೆಗಳು ದೌರ್ಜನ್ಯವಾಗಿ ಕಂಡರೂ ಮಾನಸಿಕ ದೌರ್ಜನ್ಯಗಳನ್ನು ಕಡೆಗಣಿಸುವ ಹಾಗಿಲ್ಲ. ತನ್ನೊಳಗೇ ತಾನು ಮಾಡುತ್ತಿರುವುದು ಸರಿ ಎನ್ನುವ ಭಾವ ಹೋಗುವವರೆಗೂ ಈ ಸಮಸ್ಯೆಗೆ ಯಾರೂ ಪರಿಹಾರ ಸೂಚಿಸಲಾರರು. ಸೂಚಿಸಿದರೂ ಕಾರ್ಯ ರೂಪಕ್ಕೆ ತರಬೇಕಾಗಿರುವುದು ಅವಳೇ ತಾನೇ?

- ಜಮುನಾ ರಾಣಿ ಎಚ್.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

KPSC ನೇಮಕಾತಿ ಹಗರಣ: DGP ಅಲೋಕ್ ಕುಮಾರ್ ಸೇರಿ SIT ತಂಡದಿಂದ ಇಬ್ಬರು ಔಟ್; ಸುಪ್ರೀಂಕೋರ್ಟ್ ಮಹತ್ವದ ಸೂಚನೆ!

ಮಾಜಿ ಸಿಇಸಿಗಳಿಗೆ ರಾಜ್ಯಪಾಲ, ಸಚಿವ ಸ್ಥಾನದ ಗಿಫ್ಟ್: ಕಾಂಗ್ರೆಸ್ ವಿರುದ್ಧ ಹಳೆಯ ಬಹುಮಾನಗಳ ಪಟ್ಟಿ ಬಿಚ್ಚಿಟ್ಟ ಬಿಜೆಪಿ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?