ಗಂಡ ಹೆಂಡತಿ ಜಗಳ ಉಂಡುಮಲಗೋ ತನಕ (ಸಾಂದರ್ಭಿಕ ಚಿತ್ರ) 
ಮಹಿಳೆ-ಮನೆ-ಬದುಕು

ಗಂಡ ಹೆಂಡತಿ ಜಗಳ ಉಂಡುಮಲಗೋ ತನಕ

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನೋ ಮಾತು ಈಗ ಹಳೆಯದಾಗಿದೆ. ಈಗೀಗ ಗಂಡ ಹೆಂಡತಿ ಜಗಳ ಹೊಸ ರೂಪ ತಾಳಿದೆ...

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನೋ ಮಾತು ಈಗ ಹಳೆಯದಾಗಿದೆ. ಈಗೀಗ ಗಂಡ ಹೆಂಡತಿ ಜಗಳ ಹೊಸ ರೂಪ ತಾಳಿದೆ. ಕ್ಷುಲ್ಲಕ ವಿಷಯಗಳಿಗೆ ಪ್ರಾರಂಭವಾಗಿ ಅದೇ ದೊಡ್ಡದಾಗಿ ಮನೆ ದಿನನಿತ್ಯ ರಣರಂಗವಾಗುತ್ತಿದೆ. ಕೆಲವೊಮ್ಮೆ ಇದು ಡೈವೋರ್ಸ್ ವರೆಗೆ ಹೋಗೋದೂ ಇದೆ. ಜಗಳವಾಡದ ಗಂಡ ಹೆಂಡತಿಯರೇ ಇಲ್ಲ. ಪ್ರೀತಿಯಿದ್ದಲ್ಲಿ ಸಲಿಗೆಯಿರುತ್ತದೆ. ಸಲಿಗೆಯಿದ್ದಲ್ಲಿ ಜಗಳ, ನಿರೀಕ್ಷೆಗಳೂ ಇರುತ್ತವೆ. ಸಾಮಾನ್ಯವಾಗಿ ಗಂಡ ಹೆಂಡತಿಯರ ಜಗಳವಾಗಲು ಕಾರಣಗಳು ಹೀಗಿರುತ್ತವೆ-

ಹೆಂಡತಿಯ ಆರೋಪಗಳು
ಆಫೀಸಿನಿಂದ ಹೇಳಿದ ಸಮಯಕ್ಕೆ ಬರದಿರುವುದು.
ಹೆಂಡತಿಯ ಮಾತಿಗೆ ಬೆಲೆ ಕೊಡದಿರುವುದು.
ಹೆಂಡತಿಗೆ ಲೋಕಜ್ಞಾನವಿಲ್ಲ ಎಂಬ ಧೋರಣೆ.
ಬೇರೆಯವರ ಹೆಂಡತಿಗೆ ಹೋಲಿಸಿ ಅವರನ್ನು ಹೊಗಳುವುದು.
ಗೃಹಿಣಿಯಾದರೆ ಅವಳ ಸಮಯಕ್ಕೆ ಬೆಲೆ ಕೊಡದಿರುವುದು.
ಇಡೀ ದಿನ ಮನೆಯಲ್ಲಿರುತ್ತೀಯ, ಕೆಲಸ ಮಾತ್ರ ಏನೂ ಮಾಡೋದಿಲ್ಲ' ಅನ್ನೋದು.
ಪೇಪರು, ಒದ್ದೆ ಬಟ್ಟೆ ಅಲ್ಲಲ್ಲೇ ಎಸೆದು ಮನೆ ಪೂರ್ತಿ ರಂಪ ಮಾಡಿಡೋದು.
ಹೆಂಡತಿಯ ಮನೆಯವರನ್ನು ವಿನಾಕಾರಣ ಹೀಯಾಳಿಸುವುದು.
ಅಡುಗೆ ಚೆನ್ನಾಗಿದ್ದಾಗ ಪ್ರಶಂಸೆ ಮಾಡದಿರುವುದು, ಸ್ವಲ್ಪವೇ ರುಚಿ
ಹಾಳಾದರೂ ಅತಿಯಾಗಿ ತೆಗಳುವುದು.
ಮಕ್ಕಳ ಹೋಂವರ್ಕ್, ಶಾಲೆಗೆ ಹೊರಡಿಸುವುದು
ಇತ್ಯಾದಿ ಕೆಲಸಗಳಲ್ಲಿ ಸಹಾಯ ಮಾಡದೆ ಇರುವುದು.
ಉಪದೇಶ ಕೊಡುವ, ತಪ್ಪು ಹುಡುಕುವ ಅತ್ತೆ ಮಾವ.

ಗಂಡನ ಆರೋಪಗಳು
ಆಫೀಸು ಕೆಲಸವನ್ನು ಕೇವಲವಾಗಿ ನೋಡುವುದು.
ಅತಿಯಾಸೆಯ ಹೆಂಡತಿ.
ಅನವಶ್ಯಕ ಬೇರೆಯವರೊಂದಿಗೆ ಹೋಲಿಸಿಕೊಂಡು ಕೀಳರಿಮೆ ಬೆಳೆಸಿಕೊಳ್ಳುವುದು.
ಮನೆಗೆಲಸ ಮಾಡದೆ ಟಿವಿ ನೋಡೋದು, ಗಾಸಿಪ್ ಮಾಡೋದು.
ತನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ.
ತನ್ನ ಅಮ್ಮನ ಫಾಟಿ ಸಲಹೆ ಕೇಳೋದು.
ದುಂದುವೆಚ್ಚ. ಗಂಡ ಮಕ್ಕಳನ್ನು ಕಡೆಗಾಣಿಸುವುದು.
ತನ್ನ ಸಂಬಂಧಗಳಿಗೆ ತುಂಬಾ ಪ್ರಾಮುಖ್ಯತೆ,
ಗಂಡನ ಕಡೆಯವರು ಬಂದಾಗ ನಿರ್ಲಕ್ಷ.

ಪರಿಹಾರೋಪಾಯಗಳು
ಗಂಡ ಹೆಂಡತಿಯರಿಬ್ಬರೂ ಅವರವರ ಕೆಲಸಗಳಲ್ಲಿ ಸಹಾಯ ಮಾಡುವುದು. ಇಲ್ಲಿ ಸಣ್ಣ ಪುಟ್ಟ ಕೆಲಸಗಳಿಗೂ ಪ್ರಾಮುಖ್ಯತೆ ಇದೆ. ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರಿದ್ದರೆ ಇಬ್ಬರ ಸಮಯವನ್ನೂ ಗಣನೆಯಲ್ಲಿಡಬೇಕಾಗುತ್ತದೆ. ಮನೆಕೆಲಸ ಮಾಡಲು ಗಂಡಸರಿಗೆ ಕೀಳರಿಮೆ ಬೇಡ. ಈ ಕೆಲಸವನ್ನು ಹೆಂಗಸರೇ ಮಾಡಬೇಕು ಎನ್ನುವ ಭಾವನೆ ಬೇಡ.

ಹೆಂಡತಿಯ ಸಲಹೆಗಳನ್ನು ಕೇಳಿ ಅದರಂತೆ ಮಾಡುವುದರಲ್ಲಿ ತಪ್ಪೇನಿಲ್ಲ. ಅವಳ ಸಲಹೆಗಳು ಉತ್ತಮವಾಗಿರಬಹುದು. ಹೆಂಡತಿ ಕೂಡಾ ಗಂಡನ ಆಫೀಸು ಕೆಲಸ, ಅದು ಬೇಡುವ ಸಮಯ ಇವುಗಳನ್ನು ಅರಿತು ಹೊಂದಿಕೊಳ್ಳಬೇಕು. ಹೆಂಡತಿ ಇಡೀ ದಿನ ಮನೆಯಲ್ಲಿರುತ್ತಾಳೆ, ಕೆಲಸ ಮಾಡಲಿ ಎನ್ನೋ ಧೋರಣೆ ಬೇಡ. ಗಂಡ ತನ್ನ ಕೆಲಸಗಳನ್ನು ನೀಟಾಗಿ ಮಾಡಿಕೊಳ್ಳುವುದರಿಂದ ಹೆಂಡತಿಗೂ ಶ್ರಮ ಕಡಿಮೆಯಾಗುತ್ತದೆ.

ಹಾಸಿಗೆ ಇದ್ದಷ್ಟು ಕಾಲು ಚಾಚು ಗಾದೆ ನೆನಪಿಡಿ. ಗಂಡ ಹೆಂಡತಿ ಇಬ್ಬರ ಕುಟುಂಬ, ನೆಂಟರಿಷ್ಟರ ಬಗೆಗೂ ಪರಸ್ಪರ ಸಮಾನ ಗೌರವ, ಪ್ರೀತಿ. ಗಂಡ ಹೆಂಡತಿ ಇಬ್ಬರೂ ಒಬ್ಬರಿಗೊಬ್ಬರು ಒಪ್ಪಿಈ ಸಂಬಂಧವನ್ನು ಸ್ವೀಕರಿಸಿರುತ್ತಾರೆ. ಇದನ್ನು ನಿಭಾಯಿಸುವುದು ಒಂದು ಸಾಮಾಜಿಕ ಜವಾಬ್ದಾರಿ ಕೂಡ ಎಂಬ ಅರಿವಿರಲಿ.

ಪರಸ್ಪರ ಪ್ರೀತಿ ಇರಲಿ. ಪ್ರೀತಿ ಇದ್ದಾಗ ಹೊಂದಾಣಿಕೆ ಕಷ್ಟವಾಗುವುದಿಲ್ಲ. ಯಾರೂ ಪರಿಪೂರ್ಣರಲ್ಲ. ಒಬ್ಬರು ಸಿಟ್ಟುಗೊಂಡಾಗ ಇನ್ನೊಬ್ಬರು ಮೌನ, ತಾಳ್ಮೆ ವಹಿಸಿ.

-ವೀಣಾ ಅನಂತ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT