ದೇಹ ದಪ್ಪವಾಗುವುದು (ಸಾಂದರ್ಭಿಕ ಚಿತ್ರ) 
ಮಹಿಳೆ-ಮನೆ-ಬದುಕು

ಮದುವೆ ಆದ ಮೇಲೆ ಹುಡುಗಿಯರು ಯಾಕೆ ದಪ್ಪ ಆಗ್ತಾರೆ?

ಮದುವೆ ಆಗುವುದಕ್ಕೂ ದೇಹದ ಭಾರ ಹೆಚ್ಚಾಗುವುದಕ್ಕೂ ಏನಾದರೂ ಸಂಬಂಧ ಇದೆಯಾ? ಇದಕ್ಕೇನು ಕಾರಣ ಎಂದು ಕೇಳಿದರೆ...

ಮೊದಲು ನಾನು ತುಂಬಾ ಸ್ಲಿಮ್ ಆಗಿದ್ದೆ, ಮದುವೆ ಆದ ಮೇಲೆ ಇಷ್ಟೊಂದು ದಪ್ಪ ಆಗಿದ್ದು ಎಂದು ಹೇಳುವ ವಿವಾಹಿತೆ ಒಂದೆಡೆ ಹುಡುಗಿ ತೆಳ್ಳಗಿದ್ದರೆ, ಮದುವೆ ಆದ ಮೇಲೆ ದಪ್ಪ ಆಗ್ತಾಳೆ ಬಿಡಿ ಎಂದು ಹೇಳುವ ಸಂಬಂಧಿಕರು ಇನ್ನೊಂದೆಡೆ..ಇಂಥಾ ಮಾತುಗಳನ್ನು ನಾವೆಲ್ಲರೂ ಕೇಳಿರುತ್ತೇವೆ. ಮದುವೆ ಆದ ನಂತರ ಗಂಡಸರಿಗಿಂತ ಹೆಣ್ಣು ಮಕ್ಕಳು ಬೇಗನೆ ದಪ್ಪ ಆಗುತ್ತಾರೆ. ಮದುವೆ ಆಗುವುದಕ್ಕೂ ದೇಹದ ಭಾರ ಹೆಚ್ಚಾಗುವುದಕ್ಕೂ ಏನಾದರೂ ಸಂಬಂಧ ಇದೆಯಾ? ಇದಕ್ಕೇನು ಕಾರಣ ಎಂದು ಕೇಳಿದರೆ ಇಲ್ಲಿದೆ ಉತ್ತರ.

ವಿವಾಹದ ನಂತರ ನಮ್ಮ ಜೀವನ ಕ್ರಮಗಳಲ್ಲಿಯೂ ಬದಲಾವಣೆಯಾಗುತ್ತದೆ. ವಿವಾಹಕ್ಕಿಂತ ಮುಂಚೆ ನಮ್ಮ ದೇಹದ ಬಗ್ಗೆ ಹೆಚ್ಚಿನ ಗಮನವಹಿಸುತ್ತಿದ್ದವರು ವಿವಾಹದ ನಂತರ ಅದರತ್ತ ಹೆಚ್ಚಿನ ಗಮನ ಹರಿಸುವುದೇ ಇಲ್ಲ. ವಿವಾಹದ ನಂತರ ಗಂಡ ಮತ್ತು ಹೆಂಡತಿ ಒಟ್ಟಿಗೆ ಕುಳಿತು ಊಟ ಮಾಡುವಾಗ ಅದು ಪರಸ್ಪರ ಹೆಚ್ಚು ಆಹಾರ ಸೇವಿಸುವಂತೆ ಪ್ರೇರೇಪಿಸುತ್ತದೆ. ಪ್ರೀತಿಯಿಂದ ಊಟ ಮಾಡಿಸುವಾಗ ಹೆಚ್ಚು ಹೆಚ್ಚು ತಿನ್ನುವುದರಿಂದಲೇ ಮದುವೆ ಆದ ನಂತರ ದಂಪತಿಗಳು ದಪ್ಪ ಆಗುತ್ತಾರಂತೆ.

ಸ್ವಿಜರ್ ಲ್ಯಾಂಡಿನ ಬೆಸಲ್ ವಿಶ್ವವಿದ್ಯಾಲಯದ ಸೈಕಾಲಜಿ ಆರೋಗ್ಯ ವಿಭಾಗದ ಅಧ್ಯಯನ ತಂಡವೊಂದು ಅಧ್ಯಯನ ನಡೆಸಿ ತಯಾರಿಸಿದ ವರದಿಯಲ್ಲಿ ವಿವಾಹ ನಂತರ ದಪ್ಪ ಆಗುತ್ತಿರುವುದಕ್ಕೆ ಕಾರಣ ಹೇಳಲಾಗಿದೆ.

ಹೆಚ್ಚು ಹೆಚ್ಚು ಆಹಾರ ಸೇವಿಸುವುದು ಮಾತ್ರವಲ್ಲ, ವಿವಾಹಕ್ಕಿಂತ ಮುನ್ನ ಸರಿಯಾಗಿ ವ್ಯಾಯಾಮ ಮಾಡುತ್ತಿರುವವರು ನಂತರ ಅದನ್ನು ಕೈ ಬಿಟ್ಟು ಬಿಡುವುದು ಕೂಡಾ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಮದುವೆಯಾಗಿ ಮಕ್ಕಳು ಹುಟ್ಟಿದ ಮೇಲೆ ಮಕ್ಕಳು ತಿಂದು ಉಳಿಸಿದ ಆಹಾರವನ್ನು ಸೇವಿಸುವುದರಿಂದಲೂ ಅಮ್ಮಂದಿರು ದಪ್ಪಗಾಗುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT