ಮಹಿಳೆ-ಮನೆ-ಬದುಕು

ಭಾರತದಲ್ಲಿ ಹೆಚ್ಐವಿ ಸೋಂಕು ಬಾಧಿತರಲ್ಲಿ ಶೇ. 40ರಷ್ಟು ಮಹಿಳೆಯರು

Rashmi Kasaragodu
ನವದೆಹಲಿ: 2030ರ ವೇಳೆಗೆ ಭಾರತದಿಂದ ಏಡ್ಸ್ ಎಂಬ ಮಾರಕ ರೋಗವನ್ನು ತೊಲಗಿಸಲು ಎಲ್ಲ ರೀತಿಯ ಪ್ರಯತ್ನಗಳು ನಡೆದು ಬರುತ್ತಿವೆ. ಅದೇ ವೇಳೆ ಭಾರತದಲ್ಲಿ ಈಗ  ಹೆಚ್‌ಐವಿ ಸೋಂಕು ಪೀಡಿತರಲ್ಲಿ ಶೇ.40 ಕ್ಕಿಂತಲೂ ಹೆಚ್ಚು ಮಹಿಳೆಯರೇ ಇದ್ದಾರೆ ಎಂದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.
ಲೈಂಗಿಕ ಕಾರ್ಯಕರ್ತರು, ಅವಿದ್ಯಾವಂತ ಮತ್ತು ಗರ್ಭಿಣಿಯರಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದೆ. ಆದಾಗ್ಯೂ, ಕಳೆದ 5 ವರ್ಷಗಳಿಂದೀಚೆಗೆ ಹೆಚ್‌ಐವಿ ಪ್ರಕರಣಗಳಲ್ಲಿ ಶೇ. 66 ರಷ್ಟು ಇಳಿಕೆ ಕಂಡು ಬಂದಿದೆ. 2007ರಲ್ಲಿ ಹೆಚ್‌ಐವಿ ಬಾಧಿತರ ಸಂಖ್ಯೆ 22.26 ಲಕ್ಷ  ಇತ್ತು.  2015ರಲ್ಲಿ ಇದು 21. 17 ಲಕ್ಷಕ್ಕೆ ಕುಸಿದಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ನಗರ ಮತ್ತು ಹಳ್ಳಿಯಲ್ಲಿರುವ ಮಹಿಳೆಯರು ಹೆಚ್‌ಐವಿ ಪರೀಕ್ಷೆಗೊಳಗಾಗಲು ಹಿಂಜರಿಯುತ್ತಾರೆ. ಈ ಪರೀಕ್ಷೆ ಮಾಡಿಸಿಕೊಂಡರೆ ಸಮಾಜ ಏನು ಅನ್ನುವುದೋ ಎಂಬ ಭಯ ಇಲ್ಲಿ ಮಹಿಳೆಯರಿಗೆ ಇರುತ್ತದೆ. ಇದೇ ಕಾರಣದಿಂದಾಗಿ ಮಹಿಳೆಯರು ಹೆಚ್‌ಐವಿ ಪೀಡಿತರಾಗಿ ಉಳಿಯುತ್ತಾರೆ ಅಂತಾರೆ ತಜ್ಞರು.
SCROLL FOR NEXT