ವಿಶ್ವ ಮಹಿಳಾ ದಿನ

'ಫಿ-ಮೇಲ್ ಪವರ್': ಕರ್ನಾಟಕದಲ್ಲಿ 28 ಅಂಚೆ ಕಚೇರಿಗಳು ಸಂಪೂರ್ಣ ಮಹಿಳಾಮಯ!

Sumana Upadhyaya

ಬೆಂಗಳೂರು: ಅಂಚೆ ನಿರ್ದೇಶನಾಲಯದ ಆದೇಶದ ಪ್ರಕಾರ ಕರ್ನಾಟಕ ಅಂಚೆ ವಿಭಾಗ ರಾಜ್ಯದ 28 ಅಂಚೆ ಕಚೇರಿಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸಲಿದ್ದಾರೆ. 


ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಕಳೆದ ಸೋಮವಾರ ಈ ಕುರಿತು ಅಧಿಕೃತ ಘೋಷಣೆ ಹೊರಡಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ನಾಲ್ಕು ಅಂಚೆ ಕಚೇರಿಗಳು ಭಾಗಶಃ ಮಹಿಳೆಯರು ನಿರ್ವಹಿಸುತ್ತಿದ್ದಾರೆ.


ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಕರ್ನಾಟಕ ಅಂಚೆ ವೃತ್ತದ ಪ್ರಧಾನ ಅಂಚೆ ವ್ಯವಸ್ಥಾಪಕ ಚಾರ್ಲ್ಸ್ ಲೊಬೊ, ಏಪ್ರಿಲ್ ತಿಂಗಳಲ್ಲಿ ವರ್ಗಾವಣೆ ನಡೆಯುವ ಸಂದರ್ಭದಲ್ಲಿ ಸಂಪೂರ್ಣವಾಗಿ ಮಹಿಳೆಯರೇ ಇಲ್ಲದಿರುವ ಸ್ಥಳಗಳಲ್ಲಿ ಒಂದೊಂದು ಅಂಚೆ ಕಚೇರಿಗಳಲ್ಲಿ ಪೂರ್ಣವಾಗಿ ಮಹಿಳಾ ನೌಕರರನ್ನೇ ನೇಮಕ ಮಾಡಲಾಗುವುದು. ಸಂಪೂರ್ಣವಾಗಿ ಮಹಿಳಾ ನೌಕರರನ್ನು ಸಣ್ಣ ಅಂಚೆ ಕಚೇರಿಗಳಲ್ಲಿ ಮಾತ್ರ ನೇಮಿಸಬಹುದು, ದೊಡ್ಡ ಅಂಚೆ ಕಚೇರಿಗಳಲ್ಲಿ ನೇಮಿಸಿದರೆ ಅವರು ರಜೆಯಲ್ಲಿರುವಾಗ ಮತ್ತೊಬ್ಬ ಮಹಿಳಾ ನೌಕರರನ್ನು ನೇಮಿಸುವುದು ಕಷ್ಟವಾಗುತ್ತದೆ ಎಂದರು.


ಬೆಂಗಳೂರಿನಲ್ಲಿ ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್, ಯಲಹಂಕ ಸ್ಯಾಟಲೈಟ್ ಟೌನ್ ಮತ್ತು ಮಾದವನ್ ಪಾರ್ಕ್ ಅಂಚೆ ಕಚೇರಿಗಳಲ್ಲಿ ಇರುವುದು ಸಂಪೂರ್ಣವಾಗಿ ಮಹಿಳಾ ನೌಕರರು. 


ಸಂಪೂರ್ಣವಾಗಿ ಮಹಿಳಾ ನೌಕರರಿದ್ದರೆ ಕೆಲಸಕ್ಕೆ ಉತ್ತಮವಾಗುತ್ತದೆ. ಮಹಿಳೆ ಮತ್ತೊಬ್ಬ ಮಹಿಳೆಯ ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲಳು. ಕೆಲಸ ಮತ್ತು ಮನೆಯ ಜವಾಬ್ದಾರಿ ನಿರ್ವಹಿಸುವ ಬಗ್ಗೆ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾಳೆ ಎಂದು ರಾಜಾಜಿನಗರ ಪೋಸ್ಟ್ ಆಫೀಸ್ ನ ಅಂಚೆ ಸಹಾಯಕಿ ಸೌಮ್ಯ ವಿ ಅಗಡಿ ಹೇಳುತ್ತಾರೆ. 


ಕಚೇರಿಯಲ್ಲಿ ಸಂಪೂರ್ಣವಾಗಿ ಮಹಿಳೆಯರೇ ಇದ್ದರೆ ಅನುಕೂಲವಾಗುತ್ತದೆ ಎಂದು ಉಪ ಪೋಸ್ಟ್ ಮಾಸ್ಟರ್ ಟಿ ಆರ್ ರಾಧಾ ಮಣಿ ಹೇಳುತ್ತಾರೆ. 


ದಕ್ಷಿಣ ಕರ್ನಾಟಕ ವೃತ್ತದ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಎಸ್ ಕುಮಾರ್, ಅಂಚೆ ಕಚೇರಿಗಳಲ್ಲಿ ಮಹಿಳಾ ನೌಕರರು ಇರುತ್ತಾರೆ. ಒಂದು ಕಚೇರಿಯನ್ನು ಸಂಪೂರ್ಣವಾಗಿ ಮಹಿಳೆಯರೇ ನಡೆಸುವುದು ಉತ್ತಮ ನಡೆ ಎಂದರು.

SCROLL FOR NEXT