ನನ್ನ ಸ್ಫೂರ್ತಿ

ಅಮ್ಮ ನೀನೆ ನನ್ನ ದೇವರು

ಅಮ್ಮನನ್ನು ನೆನೆದಾಗೆಲ್ಲ (ನೆನೆಯುವುದೇನು ಬಂತು ಸದಾ ನನ್ನಲ್ಲಿಯೇ ಇದ್ದಾರೆ) ಈ ಹಾಡು ನೆನಪಿಗೆ ಬರುತ್ತದೆ. ನಾನು ಕೂಡ ಒಂದು ಮಗುವಿಗೆ ಅಮ್ಮನಾಗಿದ್ದರು, ನನಗೆ ನನ್ನ ಅಮ್ಮನೇ ದೇವರು...

ಅಮ್ಮ ಅಮ್ಮ ಅನ್ನೋಮಾತು ಬಂತು ಎಲ್ಲಿಂದ?

ಭೂಮಿಗೆ ಬಂದ ಮೊದಲಕಂದನ ಅಳುವ ತುಟಿಯಿಂದ

ಅಮ್ಮನನ್ನು ನೆನೆದಾಗೆಲ್ಲ(ನೆನೆಯುವುದೇನು ಬಂತು ಸದಾ ನನ್ನಲ್ಲಿಯೇ ಇದ್ದಾರೆ) ಈ ಹಾಡು ನೆನಪಿಗೆ ಬರುತ್ತದೆ. ನಾನು ಕೂಡ ಒಂದುಮಗುವಿಗೆ ಅಮ್ಮನಾಗಿದ್ದರು,ನನಗೆ ನನ್ನ ಅಮ್ಮನೇ ದೇವರು.

ನಾನು ಹೆಜ್ಜೆ ಇಡುವಹಾದಿಯಲ್ಲಿ ತಾ ಹೆಜ್ಜೆ ಇಟ್ಟು ಕಲ್ಲು ಮುಳ್ಳುಗಳು ಇದ್ದರೇ ಅದನ್ನು ತೆಗೆದು ಹಾಕಿ ನನ್ನ ಪಾದಗಳಿಗೆನೋವಾಗಬಾರದು ಎನ್ನುತ ಕಾಳಜಿ ಹೊಂದಿದ್ದವರು ನನ್ನ ಅಮ್ಮ. ಕಷ್ಟಗಳು ಏನೇ ಇದ್ದರೂ ಅದನ್ನು ತನ್ನ ಮಡಿಲಿಗೆ ಹಾಕಿಕೊಂಡು, ಆ ಹರಿದಜೋಳಿಗೆಯಿಂದ ಪ್ರೀತಿಯ ತುತ್ತನ್ನು ಮುತ್ತನ್ನು ಕೊಟ್ಟು ಬೆಳೆಸಿದ ನನ್ನ ಅಮ್ಮ ಇಂದು ಬರಿ ನೆನಪಾಗಿಉಳಿದಿದ್ದಾರೆ.

ತನ್ನ ಮನೆಯ ಎರಡುಕಂಗಳು "ಸೌಮ್ಯ"ವಾಗಿ ಮತ್ತು "ದಿವ್ಯ"ವಾಗಿ ಹರನ "ಪ್ರಸಾದ"ದಆಶೀರ್ವಾದದಲ್ಲಿ "ಗಿರಿ"ಯಂಥಹ ಕಷ್ಟಗಳು ಇದ್ದರೂ, ಆ ಕಷ್ಟಗಳಿಗೆ "ಜಾ ಜಾ"ಎನ್ನುತ್ತಾ ಗಿರಿಜಮ್ಮನಾದರು.

ನನಗೆ ಕೊಂಚ ಗೊಂದಲಉಂಟಾದರೂ ಅಮ್ಮನನ್ನು ನೆನೆಸಿಕೊಂಡರೆ ಸಾಕು ಆ ಗೊಂದಲಗಳು ರವಿಯನ್ನು ಕಂಡ ಮಂಜಿನಂತೆ ಕಾಣದಾಗುತ್ತದೆ.ಇಂದು ನನ್ನ ಸಾಧನೆ ಏಳಿಗೆ ಏನೇ ಇದ್ದರೂ ಅದು ಅಮ್ಮನ ಕಾಣಿಕೆ..

ಅದಕ್ಕೆ ನನಗೆ ದೇವರುಬಂದು ಏನು ವರ ಬೇಕು ಎಂದು ಕೇಳಿದರೆ ಇದೆ ತಾಯಿ ನನಗೆ ಎಲ್ಲಾ ಜನ್ಮಕ್ಕೂ ತಾಯಿ ದೇವರಾಗಿ ಬರಲಿ ಅಂದುಕೇಳುವೆ.

ಅಮ್ಮ ನೀನೆ ನನ್ನದೇವರು!!!

 -ಸೌಮ್ಯಹೆಗ್ಗಡೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಚಿಕ್ಕಬಳ್ಳಾಪುರ: ಗಂಗಮ್ಮ ದೇವಿ ವಿಗ್ರಹದ ಮೇಲೆ ಕಾಲಿಟ್ಟು ಮಹಿಳೆಯರ ಸ್ನಾನ, Video ವೈರಲ್!

Konaseema ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; ಮಾಲೀಕ ಸೇರಿ ಕನಿಷ್ಠ 7 ಸಾವು, ಹಲವರಿಗೆ ಗಂಭೀರ ಗಾಯ

ಮೊದಲು 60 ಕೋಟಿ ಠೇವಣಿಯಿಡಿ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿದೇಶ ಪ್ರವಾಸಕ್ಕೆ ಬಾಂಬೆ ಹೈಕೋರ್ಟ್ ನಿರ್ಬಂಧ!

ಪಾಕಿಸ್ತಾನದಲ್ಲಿ ರಕ್ತದೋಕುಳಿ: ಎನ್‌ಕೌಂಟರ್‌ ವೇಳೆ Pakistan ಲೆಫ್ಟಿನೆಂಟ್ ಕರ್ನಲ್, ಮೇಜರ್ ಸೇರಿದಂತೆ 11 ಪಾಕ್ ಸೈನಿಕರ ಹತ್ಯೆ

SCROLL FOR NEXT