ಕೌಟುಂಬಿಕ ನ್ಯಾಯಾಲಯಗಳನ್ನು ಸಂಪರ್ಕಿಸುವ ಮಹಿಳೆಯರಿಗೆ ಕೌಟುಂಬಿಕ ವಿವಾದಗಳಲ್ಲಿ ಸಮಾನ ನ್ಯಾಯ ಹಾಗೂ ಸೂಕ್ತ ಪರಿಹಾರ ಪಡೆಯಲು ಸಹಾಯ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕೌಟುಂಬಿಕ ನ್ಯಾಯಾಲಯಗಳಲ್ಲಿ ಮಹಿಳಾ ಸಹಾಯ ವೇದಿಕೆ ಸ್ಥಾಪಿಸಿದೆ. ಬೆಂಗಳೂರು, ದಾವಣಗೆರೆ, ರಾಯಚೂರು, ಗುಲ್ಬರ್ಗಾ, ಬಿಜಾಪುರ, ಬೆಳಗಾಂ ಹಾಗೂ ಮೈಸೂರುನಲ್ಲಿರುವ ಕೌಟುಂಬಿಕ ನ್ಯಾಯಾಲಯಗಳಲ್ಲಿ ಮಹಿಳಾ ಸಹಾಯ ವೇದಿಕೆ ಪ್ರಾರಂಭಗೊಂಡಿದೆ.
ಸಂಪರ್ಕದ ಮಾರ್ಗದರ್ಶನ
- ಯಾವುದೇ ನೊಂದ ಮಹಿಳೆ ಮಹಿಳಾ ಸಹಾಯ ವೇದಿಕೆಯನ್ನು ಸಂಪರ್ಕಿಸಬಹುದು. ವೇದಿಕೆಯಲ್ಲಿ ಲಭ್ಯವಿರುವ ಸೌಲಭ್ಯಗಳು ಉಚಿತವಾಗಿದ್ದು, ಯಾವುದೇ ಶುಲ್ಕ ಇತ್ಯಾದಿಗಳನ್ನು ಪಾವತಿಸಬೇಕಾಗಿಲ್ಲ. ಅಲ್ಲದೇ ಸಹಾಯಕ್ಕಾಗಿ ಸಂಪರ್ಕಿಸುವವರ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ.
- ಮಹಿಳೆಯರಿಗೆ ಹಕ್ಕುಗಳ ಮಾಹಿತಿ ನೀಡಲಿದೆ.
- ನೊಂದ ಮಹಿಳೆ ಸಮಸ್ಯೆಗಳ ಪರಿಹಾರಕ್ಕಾಗಿ ಎನ್ ಜಿಒ ಅಥವಾ ಇತರ ಸರ್ಕಾರಿ ಯೋಜನೆಗಳ ನೆರವು ಪಡೆಯಲು ತಿಳುವಳಿಕೆ ಹಾಗೂ ಸಂಸ್ಥೆಗಳನ್ನು ಸಹಕರಿಸಲಿದೆ.
ದಾವೆ ಹೂಡಲು ಸಹಾಯ
- ವಿವಿಧ ಕಾಯಿದೆಗಳಡಿಯಲ್ಲಿ ಲಭ್ಯವಿರುವ ಪರಿಹಾರಗಳ ಮಾಹಿತಿ
- ಸಾಕ್ಷಿ ಪುರಾವೆಗಳನ್ನು ಹೊಂದಿಸಲು ಸಹಾಯ
- ಉಚಿತ ಕಾನೂನು ನೆರವನ್ನು ಪಡೆಯಲು ಸಹಾಯ
(ಮಹಿಳಾ ಆಯೋಗದಿಂದ ಪಡೆದ ಮಾಹಿತಿ)
ಹೆಚ್ಚಿನ ಮಾಹಿತಿಗಾಗಿ :
ದೂರವಾಣಿ: 080-22216485
ಇಮೇಲ್: kscwbang@yahoo.co.in
-ಮೈನಾಶ್ರೀ.ಸಿ