ನ್ಯೂಯಾರ್ಕ್: ಫೋಬ್ರ್ಸ್ ರಚಿಸಿರುವ ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿನ ನೂರು ಶ್ರೀಮಂತರ ಪಟ್ಟಿಯಲ್ಲಿ ವಿಪ್ರೊ ಕಂಪನಿ ಚೇರ್ಮನ್ ಅಜೀಂ ಪ್ರೇಮ್ಜಿ ಮತ್ತು ಎಚ್‍ಸಿಎಲ್ ಸಂಸ್ಥಾಪಕ ಶಿವನಾಡರ್ ಸೇರಿದಂತೆ ನಾಲ್ವರು ಇದ್ದಾರೆ.
ಈ ಪಟ್ಟಿಯಲ್ಲಿ ಅಜೀಂ ಪ್ರೇಮ್ಜಿ 13ನೇ ಸ್ಥಾನದಲ್ಲಿದ್ದರೆ ಶಿವನಾಡರ್ 14ನೇ ಸ್ಥಾನದಲ್ಲಿದ್ದಾರೆ. ಸಿಂಪೋನಿ ಟೆಕ್ನಾಲಜಿ ಗ್ರೂಪ್‍ನ ರೊಮೇಶ್ ವಾಧ್ವಾನಿ ಮತ್ತು ಸಿಂಟೆಲ್ ಕಂಪನಿಯ ಭರತ್ ದೇಸಾಯಿ ಈ ಪಟ್ಟಿಯಲ್ಲಿರುವ ಇತರ ಇಬ್ಬರು ಭಾರತೀಯ ಮೂಲದವರು. ವಾಧ್ವಾನಿ 73 ಮತ್ತು ದೇಸಾಯಿ 82ನೇ ಸ್ಥಾನದಲ್ಲಿದ್ದಾರೆ.