ವಿದೇಶ

ಒಸಾಮ ಜಾಗ ತುಂಬಲಿದ್ದಾನೆ ಪುತ್ರ ಹಮ್ಜಾ?

Rashmi Kasaragodu

ಲಂಡನ್  : ಅಲ್‍ಖೈದಾ ಉಗ್ರ ಒಸಾಮ ಬಿನ್ ಲಾಡೆನ್ ಜಾಗವನ್ನು ಆತನ ಪುತ್ರ ತುಂಬುತ್ತಾನಾ? ಅಲ್‍ಖೈದಾ ಬಿಡುಗಡೆ ಮಾಡಿದ ಹೊಸ ಆಡಿಯೋ ಸಂದೇಶವನ್ನು ನಂಬುವುದಾದರೆ ಹೌದು. ಅಮೆರಿಕದ ಸೀಲ್ ದಾಳಿಯಲ್ಲಿ ಹತ್ಯೆಗೀಡಾದ ಲಾಡೆನ್ ಪುತ್ರ ಹಮ್ಜಾ ಈಗ ಅಪ್ಪನ ದಾರಿಯಲ್ಲೇ ನಡೆಯುವಂತೆ ಕಾಣುತ್ತಿದೆ. ಅಪ್ಪನ ರೀತಿಯಲ್ಲೇ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಆತ ಭಯೋತ್ಪಾದಕರಿಗೆ ಕರೆ ನೀಡಿದ್ದಾನೆ. ಉಗ್ರ ಚಟುವಟಿಕೆಗಳ ಮೇಲೆ ಕಣ್ಣಿಡುವ ಇಂಟೆಲಿಜೆನ್ಸ್ ಗ್ರೂಪ್ ಎಸ್‍ಐಟಿಇನ ನಿರ್ದೇಶಕಿ ರಿಟಾ ಕಜ್ಜ್ ಪ್ರಕಾರ, ಹಮ್ಜಾ ನೆರವಿನೊಂದಿಗೆ ಅಲ್ ಖೈದಾ ತನ್ನ ಮಕ್ಕಾಗಿರುವ ಜನಪ್ರಿಯತೆಯನ್ನು ಮರಳಿಗಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಒಸಾಮ ಪುತ್ರ ಉಗ್ರ ಸಂಘಟನೆಯ ಭವಿಷ್ಯದ ನಾಯಕನಾಗಬೇಕೆಂದು ಅಲ್‍ಖೈದಾ ಬಯಸುತ್ತಿದೆ. ಅಪ್ಪನ ಜತೆಗೆ ಆತ್ಮೀಯನಾಗಿದ್ದ 24 ವರ್ಷದ ಹಮ್ಜಾ  ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದಂತೆ ಕಾಣಿಸುತ್ತಿದೆ. ಒಸಾಮ ಹತ್ಯೆ ಬಳಿಕ ಅಲ್‍ಖೈದಾ ನಾಯಕತ್ವದ ಕೊರತೆ ಎದುರಿಸುತ್ತಿದೆ. ಅಲ್‍ಖೈದಾದಲ್ಲಿ ಗುರುತಿಸಿಕೊಂಡವರೆಲ್ಲ ಈಗ ಐಎಸ್‍ಐಎಸ್‍ನತ್ತ ವಾಲುತ್ತಿದ್ದಾರೆ. ಅಲ್‍ಖೈದಾದ ಭಾಗವಾಗಿರುವ ತಾಲಿಬಾನ್ ಸಂಘಟನೆ ಕೂಡ ಈಗ ದುರ್ಬಲವಾಗುತ್ತಿ ದೆ. ಇಂಥ ಪರಿಸ್ಥಿತಿಯಲ್ಲಿ ಅಲ್‍ಖೈದಾಗೆ ಹಮ್ಜಾ ಆಶಾಕಿರಣವಾಗಿ ಕಾಣುತ್ತಿದ್ದಾನೆ.
ಅಲ್‍ಖೈದಾ ಬಿಡುಗಡೆ ಮಾಡಿರುವ ಟೇಪ್‍ನಲ್ಲಿ ಉಗ್ರ ಹಮ್ಜಾ , ಬಾಗ್ದಾದ್, ಕಾಬೂಲ್, ಗಾಜಾದಲ್ಲಿ ನಡೆಸುತ್ತಿರುವ ಹೋರಾಟವನ್ನು ವಾಷಿಂಗ್ಟನ್, ಲಂಡನ್, ಪ್ಯಾರಿಸ್ ಹಾಗೂ ಟೆಲ್‍ಅವೀವ್‍ನತ್ತತಿರುಗಿಸಿ ಎಂದು ಅಂತಾರಾಷ್ಟ್ರೀಯ ಭಯೋತ್ಪಾದಕರಿಗೆ ಕರೆ ನೀಡಿದ್ದಾನೆ. ಮೂಲಗಳ ಪ್ರಕಾರ ಈ ಆಡಿಯೋ ಟೇಪ್ ಅನ್ನು ಜೂನ್ ತಿಂಗಳಲ್ಲಿ ರೆಕಾರ್ಡ್ ಆಗಿತ್ತು.


SCROLL FOR NEXT