ಅಮ್ಮನ ತೋಳಲ್ಲಿ ಸುರಯ್ಯಾ 
ವಿದೇಶ

ಅಮ್ಮನ ಗರ್ಭದಲ್ಲಿರುವಾಗ ಗುಂಡು ತಾಗಿತು; ಪವಾಡ ಸದೃಶವಾಗಿ ಬದುಕಿದ ಪಾಪು

ಅಮ್ಮನ ಗರ್ಭದಲ್ಲಿರುವಾಗ ಅಮ್ಮನ ಹೊಟ್ಟೆಗೇ ಗುಂಡು ತಗಲಿತ್ತು. ಆದರೆ ಹೊಟ್ಟೆಯಲ್ಲಿದ್ದ ಪಾಪು ಪವಾಡ ಸದೃಶವಾಗಿ ಬದುಕುಳಿದಿದೆ...

ಢಾಕಾ: ಅಮ್ಮನ ಗರ್ಭದಲ್ಲಿರುವಾಗ ಅಮ್ಮನ ಹೊಟ್ಟೆಗೇ ಗುಂಡು ತಗಲಿತ್ತು. ಆದರೆ ಹೊಟ್ಟೆಯಲ್ಲಿದ್ದ ಪಾಪು ಪವಾಡ ಸದೃಶವಾಗಿ ಬದುಕುಳಿದಿದೆ.

ಬಾಂಗ್ಲಾದೇಶದ ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಮಗು ಜನಿಸಿದ್ದು, ಮಗುವಿಗೆ ಸುರಯ್ಯಾ ಎಂದು ಹೆಸರಿಡಲಾಗಿದೆ.

ಅಮ್ಮನ ಹೊಟ್ಟೆ ಹೊಕ್ಕ ಗುಂಡು ಸುರಯ್ಯಾಳ ಕೈಗೆ ತಾಕಿ, ಕಣ್ಣಿಗೂ ಗಾಯವನ್ನುಂಟು ಮಾಡಿತ್ತು. ಮಗು ಬದುಕುಳಿಯಲ್ಲ ಎಂಬ ಭಯವಿದ್ದರೂ, 23 ದಿನಗಳ ನಂತರ ಸುರಯ್ಯಾ ಪವಾಡ ಸದೃಶ ಎಂಬಂತೆ ಕಣ್ಣು ತೆರೆದಿದ್ದಾಳೆ.  ಕಳೆದ 23 ದಿನಗಳಿಂದ ಸುರಯ್ಯಾಳನ್ನು ಐಸಿಯುನಲ್ಲೇ ಇಟ್ಟು ನಿಗಾ ವಹಿಸಲಾಗಿತ್ತು.

ಬಾಂಗ್ಲಾದೇಶದಲ್ಲಿ ರಾಜಕೀಯ ಪಕ್ಷಗಳ ನಡುವಿನ ಸಂಘರ್ಷ ನಡೆಯುತ್ತಿದ್ದ ವೇಳೆ ನಜ್ಮಾ ಬೇಗಂ ಎಂಬಾಕೆಯ ಹೊಟ್ಟೆಗೆ ಗುಂಡು ತಾಗಿತ್ತು. ನಜ್ಮಾ ಆಗ ಎಂಟು ತಿಂಗಳ ಗರ್ಭಿಣಿ. ತಕ್ಷಣವೇ ನಜ್ಮಾಳನ್ನು ತುರ್ತು ಸಿಸೇರಿಯನ್ ಗೊಳಪಡಿಸಿ ಮಗುವನ್ನು ಹೊರ ತೆಗೆಯಲಾಗಿತ್ತು. ಆ ಶಸ್ತ್ರಕ್ರಿಯೆ ಮೂರು ಗಂಟೆಗಳ ಕಾಲ ನಡೆದಿತ್ತು. ಆದರೆ ಮಗು ಬದುಕುಳಿಯುವ ಬಗ್ಗೆ ವೈದ್ಯರಿಗೂ ಧೈರ್ಯವಿರಲಿಲ್ಲ. ತೀವ್ರ ನಿಗಾ ಘಟಕದಲ್ಲಿ ಮಗುವನ್ನು ಇರಿಸಿ, ಇದೀಗ 23 ದಿನಗಳ ನಂತರ ಮಗು ಸುರಯ್ಯಾ ಪ್ರಾಣಾಪಾಯದಿಂದ ಪಾರಾಗಿ ಎಲ್ಲರ ಖುಷಿಗೆ ಕಾರಣಳಾಗಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ