ವಿದೇಶ

3ನೇ ಅತಿದೊಡ್ಡ ಅಣ್ವಸ್ತ್ರಾಗಾರ ಹೊಂದಲಿದೆಯೇ ಪಾಕ್?

Vishwanath S
ಇಸ್ಲಾಮಾಬಾದ್: ಭಾರತದ ಬಗ್ಗೆ ಪಾಕ್‍ಗೆ ತೀವ್ರ ಭಯ ಕಾಡುತ್ತಿದೆಯೇ? ಹೌದು. ಭಾರತಕ್ಕೆ ಹೆದರಿ ಪಾಕಿಸ್ತಾನವು ಅಣ್ವಸ್ತ್ರಗಳ ಅಭಿವೃದ್ಧಿಯಲ್ಲಿ ತೊಡಗಿದೆ. 
ಇನ್ನು ಒಂದೇ ದಶಕದಲ್ಲಿ ಪಾಕಿಸ್ತಾನವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಅಣ್ವಸ್ರಗಾರವನ್ನು ಹೊಂದಿದ ರಾಷ್ಟ್ರವಾಗುವ ಸಾಧ್ಯತೆಯಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಜತೆಗೆ, ಇದು ಭಾರತಕ್ಕೆ ಆತಂಕಕಾರಿ ಬೆಳವಣಿಗೆ ಎಂದೂ ಹೇಳಿದೆ. ಪಾಕಿಸ್ತಾನವು ವರ್ಷಕ್ಕೆ 20ರಷ್ಟು ಅಣ್ವಸ್ತ್ರ ಸಿಡಿತಲೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮುಂದಿನ 10 ವರ್ಷಗಳಲ್ಲಿ ಅಣ್ವಸ್ತ್ರಗಳ ಸಂಖ್ಯೆ 350 ದಾಟಲಿದೆ. 
ಅಮೆರಿಕ ಮತ್ತು ರಷ್ಯಾ(ತಲಾ ಒಂದು ಸಾವಿರ) ಹೊರತುಪಡಿಸಿದರೆ ಬೇರಾವ ದೇಶದಲ್ಲೂ ಇಷ್ಟೊಂದು ಅಣ್ವಸ್ತ್ರಗಳಿಲ್ಲ. ಪ್ರಸ್ತುತ ಭಾರತವು 100 ಅಣ್ವಸ್ತ್ರಗಳನ್ನು ಹೊಂದಿದ್ದರೆ, ಪಾಕ್  ಬಳಿ 120 ಇದೆ. ಆದರೆ, ಭಾರತದಲ್ಲಿ ಅಣ್ವಸ್ತ್ರ ತಯಾರಿಸಲು ಅಗತ್ಯವಿರುವ ಪ್ಲುಟೋನಿಯಂ ಸಾಕಷ್ಟಿದೆ. ಪಾಕ್‍ನಲ್ಲಿಲ್ಲ ಎಂದೂ ಹೇಳಿದೆ.
SCROLL FOR NEXT