ವಿದೇಶ

ಮೋದಿ-ಷರೀಫ್ ಭೇಟಿ ಉದ್ವಿಗ್ನತೆ ತಗ್ಗಿಸಲಿದೆ: ಪಾಕ್ ರಕ್ಷಣಾ ಸಚಿವ

Lingaraj Badiger

ಕರಾಚಿ: ಪ್ಯಾರಿಸ್‌ನಲ್ಲಿ ಭಾರತ-ಪಾಕಿಸ್ತಾನ ಪ್ರಧಾನಿಗಳ ಭೇಟಿ ದಕ್ಷಿಣ ಏಷ್ಯಾದಲ್ಲಿ ಉಂಟಾಗಿದ್ದ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಪಾಕ್ ರಕ್ಷಣಾ ಸಚಿವ ಖವಜಾ ಮೊಹಮ್ಮದ್ ಆಸಿಫ್ ಅವರು ಹೇಳಿದ್ದಾರೆ.

'ಎರಡು ಅಣ್ವಸ್ತ್ರ ಹೊಂದಿರುವ ದೇಶಗಳ ನಡುವಿನ ಉದ್ವಿಗ್ನತೆ ಇಡೀ ಜಗತ್ತಿನಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ ಉಪಖಂಡದಲ್ಲಿ ನಿಸ್ಸಂಶಯವಾಗಿಯೂ ಶಾಂತಿ ಕಾಪಾಡುವುದು ನಮ್ಮ ಮೊದಲ ಆಯ್ಕೆ' ಎಂದು ಆಸಿಫ್ ಹೇಳಿರುವುದಾಗಿ ಡಾನ್ ವರದಿ ಮಾಡಿದೆ.

ಹವಾಮಾನ ಬದಲಾವಣೆ ಅಥವಾ ಜಾಗತಿಕ ತಾಪಮಾನ ಏರಿಕೆ ಕುರಿತ ವಿಶ್ವಸಂಸ್ಥೆಯ 21ನೇ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ನವಾಜ್ ಷರೀಫ್ ಹಸ್ತಲಾಘವ ಮಾಡಿ, ಒಂದೇ ಸೋಫಾದಲ್ಲಿ ಕುಳಿತು ಚರ್ಚಿಸಿದ್ದರು. ಆದರೆ ಉಭಯ ನಾಯಕರ ಮಾತುಕತೆಯ ವಿವರ ಇನ್ನೂ ಲಭ್ಯವಾಗಿಲ್ಲ.

SCROLL FOR NEXT