ವಿದೇಶ

ಉಗ್ರರಿಗೆ ಸುರಕ್ಷಿತ ಸ್ಥಳ ಸಿಗದಂತೆ ನೋಡಿಕೊಳ್ಳುವ ಅಗತ್ಯ ಇದೆ: ಸುಷ್ಮಾ

Lingaraj Badiger

ಇಸ್ಲಾಮಾಬಾದ್: ಅಫ್ಘಾನಿಸ್ತಾದಲ್ಲಿ ಭಯೋತ್ಪಾದನೆಯ ತೀವ್ರತೆ ಮತ್ತು ವ್ಯಾಪ್ತಿ ಎರಡೂ ಬೆಳೆದಿದೆ. ಇಂತಹ ಸಂದರ್ಭದಲ್ಲಿ ಅಂತರಾಷ್ಟ್ರೀಯ ಸಮುದಾಯ, ಉಗ್ರಗಾಮಿ ಪಡೆಗಳು ಯಾವುದೇ ಹೆಸರಿನಲ್ಲಿ ಸುರಕ್ಷಿತ ಸ್ಥಾನ ಹುಡುಕಿಕೊಳ್ಳದಂತೆ ನೋಡಿಕೊಳ್ಳುವ ಅಗತ್ಯ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.

ಇಂದು ಆರ್ಟ್ ಆಫ್ ಏಷ್ಯಾ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುಷ್ಮಾ, ಅಫ್ಗಾನಿಸ್ತಾನದ ಒಗ್ಗಟ್ಟು ಮತ್ತು ಭದ್ರತೆಗೆ ಜಾಗತಿಕ ಸಮುದಾಯದ ಬೆಂಬಲದ ಅಗತ್ಯ ಇದೆ ಮತ್ತು ಭಾರತ ಸಹ ಅಫ್ಘಾನ್ ಸರ್ಕಾರದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲು ಸಹಕಾರ ನೀಡಲು ಸಿದ್ಧವಿದೆ ಎಂದರು.

ಉಗ್ರರ ಚಟುವಟಿಕೆ ತಡೆಯುವಲ್ಲಿ ಅಫ್ಘಾನಿಸ್ತಾನ ರಾಷ್ಟ್ರೀಯ ಭದ್ರತಾ ಪಡೆ ಮತ್ತು ಅಫ್ಗಾನ್ ಜನತೆಯ ಯತ್ನ ಮೆಚ್ಚುವಂತದ್ದು ಎಂದು ಸುಷ್ಮಾ ಹೇಳಿದರು.

ಇದೇ ವೇಳೆ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ವೃದ್ಧಿಗೆ ಪರಿಪಕ್ವತೆ ಮತ್ತು ಆತ್ಮ ವಿಶ್ವಾಸ ತೋರಿಸಲು ಇದು ಸಕಾಲ ಎಂದು ಸುಷ್ಮಾ ಹೇಳಿದರು. ಅಲ್ಲದೆ ಈ ಸಂಬಂಧ ಉಭಯ ದೇಶಗಳು ಪರಸ್ಪರ ಸ್ನೇಹದ ಹಸ್ತ ಚಾಚಬೇಕು ಎಂದರು.

SCROLL FOR NEXT