ಲೀ ಬರ್ಗೆಟ್: ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿರುವ ಇಂಗಾಲ ಹೊರಸೂಸುವಿಕೆ ಮಟ್ಟ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವದ 195 ರಾಷ್ಟ್ರಗಳು ಮಹತ್ವದ ಹೆಜ್ಜೆಯಿಟ್ಟಿವೆ.
ಪ್ಯಾರಿಸ್ ನ ವಿಶ್ವತಾಪ ಶೃಂಗದಲ್ಲಿ ಶನಿವಾರ ಹವಾಮಾನ ಒಪ್ಪಂದದ ಕರಡನ್ನು ಬಿಡುಗಡೆ ಮಾಡಲಾಗಿದ್ದು, ಈ ಒಪ್ಪಂದಕ್ಕೆ ಅಂಗೀಕಾರ ದೊರೆತಿದೆ. ಭೂಮಿಯ ತಾಪಮಾನ 2 ಡಿಗ್ರಿ ಮೀರದಂತೆ ಕಾಯ್ದುಕೊಳ್ಳುವುದು. 1.5 ಡಿಗ್ರಿಗೆ ಮಿತಿಗೊಳಿಸಲು ಶ್ರಮಿಸುವುದು, ಬಡ, ಅಭಿವೃದ್ಧಿಶೀಲ ದೇಶಗಳ ನೆರವಿಗೆಂದು ಸ್ಥಾಪಿಸಲಾಗಿರುವ ಹಸಿರು ನಿಧಿಗೆ ವಾರ್ಷಿಕ 100 ಶತಕೋಟಿ ಡಾಲರ್ ನೀಡಲು ಶ್ರೀಮಂತ ದೇಶಗಳ ಒಪ್ಪಿಗೆ ಸೇರಿದಂತೆ ಅನೇಕ ಅಂಶಗಳು ಕರಡಿನಲ್ಲಿದೆ. ಇಡೀ ಪ್ಯಾರೀಸ್ ಒಪ್ಪಂದ ಜಾಗತಿಕ ಕಾನೂನು ಚೌಕಟ್ಟಿಗೆ ಒಳಪಟ್ಟಿರಲಿದೆ.