ವಿದೇಶ

ಲಂಡನ್ ನಲ್ಲಿ 90ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಭಾರತೀಯ ಮೂಲದ ದಂಪತಿ

Sumana Upadhyaya

ಲಂಡನ್‌: ದೀರ್ಘಾಯುಷಿಗಳಾಗಿ ಬದುಕಿರುವವರನ್ನು ನಾವು ಅಲ್ಲಲ್ಲಿ ಕೇಳುತ್ತೇವೆ. ಅದೇ ದಂಪತಿಯಾಗಿ ಹತ್ತಿರತ್ತಿರ ಶತಮಾನದವರೆಗೆ ಬಾಳುವುದು ನಿಜಕ್ಕೂ ಪುಣ್ಯವೇ. ಭಾರತೀಯ ಮೂಲದ ಲಂಡನ್ ನಲ್ಲಿ ವಾಸಿಸುತ್ತಿರುವ ದಂಪತಿ ತಮ್ಮ 90 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.ಬಹುಶಃ ಇವರು ವಿಶ್ವದ ಅತಿ ಹಿರಿಯ ದಂಪತಿ ಇರಬಹುದು.

ಭಾರತೀಯ ಮೂಲದ 110 ವರ್ಷದ ಕರಂ ಹಾಗೂ 103 ವರ್ಷದ ಕಾರ್ತಾರಿ ಚಾಂದ್‌ ಲಂಡನ್‌ನಲ್ಲಿ ನಿನ್ನೆ ಖುಷಿಯಿಂದ 90ನೇ ವರ್ಷದ ವಿವಾಹ ಮಹೋತ್ಸವವನ್ನು ಆಚರಿಸಿಕೊಂಡರು. ಪಂಜಾಬ್‌ ಮೂಲದ ಇವರು ಭಾರತದಲ್ಲಿ ಬ್ರಿಟಿಷ್ ಆಡಳಿತಾವಧಿಯಲ್ಲಿ 1925 ಡಿಸೆಂಬರ್ 11ರಂದು ಪಂಜಾಬಿ ಸಂಪ್ರದಾಯದಂತೆ ವಿವಾಹವಾಗಿದ್ದರು. 40 ವರ್ಷಗಳ ನಂತರ 1965ರಲ್ಲಿ ಇಂಗ್ಲೆಂಡ್‌ಗೆ ವಲಸೆ ಬಂದಿದ್ದರು.

ಪ್ರಸ್ತುತ ಲಂಡನ್ ನ ವೆಸ್ಟ್‌ ಯಾರ್ಕ್‌ಶೈರ್‌ ಪ್ರಾಂತ್ಯದ ಬ್ರಾಡ್‌ಫೋರ್ಡ್‌ನಲ್ಲಿ ವಾಸಿಸುತ್ತಿರುವ ದಂಪತಿಗೆ 8 ಜನ ಮಕ್ಕಳು, 27 ಮಂದಿ ಮೊಮ್ಮಕ್ಕಳು, 23 ಮಂದಿ ಮರಿ ಮೊಮ್ಮಕ್ಕಳು ಇದ್ದಾರೆ. ಅವರೀಗ ತಮ್ಮ ಕಿರಿಯ ಪುತ್ರ ಪೌಲ್ ಮತ್ತು ಅವರ ಕುಟುಂಬದವರ ಜೊತೆ ವಾಸಿಸುತ್ತಿದ್ದಾರೆ. ಯಾವುದೇ ಜಗಳಗಳನ್ನು ಮಾಡದೆ, ಹೊಂದಾಣಿಕೆಯಿಂದ ಬದುಕುವುದೇ ಸುಖಿ ಸಂಸಾರದ ಗುಟ್ಟು ಎನ್ನುತ್ತಾರೆ ಈ ದಂಪತಿ.

SCROLL FOR NEXT