ರಿಯಾದ್: ಸೌದಿ ಅರೇಬಿಯಾದಲ್ಲಿ ಮಹಿಳೆಯರು ಭಾನುವಾರ ಮೊದಲ ಜಯದ ಸಂಭ್ರಮವನ್ನು ಕಂಡರು.
ಇಲ್ಲಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮತ್ತು ಸ್ಪರ್ಧಿಸುವ ಅವಕಾಶ ನೀಡಲಾಗಿದ್ದು, ಆರಂಭಿಕ ಫಲಿತಾಂಶದ ಪ್ರಕಾರ 20 ಮಂದಿ ಮಹಿಳೆಯರು ಜಯ ಸಾಧಿಸಿದ್ದಾರೆ.
ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ ಈ ಐವರು ಸ್ತ್ರೀಯರು ಸೌದಿಯ ಎರಡನೇ ಅತಿದೊಡ್ಡ ಕಾಸ್ಮೋಪಾಲಿಟನ್ ನಗರದಿಂದ ಹಿಡಿದು ಮೆಕ್ಕಾದ ಪುಟ್ಟ ಗ್ರಾಮದವರೆಗೆ ದೇಶದ ಐದು ಮೂಲೆಗಳಿಂದ ಬಂದವರು.
ವಿಶೇಷವೆಂದರೆ, ಮೆಕ್ಕಾದ ಮದ್ರಕಾಹ್ ಹಾಗೂ ಜೆಡ್ಡಾದ ಕ್ಷೇತ್ರವೂ ಮಹಿಳೆಯರ ಪಾಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.