ಸಾಂದರ್ಭಿಕ ಚಿತ್ರ 
ವಿದೇಶ

ಮಗುವಿಗೆ ಚಿತ್ರಹಿಂಸೆ ನೀಡಿದ್ದ ಭಾರತೀಯ ಮೂಲದ ಮಹಿಳೆಗೆ ಜೈಲು ಶಿಕ್ಷೆ

ತನ್ನದೇ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿ ಗಂಭೀರವಾಗಿ ಗಾಯಗೊಳಿಸಿ ಮಗುವಿನ ಪಕ್ಕೆಲಬುಗಳು ಮತ್ತು ಕಾಲಿನ ಮೂಳೆಗಳನ್ನು ಮುರಿದಿದ್ದ ಭಾರತೀಯ ಮೂಲದ ...

ವಾಷಿಂಗ್ಟನ್ : ತನ್ನದೇ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿ ಗಂಭೀರವಾಗಿ ಗಾಯಗೊಳಿಸಿ ಮಗುವಿನ ಪಕ್ಕೆಲಬುಗಳು ಮತ್ತು ಕಾಲಿನ ಮೂಳೆಗಳನ್ನು ಮುರಿದಿದ್ದ ಭಾರತೀಯ ಮೂಲದ ತಾಯಿಯೊಬ್ಬಳಿಗೆ ಅಮೆರಿಕಾ ನ್ಯಾಯಾಲಯ ಕಾರಾಗೃಹ ಶಿಕ್ಷೆ ವಿಧಿಸಿದೆ.

25 ವರ್ಷದ ರಿಂಕೂ ಬೆನ್ ಪಟೇಲ್ ಎಂಬ ಮಹಿಳೆ ತನ್ನ 5 ವಾರಗಳ ಹೆಣ್ಣು ಶಿಶುವಿಗೆ ಇಂಥಾ ಭಯಾನಕ ಚಿತ್ರಹಿಂಸೆ ನೀಡಿದ್ದು, ಈಗ ಉತ್ತರ ಕರೋಲಿನಾದ ಹಂಬರ್‌ಲೆಂಡ್ ಕೌಂಟಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಳೆ.

ಹಲ್ಲೆಯಿಂದ  ಮಾರಣಾಂತಿಕವಾಗಿ ಗಾಯಗೊಂಡಿದ್ದ ಮಗು ಈಗ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮಗುವನ್ನು ಈಗ ಸಾಮಾಜಿಕ ಸೇವಾ ಕೇಂದ್ರವೊಂದರಲ್ಲಿ ಇರಿಸಿಕೊಂಡು ಆರೈಕೆ ಮಾಡಲಾಗುತ್ತಿದೆ.

ನವೆಂಬರ್ 27 ರಂದು ಆಂಬುಲೆನ್ಸ್‌ಗೆ ಕರೆ ನೀಡಿದ್ದ ರಿಂಕು ಬೆನ್ ಪಟೇಲ್ ತನ್ನ ಮಗುವಿಗೆ ಬಿದ್ದು ಗಾಯಗಳಾಗಿವೆ ಎಂದು ಹೇಳಿ ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ, ಮಗುವಿನ ಪಕ್ಕೆಲಬುಗಳು, ಕಾಲಿನ ಮೂಳೆಗಳು ಮುರಿದಿದ್ದು ತಲೆಯಲ್ಲಿ ರಕ್ತಸ್ರಾವವಾಗಿತ್ತು. ಇದನ್ನು ಕಂಡ ವೈದ್ಯರು ಇದು ಹಲ್ಲೆ ಪ್ರಕರಣ ಎಂದು ದೂರು ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ ಸಿಎಂ ಪತ್ನಿ ವಿರುದ್ಧ ಆರೋಪ: ಪವನ್ ಖೇರಾಗೆ ನಿರೀಕ್ಷಣಾ ಜಾಮೀನು ಮಂಜೂರು

ನಾಯಕತ್ವ ಹಗ್ಗಜಗ್ಗಾಟ ನಡುವೆ ಗುಪ್ತಚರ ಮುಖ್ಯಸ್ಥರ ಬದಲಾವಣೆ: ಅಧಿಕಾರ ಇನ್ನೂ ನನ್ನ ಕೈಯಲ್ಲೇ ಇದೆ, ಕಠಿಣ ಸಂದೇಶ ರವಾನಿಸಿದ ಸಿದ್ದರಾಮಯ್ಯ..?

ಗಾಯದ ಮೇಲೆ ಬರೆ: ವಾಣಿಜ್ಯ LPG ಸಿಲಿಂಡರ್ ದರ ರೂ.993 ಏರಿಕೆ, ಹೊಸ ದರ ಇಂದಿನಿಂದ ಜಾರಿ..!

ಬುದ್ದ- ಜಗವೆಲ್ಲಾ ಮಲಗಿರಲು ಅವನೊಬ್ಬ ಎದ್ದ: ಬೌದ್ಧ ಪೌರ್ಣಮಿ ಮಹತ್ವ, ಆಚರಣೆ - ಸಂದೇಶ

ಜಾಗತಿಕ ಅಸ್ಥಿರತೆ ನಡುವೆಯೂ ಇಂಧನ ದರ ಸ್ಥಿರ: ಬೆಲೆ ಏರಿಕೆ ಹೊರೆ ಹೊತ್ತ ತೈಲ ಕಂಪನಿಗಳು, ಗ್ರಾಹಕರಿಗೆ ರಿಲೀಫ್..!

SCROLL FOR NEXT