ಬೀಜಿಂಗ್: ವಾಯು ಮಾಲಿನ್ಯದಿಂದ ತತ್ತರಿಸಿರುವ ಚೀನಾದಲ್ಲಿ ಇದೀಗ ಎರಡನೇ ಬಾರಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ವಾರಾಂತ್ಯದ ವೇಳೆಗೆ ರಾಜಧಾನಿ ಬೀಜಿಂಗ್ ಸೇರಿದಂತೆ ಉತ್ತರ ಚೀನಾದ ಬಹುತೇಕ ನಗರಗಳಲ್ಲಿ ದಟ್ಟ ಹೊಗೆ ಮುಸುಕಿದ ವಾತಾವರಣ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಷಿಯಾನ್ ನಿಂದ ಆರಂಭವಾಗಿ ಮಧ್ಯ ಚೀನಾದ ಕೆಲವೆಡೆ, ಬೀಜಿಂಗ್ ಹಾಗೂ ಷೆನ್‍ಯಾಂಗ್‍ವರೆಗೆ ದಟ್ಟ ಹೊಗೆ ಆವರಿಸಲಿದೆ ಎಂದು ಚೀನಾ ಹವಾಮಾನ ನಿರ್ವಹಣಾ ಇಲಾಖೆ ಜನತೆಗೆ ಎಚ್ಚರಿಕೆ ನೀಡಿದೆ.
ಬೀಜಿಂಗ್‍ನಲ್ಲಿ ಒಂದು ವಾರದ ಹಿಂದಷ್ಟೇ ದಟ್ಟ ಹೊಗೆ ಮುಸುಕಿದ ವಾತಾವರಣದ ಬಗ್ಗೆ ಮೊದಲ ರೆಡ್ ಅಲರ್ಟ್ ಘೋಷಿಸಲಾಗಿತ್ತು.