ವಿದೇಶ

ಗೋಡೆ ಮೇಲೆ ಮೂತ್ರ ಮಾಡುವವರಿಗೆ ಹೊಸ ಶಿಕ್ಷೆ!

Rashmi Kasaragodu
ಲಂಡನ್: ಬಾರ್‌ಗೆ ಹೋಗಿ ಚೆನ್ನಾಗಿ ಕುಡಿದು ಹೊರಗೆ ಬಂದ ಕೂಡಲೇ ಸಿಕ್ಕ ಸಿಕ್ಕ ಗೋಡೆಗಳ ಮೇಲೆ ಮೂತ್ರ ವಿಸರ್ಜನೆ ಮಾಡುವ ಕುಡುಕರಿಗೆ ಬುದ್ಧಿ ಕಲಿಸಲು ಲಂಡನ್ ನಲ್ಲಿ ತಡೆ ಗೋಡೆ ನಿರ್ಮಿಸಲಾಗಿದೆ. ಏನಪ್ಪಾ ಇದು ತಡೆ ಗೋಡೆ ಅಂತೀರಾ?
ಯಾರಾದರೂ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದರೆ ಆ ಮೂತ್ರವನ್ನು ಗೋಡೆ ಹೀರಿಕೊಳ್ಳುವುದಿಲ್ಲ. ಬದಲಾಗಿ ಗೋಡೆಗೆ ಮೂತ್ರ ಬಿದ್ದೊಡನೆ ಅದು ಮೂತ್ರ ಮಾಡಿದವನೆ ಮೈಗೆ ಎರಚಿಕೊಳ್ಳುತ್ತದೆ!. ಗೋಡೆ ಮೇಲೆ ಮೂವಿ (ಮೂತ್ರ ವಿಸರ್ಜನೆ) ಮಾಡುವವರಿಗೆ ಲಗಾಮು ಹಾಕಲು ಈ ತಂತ್ರವನ್ನು ಅಳವಡಿಸಲಾಗಿದೆ.
ಪೂರ್ವ ಲಂಡನ್‌ನ ಶೋರ್‌ಡಿಚ್ ಮತ್ತು ಡಾಲ್‌ಸ್ಟನ್ ಎಂಬೀ ಪ್ರದೇಶಗಳಲ್ಲಿ ಈ ರೀತಿಯ ಗೋಡೆ ತಂತ್ರಗಳನ್ನು ಬಳಸಲಾಗಿದೆ. ನೀರು ಬಿದ್ದರೆ ಅದನ್ನು ಹೀರಿಕೊಳ್ಳುವ ಬದಲು ವಾಪಸ್ ಎರಚುವ ಪ್ರತ್ಯೇಕ ಕೋಟಿಂಗ್‌ನ್ನು ಈ ಗೋಡೆಗಳಿಗೆ ನೀಡಲಾಗಿದೆ.
ಅಮೆರಿಕ ನಿರ್ಮಿತ ವಾಲ್ ಕೋಟಿಂಗ್ ಇದಾಗಿದ್ದು, ಇಂಥಾ ಗೋಡೆಗಳ ಮೇಲೆ ಸೂಸು ಮಾಡಿದರೆ ಮೂತ್ರ ವಾಪಸ್ ಮೂತ್ರ ಮಾಡಿದವನ ಟ್ರೌಸರ್, ಶೂ ಒದ್ದೆಯಾಗುವಂತೆ ಈ ಗೋಡೆಗಳು ಮಾಡುತ್ತದೆ.
ಪ್ರಸ್ತುತ ಪ್ರದೇಶಗಳಲ್ಲಿ ವಾಲ್ ಕೋಟಿಂಗ್ ಮಾಡುವುದಕ್ಕಾಗಿ ಹಾಕ್‌ನೀ ಕೌನ್ಸಿಲ್ ಪ್ರತೀ ವರ್ಷ 100,000 ಪೌಂಡ್ (ರು. 9,869,190) ಖರ್ಚಾಗಿದೆಯಂತೆ.
SCROLL FOR NEXT