ವಿದೇಶ

ಮದರ್ ಥೆರೇಸಾಗೆ ಸಂತ ಪದವಿ

Mainashree
ಕೋಲ್ಕತಾ: ನಿರ್ಗತಿಕರ ದೇವತೆ ಎಂದೇ ಹೆಸರಾದ ಮದರ್ ಥೆರೇಸಾರ ಎರಡನೇ ಪವಾಡವನ್ನು ಫೋಪ್ ಫ್ರಾನ್ಸಿಸ್ ಅವರು ಮಾನ್ಯ ಮಾಡಿದ್ದು, ಮುಂದಿನ ಸೆಪ್ಟೆಂಬರ್‍ನಲ್ಲಿ ನೊಬೆಲ್ ಪುರಸ್ಕೃತ ಮಹಾ ಮಾನವತಾವಾದಿಗೆ ಸಂತ ಪದವಿ ಪ್ರದಾನ ಮಾಡಲಾಗುತ್ತದೆ.
ಮೆದುಳು ಕ್ಯಾನ್ಸರ್‍ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಗುಣಪಡಿಸಿದ ಥೆರೇಸಾ ಪವಾಡವನ್ನು ಮಾನ್ಯ ಮಾಡಲಾಗಿದೆ. 
ಆ ಹಿನ್ನೆಲೆಯಲ್ಲಿ ಅವರಿಗೆ ಮುಂದಿನ ಸೆ.4ರಂದು ರೋಮ್ ನಲ್ಲಿ ಸಂತ ಪದವಿ ನೀಡುವ ನಿರೀಕ್ಷೆ ಇದೆ ಎಂದು ರೋಮ್ ನ ಕ್ಯಾಥೊಲಿಕ್ ಪತ್ರಿಕೆ ಅವೆನೈರ್ ಹೇಳಿದೆ. ಇದನ್ನು ಖಚಿತಪಡಿಸಿರುವ ಕೋಲ್ಕತಾದ ಮಿಷನರೀಸ್ ಆಫ್ ಚಾರಿಟಿಯ ವಕ್ತಾರೆ ಸುನೀತಾ ಕುಮಾರ್, `ವ್ಯಾಟಿಕನ್‍ನಿಂದ ಈ ಬಗ್ಗೆ ಮಾಹಿತಿ ಬಂದಿದೆ. ವಿಷಯ ಕೇಳಿ ಖುಷಿಯಾಗಿದೆ' ಎಂದಿದ್ದಾರೆ.
ಪವಾಡಗಳೇನು?
  • ಕೋಲ್ಕತಾದ ಮೋನಿಕಾ ಬೆಸ್ರಾ ಎಂಬ ಬುಡಕಟ್ಟು ಮಹಿಳೆಯೊಬ್ಬರ ಮಾರಣಾಂತಿಕ ಕಿಬ್ಬೊಟ್ಟೆ ಕ್ಯಾನ್ಸರ್ ಗಡ್ಡೆಯನ್ನು ಗುಣಪಡಿಸಿದ್ದು
  • ಬ್ರೈನ್ ಟ್ಯೂಮರ್‍ನಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬ್ರಿಜಿಲ್ ಮೂಲದ ವ್ಯಕ್ತಿಯೊಬ್ಬರನ್ನು ಗುಣಮುಖರಾಗಿಸಿದ್ದು
SCROLL FOR NEXT