ರ್ಲಾಂಡೋ ಬ್ಲೂಮ್ 
ವಿದೇಶ

ಭಾರತದಲ್ಲಿಳಿದು ಗೊಂದಲಕ್ಕೀಡಾದ ನಟ ಬ್ಲೂಮ್

ಕ್ರಿಸ್‍ಮಸ್ ಅನ್ನು ಭಾರತದಲ್ಲಿ ಕಳೆಯಬೇಕೆಂದು ಆಶಿಸಿದ್ದ ಬ್ರಿಟಿಷ್ ನಟ ಒರ್ಲಾಂಡೋ ಬ್ಲೂಮ್ ಅವರಿಗೆ ಭಾರತದ...

ನವದೆಹಲಿ: ಕ್ರಿಸ್‍ಮಸ್ ಅನ್ನು ಭಾರತದಲ್ಲಿ ಕಳೆಯಬೇಕೆಂದು ಆಶಿಸಿದ್ದ ಬ್ರಿಟಿಷ್ ನಟ ಒರ್ಲಾಂಡೋ ಬ್ಲೂಮ್ ಅವರಿಗೆ ಭಾರತದ ನೆಲಕ್ಕೆ ಕಾಲಿಡುತ್ತಿದ್ದಂತೆಯೇ ಆಘಾತ ಕಾದಿತ್ತು.
ಆದರೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ರ ಮಧ್ಯ ಪ್ರವೇಶದಿಂದ ಅವರ ಸಮಸ್ಯೆಗೆ ಪರಿಹಾರ ಸಿಕ್ಕಿದೆ. 
ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್ ಅವರ ಆಮಂತ್ರಣದ ಮೇರೆಗೆ, ದೇಶದ ಪ್ರವಾಸೋದ್ಯಮ ಉತ್ತೇಜನಕ್ಕೆಂದು ಬ್ಲೂಮ್  ಭಾರತಕ್ಕೆ ಬರಲು ನಿರ್ಧರಿಸಿದ್ದರು. ಅದರಂತೆ, ಅವರು ಬ್ರಿಟಿಷ್ ಏರ್‍ವೇಸ್ ವಿಮಾನದಲ್ಲಿ ಶನಿವಾರ ಮಧ್ಯಾಹ್ನ 1.30ಕ್ಕೆ ಭಾರತಕ್ಕೆ ಬಂದಿಳಿದಿದ್ದರು. 
ಆದರೆ, ಇಲ್ಲಿ ಬಂದ ಬಳಿಕವೇ ತಾವು ನ.30ರಂದು ಇ-ವೀಸಾಗಾಗಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದೆ ಎಂದು ಅವರಿಗೆ ಗೊತ್ತಾದದ್ದು. ಈ ಹಿನ್ನೆಲೆಯಲ್ಲಿ, ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗಳು(ಎಫ್ ಆರ್‍ಆರ್‍ಒ) ಅವರಿಗೆ ವಾಪಸ್ ಹೋಗುವಂತೆ ಸೂಚಿಸಿದರು. 
``ತಮಗೆ ಆರೋಗ್ಯ ಸಮಸ್ಯೆ ಇದ್ದು, ವೈದ್ಯರನ್ನು ಭೇಟಿಯಾಗುವವರೆಗೆ ಇಲ್ಲಿರಲು ಬಿಡಿ'' ಎಂದು ಬ್ಲೂಮ್  ಎಷ್ಟೇ ಅಲವತ್ತುಕೊಂಡರೂ, ಅಧಿಕಾರಿಗಳು ಒಪ್ಪಲಿಲ್ಲ. ಕೊನೆಗೆ ಅವರನ್ನು ಬ್ರಿಟನ್‍ಗೆ ಗಡಿಪಾರು ಮಾಡಲಾಯಿತು. 
ವಿಷಯ ತಿಳಿದೊಡನೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಧ್ಯಪ್ರವೇಶಿಸಿ, ನಟ ಬ್ಲೂಮ್ ರಿಗೆ ಹೊಸ ವೀಸಾ ಇಶ್ಯೂ ಮಾಡಿದರು. ಇದಾದ ಕೆಲವೇ ಗಂಟೆಗಳಲ್ಲಿ ಬ್ಲೂಮ್  ಮತ್ತೆ ಭಾರತಕ್ಕೆ ಬಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!