-ಶಿಕ್ಷಕನಾಗಿ ಕೆಲಸಸಿಕ್ಕಾಗಲೇ ಶುರುವಾಗಿತ್ತು ಈ ಚಾಳಿ
- ವರ್ಷಕ್ಕೆ ಮೂರು ಸೆಕ್ಸ್ ಟೂರ್ ಮಾಡುತ್ತಿದ್ದನಂತೆ
ಟೋಕಿಯೋ: ಜಗತ್ತು ಕಂಡ ಅತ್ಯಂತ ಅಸಹ್ಯಕರ ವಿಕೃತಕಾಮಿಯೊಬ್ಬನ ಸುದ್ದಿಯಿದು. ಈತ ಅಧ್ಯಾಪಕನಾಗಿದ್ದ ಎಂಬುದು ಇನ್ನಷ್ಟು ಬೇಸರದ ಸಂಗತಿ.
ಒಬ್ಬ ಮನುಷ್ಯ ಜೀವಮಾನದಲ್ಲಿ 12ಸಾವಿರ ಮಹಿಳೆ ಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಬಹುದೇ? ಈ ಕಾರಣಕ್ಕೆ ಫಿಲಿಪೈನ್ಸ್ನ ಈ ಮಾಜಿ ಶಿಕ್ಷಕ ಸೆರೆಮನೆಯಲ್ಲಿದ್ದಾನೆ. ಯೂಹಿ ಕ ಷಿಮಾ(65) ಶಿಕ್ಷೆಗೆ ಗುರಿಯಾದವ. ಆತ ಸೆರೆಯಾದ ಮೇಲೆಯೇ ಆತನ ಪುರಾಣ ಬಯಲಾದದ್ದು. ಈ ಬಾರಿ ಸಿಕ್ಕಿಬಿದ್ದದ್ದು ಶಾಲಾ ಬಾಲಕಿಯೊಬ್ಬಳ ನಗ್ನ ಫೋಟೋ ಬಹಿರಂಗಪಡಿಸಿದ ಅಪರಾಧಕ್ಕಾಗಿ. ಆನಂತರ ಆತನ ಇತಿಹಾಸಗಳು ಬಯಲಾದ್ದು. ಹಿಂದೊಮ್ಮೆ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಕ್ಕೆ ಜೈಲು ಸೇರಿದ್ದ ಈತ ಇನ್ನೊಮ್ಮೆ ತಪ್ಪು ಮಾಡುವುದಿಲ್ಲವೆಂದು ಶಿಕ್ಷೆಯಿಂದ ಬಚಾವಾಗಿದ್ದ.
ಆದರೆ ಈ ಬಾರಿ ಸಿಕ್ಕಿಬಿದ್ದಿದ್ದಾನೆ. ಇವನ ಬಳಿ 1.5ಲಕ್ಷದಷ್ಟು ತನ್ನ ರಾಸಲೀಲೆಯ ಚಿತ್ರಗಳಿವೆಯಂತೆ. ಅದನ್ನು 400 ಆಲ್ಬಮ್ ಮಾಡಿ ಕೊಂಡಿದ್ದಾನೆ. 27 ವರ್ಷಗಳಲ್ಲಿ ಈತ 14ರಿಂದ 70ರ ವಯಸ್ಸಿನ ಒಟ್ಟು 12,000 ಸ್ತ್ರೀಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದನಂತೆ. ತನ್ನ ಈ ಸಾಧನೆಯ ನೆನಪಿಗಾಗಿ ಈತ ಎಲ್ಲವನ್ನೂ ಫೋಟೋ ಆಲ್ಬಮ್ ಮಾಡಿಕೊಂಡಿದ್ದಾನೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos