ವಿದೇಶ

ಸುಲವೆಸಿ ಬೋಟ್ ದುರಂತ: ಶೋಧ ಕಾರ್ಯ ಸ್ಥಗಿತ; ಇನ್ನೂ 12 ಮಂದಿ ನಾಪತ್ತೆ

Srinivasamurthy VN

ಜಕಾರ್ತ: ಸುಲವೆಸಿ ಸಾಗರದಲ್ಲಿ ದುರಂತಕ್ಕೀಡಾಗಿದ್ದ ಬೋಟ್ ನಲ್ಲಿನ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ಇಂಡೋನೇಷ್ಯಾ ಸರ್ಕಾರ ಸ್ಥಗಿತಗೊಳಿಸಿದೆ.

ಸತತ ಪ್ರಯತ್ನದ ನಡುವೆಯೂ ಕಾಣೆಯಾದ 12 ಮಂದಿಯ ಪತ್ತೆ ಅಥವಾ ಅವರ ಮೃತ ದೇಹಗಳು ಪತ್ತೆಯಾಗದ ಹಿನ್ನಲೆಯಲ್ಲಿ ಇಂಡೋನೇಷ್ಯಾ ಸರ್ಕಾರ ಇಂದು ಅಧಿಕೃತವಾಗಿ  ಶೋಧಕಾರ್ಯವನ್ನು ಸ್ಥಗಿತಗೊಳಿಸಿದೆ. ಕಳೆದ ಡಿಸೆಂಬರ್ 19ರಂದು ಆಗ್ನೇಯ ಸುಲವೆಸಿ ಸಾಗರದಲ್ಲಿ ಚಲಿಸುತ್ತಿದ್ದ ಕೆಎಂ ಮರಿನಾ ಬರು 02ಬಿ ಹೆಸರಿನ ಪ್ರಯಾಣಿಕ ಬೋಟ್ ಎಂಜಿನ್ ನ  ನಿಷ್ಕ್ರಿಯತೆಯಿಂದಾಗಿ ದುರಂತಕ್ಕೀಡಾಗಿತ್ತು. ಬೋಟ್ ನಲ್ಲಿ ಸಿಬ್ಬಂದಿಗಳು ಸೇರಿದಂತೆ 118 ಮಂದಿ ಇದ್ದರು.

ಈ ಪೈಕಿ ಕರಾವಳಿ ಪಡೆಯ ರಕ್ಷಣಾ ಕಾರ್ಯಾಚರಣೆಯಿಂದಾಗಿ 40 ಮಂದಿ ಪ್ರಯಾಣಿಕರು ಬದುಕುಳಿದರು. ಇನ್ನು 66 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರದ ಅಧಿಕೃತ ಮೂಲಗಳು  ತಿಳಿಸಿವೆ. ಇನ್ನು 12 ಮಂದಿ ನಾಪತ್ತೆಯಾಗಿದ್ದು, ಅವರ ಶೋಧಕ್ಕೆ ಕಳೆದ ಹಲವು ದಿನಗಳಿಂದ ಕಾರ್ಯಾಚರಣೆ ನಡೆದಿತ್ತು. ಆದರೆ ಯಾವುದೇ ರೀತಿಯ ಸುಳಿವು ದೊರೆಯದ ಹಿನ್ನಲೆಯಲ್ಲಿ  ಇಂಡೋನೇಷ್ಯಾ ಸರ್ಕಾರ ಶೋಧ ಕಾರ್ಯವನ್ನು ಕೈ ಬಿಟ್ಟಿದೆ. ದುರಂತದಲ್ಲಿ ಬದುಕುಳಿದ ಪ್ರಯಾಣಿಕರು ಅಭಿಪ್ರಾಯ ಪಟ್ಟಂತೆ ಬೋಟ್ ನಲ್ಲಿಯೇ ನಾಪತ್ತೆಯಾದ 12 ಮಂದಿ ಸಿಲುಕಿರಬಹುದು ಎಂದು ಹೇಳಿದ್ದಾರೆ.

SCROLL FOR NEXT