ವಿದೇಶ

ವಿಕಿಲೀಕ್ಸ್ ಸ್ಥಾಪಕ ಅಸ್ಸಾಂಜೆಗೆ ರಾಜಕೀಯ ಆಶ್ರಯ ನಿರಾಕರಿಸಿದ ಫ್ರಾನ್ಸ್

Guruprasad Narayana

ಪ್ಯಾರಿಸ್: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರಿಗೆ 'ತುರ್ತು ಅಪಾಯ'ವೇನಿಲ್ಲ ಎಂದಿರುವ ಫ್ರಾನ್ಸ್ ಸರ್ಕಾರ ರಾಜಕೀಯ ಆಶ್ರಯ ಮನವಿಯನ್ನು ತಿರಸ್ಕರಿಸಿದೆ.

"ಅವರ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ" ಎಂದು ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲ್ಲೆಂಡ್ ಅವರು ಹೇಳಿಕೆ ನೀಡಿದ್ದಾರೆ, ಅಸ್ಸಾಂಜೆ ಅವರು ರಾಜಕೀಯ ಆಶ್ರಯ ಕೋರಿ ಫ್ರಾನ್ಸ್ ಸರ್ಕಾರಕ್ಕೆ ತೆರೆದ ಪತ್ರ ಬರೆದಿದ್ದರು.

"ಸದ್ಯದ ಪರಿಸ್ಥಿತಿಯಲ್ಲಿ ಅಸ್ಸಾಂಜೆ ಅವರಿಗೆ ತುರ್ತು ಅಪಾಯವೇನಿಲ್ಲ. ಅಲ್ಲದೆ ಅವರಿಗೆ ಯೂರೋಪಿಯನ್ ಬಂಧನ ವಾರಂಟ್ ಭೀತಿ ಕೂಡ ಇದೆ" ಎಂದು ಹಾಲ್ಲೆಂಡ್ ಅವರ ಕಚೇರಿ ತಿಳಿಸಿದೆ.

ಲೇ ಮಾಂಡ್ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ, ರಾಷ್ಟ್ರಾಧ್ಯಕ್ಷರಿಗೆ ಬರೆದ ತೆರೆದ ಪತ್ರದಲ್ಲಿ ಅಸ್ಸಾಂಜೆ ಅವರು "ತಮ್ಮ ವೃತ್ತಿ ಚಟುವಟಿಕೆಗಳಿಂದಾಗಿ ಅಮೇರಿಕಾ ಅಧಿಕಾರಿಗಳಿಂದ ಸಾವಿನ ಭೀತಿಯನ್ನು ಎದುರಿಸುತ್ತಿರುವ ಪತ್ರಕರ್ತ ತಾವು" ಎಂದು ಬಣ್ಣಿಸಿಕೊಂಡೀದ್ದಾರೆ.

"ಸ್ವೀಡನ್ ಮತ್ತು ಇಂಗ್ಲೆಂಡ್ ಒಳಗೊಂಡಂತೆ ಯಾವುದೇ ದೇಶದಲ್ಲಿ ನನ್ನ ವಿರುದ್ಧ ಸಾಮಾನ್ಯ ಅಪರಾಧಕ್ಕೆ ಪ್ರಕರಣ ದಾಖಲಾಗಿಲ್ಲ" ಎಂದು ಇಂದಿಗೆ ೪೪ ವರ್ಷಕ್ಕೆ ಕಾಲಿಟ್ಟ ಅಸ್ಸಾಂಜೆ ಹೇಳಿಕೊಂಡಿದ್ದಾರೆ. 

SCROLL FOR NEXT