ವಿದೇಶ

ಬೀಜಿಂಗ್ ನಲ್ಲಿ ಭಾರತವನ್ನು ಟೀಕಿಸುವ ಜಾಹೀರಾತು ಪ್ರತ್ಯಕ್ಷ

Srinivas Rao BV

ಬೀಜಿಂಗ್: ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಹೊರಸೂಸುವ ಕುಖ್ಯಾತಿಯನ್ನು ಚೀನಾ ಪಡೆದುಕೊಂಡಿದೆ. ಅದರ ಹೊರತಾಗಿಯೂ ಚೀನಾದ ರಾಜಧಾನಿ ಬೀಜಿಂಗ್ ನ ವಾಂಗ್ ಫಿಜೊಯಾಂಗ್, ತಿಯಾ ನ್ಮನ್, ಸ್ಕ್ವಾರ್ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳದಲ್ಲಿ ಭಾರತದ ಪರಿಸರ ಮಾಲಿನ್ಯದ ಬಗ್ಗೆ ಟೀಕೆ ಮಾಡಲಾಗಿದೆ.

ಮುಂಬೈ ಮತ್ತು ಅಲಹಾಬಾದ್ ನಗರಗಳಲ್ಲಿನ ಪರಿಸರ ಮಾಲಿನ್ಯವನ್ನು ಪ್ರಮುಖವಾಗಿ ಟೀಕಿಸಲಾಗಿದೆ. ಇದರ ಜತೆಗೆ ಜಾಹೀರಾತಿನಲ್ಲಿ ಭಾರತೀಯ ನಗರಗಳಲ್ಲಿನ ಮರಳುಗಾಳಿ, ಪ್ಲಾಸ್ಟಿಕ್ ಬಳಕೆಯಿಂದ ಹೆಚ್ಚಿದ ತ್ಯಾಜ್ಯಗಳು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತವೆ ಎಂದು ಆಕ್ಷೇಪಿಸಲಾಗಿದೆ.

ಮುಂಬೈ ಬೀಚ್ ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತುಂಬಿದೆ. ಅವುಗಳ ನಡುವೆ ಯುವಕರು, ಮಕ್ಕಳು ಕ್ರಿಕೆಟ್ ಆಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬರೆಯಲಾಗಿದೆ. ಈ ಜಾಹೀರಾತಿನಲ್ಲಿ ಬೀಚ್ ನಲ್ಲಿ ಯುವಕನೊಬ್ಬ ತ್ಯಾಜ್ಯದ ನಡುವೆ ಆಡುವ ಚಿತ್ರವಿದೆ. ಅಲಹಾಬಾದ್ ನಲ್ಲಿ ಎದ್ದ ಮರಳುಗಾಳಿಯಿಂದಾಗಿ ಪಾದಾಚಾರಿ ಗಳಿಗೆ ದಾರಿ ಕಾಣದಾಗಿರುವ ಚಿತ್ರವನ್ನು ಮತ್ತೊಂದು ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದ್ದು, ಅದರಲ್ಲಿ ಕೆಂದ್ರ ಸರ್ಕಾರದ ಗಂಗಾ ಬಚಾವೋ ಘೋಷವಾಕ್ಯ ಹಾಕಲಾಗಿದೆ. ಇತರ ರಾಷ್ಟ್ರಗಳಲ್ಲಿಯೂ ಇಂತಹ ಪರಿಸ್ಥಿತಿ ಇದೆ. ಹೀಗಾಗಿ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಗರಗಳಿಗೆ ಭೇಟಿ ನೀಡುವ ಮುನ್ನ ಎಚ್ಚರಿಕೆ ವಹಿಸುವಂತೆ ಚೀನಾ ಸರ್ಕಾರ ಸೂಚಿಸಿದೆ.

SCROLL FOR NEXT