ಶ್ರೇಯಾ ಪಟೇಲ್(ಚಿತ್ರಕೃಪೆ: letsmove.gov) 
ವಿದೇಶ

ಒಬಾಮ ದಂಪತಿ ಜತೆ ಊಟ ಸವಿದ ಶ್ರೇಯಾ

9 ವರ್ಷ ವಯಸ್ಸಿನ ಭಾರತೀಯ ಮೂಲದ ಅಮೆರಿಕನ್ ಹುಡುಗಿ ದೇಶದ ಅತ್ಯುನ್ನತ ವ್ಯಕ್ತಿಗೆ ಗರಮ್ ಮಸಾಲಾಯುಕ್ತ ಬರ್ಗರ್ ತಿನ್ನಲು ನೀಡುವುದು...

ನ್ಯೂಯಾರ್ಕ್: 9 ವರ್ಷ ವಯಸ್ಸಿನ ಭಾರತೀಯ ಮೂಲದ ಅಮೆರಿಕನ್ ಹುಡುಗಿ ದೇಶದ ಅತ್ಯುನ್ನತ ವ್ಯಕ್ತಿಗೆ ಗರಮ್ ಮಸಾಲಾಯುಕ್ತ ಬರ್ಗರ್ ತಿನ್ನಲು ನೀಡುವುದು ಅಂದರೇನು? ಜಗತ್ತಿಗೇ ಹಿರಿಯಣ್ಣನಾಗಿರುವ ಅಮೆರಿಕ ಅಧ್ಯಕ್ಷ ಒಬಾಮ ಈ ಹುಡುಗಿಯನ್ನು ಶ್ವೇತಭವನಕ್ಕೆ ಊಟಕ್ಕೆ ಆಹ್ವಾನಿಸುವುದು ಅಂದರೇನು?

ಶ್ವಾಮ್ ಬರ್ಗ್‍ನಲ್ಲಿರುವ ಶ್ರೇಯಾ ಪಟೇಲ್ ಎಂಬ 9ರ ಹುಡುಗಿಯನ್ನು ವೈಟ್‍ಹೌಸ್‍ನಲ್ಲಿ ನಡೆಯುವ ನಾಲ್ಕನೇ ವರ್ಷದ ಕಿಡ್ಸ್ ಸ್ಟೇಟ್ ಡಿನ್ನರ್ ಸಂಭ್ರಮಕ್ಕೆ ಆಹ್ವಾನಿಸಲಾಗಿತ್ತು. 55 ಮಂದಿ ಆಹ್ವಾನಿತ ಬಾಣಸಿಗರಲ್ಲಿ ಈಕೆ ಅತಿ ಕಿರಿಯ. ಜು.10ರಂದು ನಡೆದ ಈ ಭೋಜನಕೂಟದಲ್ಲಿ ಒಬಾಮ, ಪತ್ನಿ ಮಿಷಲ್ ರೊಂದಿಗೆ ಈಕೆ ಭೋಜನ ಮಾಡಿ ಥ್ರಿಲ್ ಆಗಿದ್ದಾಳೆ. ಖುದ್ದು ದಂಪತಿಗಳು ಈಕೆಯನ್ನು ಉಪಚರಿಸಿ ಉಣ ಬಡಿಸಿದ್ದಾರೆ.

ಇದಕ್ಕೆಲ್ಲ ಕಾರಣವಾದದ್ದು ಇಲಿನೋಯ್ಸ್ ನಲ್ಲಿ ನಡೆದ ಕಿಡ್ಸ್ ಸ್ಟೇಟ್ ಡಿನ್ನರ್ ಎಂಬ ಹೊಸ ರುಚಿ ಸ್ಪರ್ಧೆಯಲ್ಲಿ ಶ್ರೇಯಾ ತಯಾರಿಸಿದ ಗರಮï ಮಸಾಲಾಯುಕ್ತ ಕ್ವಿನೋ ಬರ್ಗರ್ ಹಾಗೂ ಅದರೊಂದಿಗೆ ನೀಡಿದ ರಾಯಿತ. ಆಕೆ ತಯಾರಿಸಿದ ಬರ್ಗರ್ ತಿಂದ ಒಬಾಮ ಬಾಯಿ ಚಪ್ಪರಿಸಿ, ವಿಜೇತೆಯೆಂದು ಘೋಷಿಸಿ ಡಿನ್ನರ್ ಪಾರ್ಟಿಗೆ ಆಹ್ವಾನಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT