ನ್ಯೂಯಾರ್ಕ್: ನೈಜೀರಿಯಾ ಮೇಲೆ ಶುಕ್ರವಾರ ಉಗ್ರರು ನಡೆಸಿದ ದಾಳಿಯನ್ನು ವಿಶ್ವಸಂಸ್ಥೆಯು ಶನಿವಾರ ಖಂಡಿಸಿದೆ.
ಈಶಾನ್ಯ ನೈಜೀರಿಯಾದ ಗೊಂಬೆ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ರಂಜಾನ್ ಹಿನ್ನಲೆಯಲ್ಲಿ ಸಾಕಷ್ಟು ಮಂದಿ ಸೇರಿದ್ದರು. ಈ ವೇಳೆ ಉಗ್ರರು ಜವಳಿ ಬಾಂಬ್ ಸ್ಪೋಟಗೊಳಿಸಿದ್ದು, ಘಟನೆಯಲ್ಲಿ 50 ಮಂದಿ ಸಾವನ್ನಪ್ಪಿದ್ದರಲ್ಲದೇ, 71ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ನೈಜೀರಿಯಾ ಉಗ್ರರ ದಾಳಿ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು, ದಾಳಿಯನ್ನು ಖಂಡಿಸಿದ್ದು ಉಗ್ರರ ನಿಗ್ರಹ ಕಾರ್ಯಾಚರಣೆಗೆ ನೈಜೀರಿಯಾಗೆ ಬೆಂಬಲ ನೀಡುವುದಾಗಿ ಹೇಳಿದೆ.