ರೋಬೋಟ್ ಹೋಟೆಲ್ 
ವಿದೇಶ

ತೆರೆದಿದೆ ರೋಬೋ ಹೋಟೆಲ್ ಅತಿಥಿಗಳು ಬರುವುದಷ್ಟೇ ಬಾಕಿ

ಇದು ಹೆನ್-ನಾ ಹೋಟೆಲ್. ಜಪಾನೀ ಭಾಷೆಯಲ್ಲಿ ಹೆನ್-ನಾ ಅಂದರೆ `ವಿಚಿತ್ರ' ಎಂದರ್ಥ. ಹೆಸರೇ ಹೇಳುವಂತೆ...

ಟೋಕಿಯೋ: ಇದು ಹೆನ್-ನಾ ಹೋಟೆಲ್. ಜಪಾನೀ ಭಾಷೆಯಲ್ಲಿ ಹೆನ್-ನಾ ಅಂದರೆ `ವಿಚಿತ್ರ' ಎಂದರ್ಥ. ಹೆಸರೇ ಹೇಳುವಂತೆ, ಇದು ವಿಚಿತ್ರ ಹಾಗೂ ಅಷ್ಟೇ ಅದ್ಭುತ ಹೋಟೆಲ್. ಇಲ್ಲಿ ಅದ್ಭುತವಾದದ್ದೇನು ಎಂದು ಕೇಳುತ್ತೀರಾ? ವಿಶ್ವದ ಮೊತ್ತಮೊದಲ ರೊಬೋಟ್ ಹೋಟೆಲ್ ಇದು. ಜಪಾನ್‍ನ ನಾಗಸಾಕಿಯ ಹ್ಯೂಸ್ ಟೆನ್ ಬಾಷ್ ಎಂಬ ಥೀಮ್ ಪಾರ್ಕ್‍ನಲ್ಲಿರುವ ಪಂಚತಾರಾ ಹೆನ್-ನಾ ಹೋಟೆಲ್‍ನಲ್ಲಿ ರೊಬೋಟ್‍ಗಳದ್ದೇ ಕಾರುಬಾರು. ನೀವು ಒಳಗೆ ಪ್ರವೇಶಿಸುತ್ತಿದ್ದಂತೆ ಜಪಾನಿ ಭಾಷೆ ಮಾತಾಡುವ ರೊಬೋಟ್ ಗಳೇ ನಿಮ್ಮನ್ನು ಸ್ವಾಗತಿಸುತ್ತವೆ. ಇವುಗಳಿಗೆ ಇಂಗ್ಲಿಷ್ ಭಾಷೆಯೂ ಗೊತ್ತು. ನಿಮ್ಮ ಎಲ್ಲ ಅಗತ್ಯತೆಗಳನ್ನೂ ಇವು ಪೂರೈಸುತ್ತವೆ. ಅಲ್ಲಿಂದ ತೆರಳುವಾಗ ಬಿಲ್ ಕೊಡುವ ಕೆಲಸವೂ ಇವುಗಳದ್ದೇ.

ಮುಖ ಗುರುತಿಸಿ ಬಾಗಿಲು ತೆರೆಯುತ್ತೆ
ಈಗ ಈ ಹೋಟೆಲ್‍ನಲ್ಲಿ 72 ಕೋಣೆಗಳಿವೆ. ಇದರ ಮೊದಲ ಹಂತವಷ್ಟೇ ಪೂರ್ಣಗೊಂಡಿದ್ದು, 2ನೇ ಹಂತದ ಕಾಮಗಾರಿ 2016ರಲ್ಲಿ ಮುಗಿಯಲಿದೆ. ಆಗ ಮತ್ತೆ 72 ಕೊಠಡಿಗಳು ಸೇರ್ಪಡೆಯಾಗಲಿವೆ. ಅತಿಥಿಗಳ ಕೊಠಡಿಗಳ ಬಾಗಿಲುಗಳಲ್ಲಿ ಫೇಷಿಯಲ್ ರೆಕಗ್ನಿಷನ್(ಮುಖ ಗುರುತಿಸುವ) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಹಾಗಾಗಿ ಅತಿಥಿಗಳ ಮುಖ ಗುರುತಿಸಿ ಬಾಗಿಲುಗಳು ತನ್ನಿಂತಾನೇ ತೆರೆಯುತ್ತವೆ. ಅವರಿಗೆ ಏನಾದರೂ ಬೇಕಿದ್ದರೆ ಟ್ಯಾಬ್ಲೆಟ್‍ಗಳ ಮೂಲಕ ಆರ್ಡರ್ ಮಾಡಬಹುದು. ಎಸಿ ಇಲ್ಲ, ಆದ್ರೂ ಸೆಖೆಯಾಗಲ್ಲ ಈ ಹೋಟೆಲ್‍ನ ಯಾವ ಕೊಠಡಿಯಲ್ಲೂ ಏರ್‍ಕಂಡೀಷನ್ ವ್ಯವಸ್ಥೆ ಅಳವಡಿಸಲಾಗಿಲ್ಲ. ಆದರೆ ಇಲ್ಲೂ ನವನವೀನ ತಂತ್ರಜ್ಞಾನವಿದೆ. ಇಲ್ಲಿರುವ ವಿಕಿರಣ ಫಲಕವು ನಿಮ್ಮ ದೇಹದ ಉಷ್ಣಾಂಶವನ್ನು ಪತ್ತೆಹಚ್ಚಿ, ತಾಪಮಾನವನ್ನು ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡುತ್ತದೆ. ಕಾರ್ಯನಿರ್ವಹಣೆ ವೆಚ್ಚ ತಗ್ಗಿಸುವ ಸಲುವಾಗಿ ಸೌರಶಕ್ತಿ ಮತ್ತು ಇತರೆ ಇಂಧನ- ಉಳಿತಾಯ ಕ್ರಮಗಳನ್ನು ಅನುಸರಿಸಲಾಗಿದೆ.

ಕೊಠಡಿ ಬೇಕಿದ್ದರೆ ಬಿಡ್ ಮಾಡಿ

ಇಲ್ಲಿ ಕೊಠಡಿಗೆ ಇಂತಿಷ್ಟು ಎಂದು ದರ ನಿಗದಿಪಡಿಸಲಾಗಿಲ್ಲ. ಬೇಡಿಕೆಗೆ ತಕ್ಕಂತೆ
ದರ ಬದಲಾಗುತ್ತದೆ. ಪೀಕ್ ಸೀಸನ್ ನಲ್ಲಿ ಅತಿಥಿಗಳೇ ಕೊಠಡಿಗಾಗಿ ಮಾಡುತ್ತಾರೆ. ಯಾರು ಅತಿ ಹೆಚ್ಚು ಬಿಡ್ ಮಾಡುತ್ತಾರೋ ಅವರಿಗೆ ಕೊಠಡಿ ನೀಡಲಾಗುತ್ತದೆ. ಆರಂಭಿಕ ದರ ಒಂದು ಕೊಠಡಿಗೆ ದಿನಕ್ಕೆ 60 ಡಾಲರ್ ಆಗಿದ್ದು, ಇದು 153 ಡಾಲರ್‍ವರೆಗೂ ಹೋಗುತ್ತದೆ. ಡಿಲಕ್ಸ್ ಕೊಠಡಿಗೆ ಹೆಚ್ಚಿನ ದರವಿರುತ್ತದೆ ಎಂದು ಸಿಎನ್‍ಎನ್ ವರದಿ ಮಾಡಿದೆ.

ಮುಂದಿನ ದಿನಗಳಲ್ಲಿ ವಿಶ್ವಾದ್ಯಂತ ಇಂತಹ ಒಂದು ಸಾವಿರ ಹೋಟೆಲ್‍ಗಳನ್ನು ನಿರ್ಮಾಣ ಮಾಡುವ ಗುರಿಯಿದೆ.
- ಹಿಡಿಯೋ ಸವಾಡಾ, ಹ್ಯೂಸ್ ಟೆನ್ ಬಾಷ್ ಅಧ್ಯಕ್ಷ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!