ವಾಯುದಾಳಿ(ಸಂಗ್ರಹ ಚಿತ್ರ) 
ವಿದೇಶ

ಸೌದಿ ಮೈತ್ರಿಪಡೆಗಳ ವಾಯುದಾಳಿ: 120 ಯೆಮೆನ್‌ ಪ್ರಜೆಗಳು ಸಾವು

ಸೌದಿ ಅರೇಬಿಯಾ ನೇತೃತ್ವದ ಮೈತ್ರಿ ಪಡೆಗಳು ಯೆಮೆನ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 120 ಮಂದಿ ನಾಗರೀಕರು ಸಾವನ್ನಪ್ಪಿದ್ದಾರೆ...

ಸನಾ: ಸೌದಿ ಅರೇಬಿಯಾ ನೇತೃತ್ವದ ಮೈತ್ರಿ ಪಡೆಗಳು ಯೆಮೆನ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 120 ಮಂದಿ ನಾಗರೀಕರು ಸಾವನ್ನಪ್ಪಿದ್ದಾರೆ.

ಯೆಮೆನ್‌ ನ ರೆಡ್‌ ಸೀ ಜನವಸತಿ ಪ್ರದೇಶದಲ್ಲಿ ಬಾಂಬ್‌ ದಾಳಿ ನಡೆದಿದ್ದರಿಂದ ಕೆಲ ಕಟ್ಟಡಗಳು ಛಿಧ್ರಗೊಂಡು ಅಮಾಯಕ ಜನರು ಸಾವನ್ನಪ್ಪಿದ್ದಾರೆ ಎಂದು ಮಾದ್ಯಮಗಳು ವರದಿ ಮಾಡಿವೆ.

ಸೌದಿ ಪಡೆ ಮಾರ್ಚ್‌ ನ ನಂತರ ನಡೆಸಿದ ಮಾರಣಾಂತಿಕ ಮತ್ತು ಪೈಶಾಚಿಕ ದಾಳಿ ಇದಾಗಿದೆ ಎಂದು ಭದ್ರತಾ ಮತ್ತು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದು, ಭೀಕರದಾಳಿ ನಡೆದ ಬಳಿಕ ಸೌದಿ ಅರೇಬಿಯ ಭಾನುವಾರದಿಂದ ಅನ್ವಯವಾಗುವಂತೆ 5 ದಿನಗಳ ಕದನ ವಿರಾಮ ಘೋಷಿಸಿದೆ.

ಸೌದಿ ಅರೇಬಿಯ ನೇತೃತ್ವದಲ್ಲಿ ಮೈತ್ರಿಪಡೆಗಳು ಯೆಮೆನ್‌ನಲ್ಲಿ ಹೌದಿ ಬಂಡುಕೋರರ ವಿರುದ್ಧ ನಿರಂತರ ವೈಮಾನಿಕ ದಾಳಿ ನಡೆಸುತ್ತಿದ್ದು ಇದರಲ್ಲಿ ಅಮಾಯಕ ನಾಗರೀಕರು ಸಾವನ್ನಪ್ಪುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಬುಡ ಸಹಿತ ಕಿತ್ತು ಬಿಸಾಡುತ್ತೇವೆ': ಕದನ ವಿರಾಮ ಉಲ್ಲಂಘನೆ ಕುರಿತು ಹಮಾಸ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ!

Bengaluru: 'ಪರೀಕ್ಷೆ ನೆಪದಲ್ಲಿ ಮುತ್ತಿಟ್ಟು, ಬಟ್ಟೆ ಬಿಚ್ಚಲು ಒತ್ತಾಯಿಸಿದ ಡಾಕ್ಟರ್': ಯುವತಿ ದೂರು, ಬಂಧನ

'ಯಾವನಿಗ್ ಬೇಕ್ ನಿನ್ ಗಿಫ್ಟ್'..!: ಮಾಲೀಕ ನೀಡಿದ ದೀಪಾವಳಿ ಉಡುಗೊರೆಯ ಗೇಟ್ ಬಳಿ ಎಸೆದ ಉದ್ಯೋಗಿಗಳು! Video

ಮೋದಿ ಸರ್ಕಾರದ GST ಬದಲಾವಣೆಯಿಂದ ರಾಜ್ಯಕ್ಕೆ15 ಸಾವಿರ ಕೋಟಿ ನಷ್ಟ: ಕುಮಾರಸ್ವಾಮಿ ಸೇರಿ ಎಲ್ಲಾ ಸಂಸದರನ್ನು ಸೋಲಿಸಿ; ಸಿದ್ದರಾಮಯ್ಯ

Anekal: ಲಿವಿಂಗ್​ ಟುಗೆದರ್​ನಲ್ಲಿದ್ದ ಒಡಿಶಾ ಮೂಲದ ಜೋಡಿ ಆತ್ಮಹತ್ಯೆ! ಇದೇ ಕಾರಣ

SCROLL FOR NEXT