ಛೋಲೆ ಖಾನ್‌ 
ವಿದೇಶ

ಮಾಜಿ ಬ್ಲೂ ಫಿಲ್ಮ್ ತಾರೆ ಛೋಲೆ ಖಾನ್‌ ಜೊತೆ ಕಾಕ್‌ಪಿಟ್‌ನಲ್ಲೇ ಪೈಲಟ್ ಲವ್ವಿ ಡವ್ವಿ!

ಲಂಡನ್‌ನಿಂದ ನ್ಯೂಯಾರ್ಕ್‌ ಗೆ ಹಾರುತ್ತಿದ್ದ ಕುವೈಟ್‌ ಏರ್‌ ವೇಸ್‌ನ ವಿಮಾನವೊಂದರ ಪೈಲಟ್ ತನ್ನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಾಜಿ ಬ್ಲೂ ಫಿಲ್ಮ್...

ಕುವೈಟ್‌: ಲಂಡನ್‌ನಿಂದ ನ್ಯೂಯಾರ್ಕ್‌ ಗೆ ಹಾರುತ್ತಿದ್ದ ಕುವೈಟ್‌ ಏರ್‌ ವೇಸ್‌ನ ವಿಮಾನವೊಂದರ ಪೈಲಟ್ ತನ್ನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಾಜಿ ಬ್ಲೂ ಫಿಲ್ಮ್ ನಟಿಯೊಬ್ಬಳನ್ನು ಕಾಕ್‌ ಪಿಟ್‌ಗೆ ಬರಮಾಡಿಕೊಂಡು, ಆಕೆಗೆ ಸಿಗರೇಟ್‌ ಮತ್ತು ಶಾಂಪೇನ್‌ ಕೊಟ್ಟು ಭರ್ಜರಿ ಆತಿಥ್ಯ ನೀಡಿದ್ದಲ್ಲದೆ ವಿಮಾನದ ನಿಯಂತ್ರಣಗಳೊಂದಿಗೆ ಆಟವಾಡಲು ಆಕೆಗೆ ಅವಕಾಶ ಮಾಡಿಕೊಟ್ಟು ಮನೋರಂಜನೆಯನ್ನು ಆಸ್ವಾದಿಸಿದ ಘಟನೆ ವರದಿಯಾಗಿದೆ.


ಮಾಜಿ ನೀಲಿ ತಾರೆ ಛೋಲೆ ಮಾಫಿಯಾ ಅಲಿಯಾಸ್‌ ಛೋಲೆ ಖಾನ್‌ ಈ ಘಟನೆಯನ್ನು ಖುದ್ದು ಸಂಭ್ರಮದಿಂದ ಹೇಳಿಕೊಂಡಿದ್ದಾಳೆ. ಸದ್ಯ ವೆಬ್‌ ಕ್ಯಾಮ್‌ ಎದುರು ಬಿಚ್ಚಿಕೊಳ್ಳುವ ದಂಧೆಯಲ್ಲಿ ತೊಡಗಿರುವ ಛೋಲೆ ಖಾನ್‌, ತನ್ನ ಸ್ನೇಹಿತರೊಂದಿಗೆ ಕುವೈಟ್‌ ಏರ್‌ಲೈನ್ಸ್‌ ನಲ್ಲಿ ಲಂಡನ್‌ - ನ್ಯೂಯಾರ್ಕ್‌ ವಿಮಾನ ಪ್ರಯಾಣದ ವೇಳೆ ವಿಮಾನದ ಕ್ಯಾಪ್ಟನ್‌ ತನ್ನನ್ನು ಕಾಕ್‌ಪಿಟ್‌ಗೆ ಬರಮಾಡಿಕೊಂಡಾಗಿನ ರೋಮಾಂಚಕ ಘಟನೆಯ ವಿವರಗಳನ್ನು ಡೇಲಿ ಸ್ಟಾರ್‌ನೊಂದಿಗೆ ಹಂಚಿಕೊಂಡಿದ್ದಾಳೆ.

'ವಿಮಾನದ ಪೈಲಟ್‌ 'ನನ್ನನ್ನು ಆತ್ಮೀಯವಾಗಿ ಸ್ನೇಹದಿಂದ ಕಾಕ್‌ಪಿಟ್‌ಗೆ ಕರೆದೊಯ್ದು, ಅಲ್ಲಿ ಆತ ಸಿಗರೇಟು, ಶಾಂಪೇನ್‌ ಅನ್ನು ನನಗಾಗಿ ತರಿಸಿಕೊಂಡ. ಆನಂತರ ನಾವು ಪ್ರಯಾಣದ ಉದ್ದಕ್ಕೂ ನಿರಂತರವಾಗಿ ಹಲವಾರು ಪ್ಯಾಕೇಟ್‌ ಸಿಗರೇಟ್‌ಗಳನ್ನು ಸೇದಿ ಮಜಾ ಮಾಡಿದೆವು' ಎಂದು 24ರ ಹರೆಯದ ಬಿಚ್ಚುಡುಗೆಯ ಛೋಲಾ ಖಾನ್‌ ಹೇಳಿದ್ದಾಳೆ.
'ವಿಮಾನದ ಕಾಕ್‌ಪಿಟ್‌ನಲ್ಲಿರುವ ಪ್ರತಿಯೊಂದು ಬಟನ್‌ಗಳ ಬಗ್ಗೆ ಆತ ನನಗೆ ವಿವರಿಸಿದ. ಅವುಗಳನ್ನು ಒತ್ತಿದಾಗ ವಿಮಾನ ಹೇಗೆ ವರ್ತಿಸುತ್ತದೆ ಎಂದು ತಿಳಿಸಿದ. ನಾನು ಆತನ ತೊಡೆಯ ಮೇಲೆ ಕೂರಬಹುದೆಂದೂ ವಿಮಾನವನ್ನು ಚಲಾಯಿಸಬಹುದೆಂದೂ ಹೇಳಿದ. ಆತ ಹಾಗೆ ಹೇಳಿದಾಗ ನಾನು ನನಗೆ ಖುಷಿ ಬಂದ ಕೆಲವು ಗುಂಡಿಗಳನ್ನು ಒತ್ತಿದೆ. ಆದರೆ ನಾನೇನು ಮಾಡಿದೆ, ಅದರಿಂದ ಏನಾಯಿತು ಎಂಬುದು ನನಗೆ ಗೊತ್ತಾಗಲಿಲ್ಲ. ಆದರೆ ಆತ (ಕ್ಯಾಪ್ಟನ್‌), ಏನೂ ತೊಂದರೆ ಇಲ್ಲ; ಎಲ್ಲವೂ ಸರಿಯಾಗಿಯೇ ಇದೆ; ವಿಮಾನ ಚೆನ್ನಾಗಿಯೇ ಹಾರುತ್ತಿದೆ ಎಂದು ಹೇಳಿದ' ಎಂಬುದಾಗಿ ಛೋಲೆ ಖಾನ್‌ ಹೇಳಿರುವುದನ್ನು ಡೇಲಿ ಸ್ಟಾರ್‌ ವರದಿ ಮಾಡಿದೆ.

ಗಮನಿಸಬೇಕಾದ ಅಂಶವೆಂದರೆ 9/11ರ ದಾಳಿಗಳ ಬಳಿಕ ಪ್ರಯಾಣಿಕರನ್ನು ಪೈಲಟ್‌ಗಳು ಕಾಕ್‌ಪಿಟ್‌ ಒಳಗೆ ಪ್ರವೇಶಿಸಲು ಬಿಡುವಂತಿಲ್ಲ. 2007ರಿಂದಲೇ ವಿಮಾನದಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಮೇಲಾಗಿ ಕುವೈಟ್‌ ಏರ್‌ಲೈನ್ಸ್‌ ನಲ್ಲಿ ಕಡ್ಡಾಯವಾಗಿ ಮದ್ಯ ಸೇವಿಸುವಂತಿಲ್ಲ. ಪ್ರಯಾಣಿಕರಿಗೆ ಈ ವಿಮಾನದಲ್ಲಿ ಎಂದೂ ಮದ್ಯ ಪೂರೈಕೆ ಆಗುವುದಿಲ್ಲ.

ಇನ್ನೂ ವಿಶೇಷವೆಂದರೆ ಛೋಲಾ ಖಾನ್‌ ವಿಮಾನದ ಫ್ಲೈಟ್‌ ಡೆಕ್‌ನ ಫೋಟೋ ತೆಗೆದುಕೊಂಡಿದ್ದಾಳೆ ಮಾತ್ರವಲ್ಲದೆ ತಾನು ಕಾಕ್‌ ಪಿಟ್‌ನಲ್ಲಿ ಪೈಲಟ್‌ ಜತೆಗೆ ನಡೆಸಿದ ಸಂಪೂರ್ಣ ಸರಸ - ಸಲ್ಲಾಪಗಳನ್ನು ವಿಡಿಯೋ ಮಾಡಿಕೊಂಡಿದ್ದಾಳೆ !

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT