ವಿಮಾನ ಪತನವಾದ ನಂತರ ಹೋಗೆ ಆವರಿಸಿರುವುದು. 
ವಿದೇಶ

ಜೆಟ್ ವಿಮಾನ ಪತನ, ಲಾಡೆನ್ ಸಂಬಂಧಿಗಳು ಸಜೀವ ದಹನ

ದಕ್ಷಿಣ ಇಂಗ್ಲೆಂಡ್‌ನಲ್ಲಿ ಶುಕ್ರವಾರ ಖಾಸಗಿ ಜೆಟ್ ವಿಮಾನ ಪತನಗೊಂಡ ಪರಿಣಾಮ ಒಸಮಾ ಬಿನ್ ಲಾಡೆನ್‌ನ ನಾಲ್ವರು ಸಂಬಂಧಿಗಳು ಸಜೀವ ದಹನವಾಗಿದ್ದಾರೆ...

ಲಂಡನ್: ದಕ್ಷಿಣ ಇಂಗ್ಲೆಂಡ್‌ನಲ್ಲಿ ಶುಕ್ರವಾರ ಖಾಸಗಿ ಜೆಟ್ ವಿಮಾನ ಪತನಗೊಂಡ ಪರಿಣಾಮ ಒಸಮಾ ಬಿನ್ ಲಾಡೆನ್‌ನ ನಾಲ್ವರು ಸಂಬಂಧಿಗಳು ಸಜೀವ ದಹನವಾಗಿದ್ದಾರೆ ಎಂದು ಸೌದಿ ಮತ್ತು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ.

ಅಪಘಾತದಲ್ಲಿ ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಯಾರೂ ಕೂಡ ಬದುಕುಳಿದಿಲ್ಲ. ಸ್ಫೋಟದ ತೀವ್ರತೆಗೆ ಪ್ರಯಾಣಿಕರ ದೇಹಗಳು ಗುರುತು ಸಿಗಲಾರದಷ್ಟು ಛಿತ್ರವಾಗಿವೆ ಬ್ರಿಟಿಷ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಬ್ರಿಟನ್‌ನಲ್ಲಿರುವ ಸೌದಿ ಅರೇಬಿಯಾದ ರಾಯಭಾರಿ ಕಚೇರಿ ಇದನ್ನು ಖಚಿತಪಡಿಸಿಲ್ಲ.  ಆದರೆ ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ದೊರೆ ಮೊಹಮ್ಮದ್ ಬಿನ್ ನವಾಫ್ ಬಿನ್ ಅಲ್‌ಸೌದ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಸೌದಿ ಅರೇಬಿಯಾದಲ್ಲಿ ವಾಸ ಮಾಡುತ್ತಿದ್ದ ಲಾಡೆನ್ ಸಂಬಂಧಿಗಳು ಬ್ರಿಟನ್‌ನಲ್ಲಿ ವಾಣಿಜ್ಯ ವಹಿವಾಟು ನಡೆಸಲು ತೆರಳಿದ್ದರು ಎಂದು ತಿಳಿದು ಬಂದಿದೆ.  ಪುನಃ ಸೌದಿಗೆ ಹೊರಟ ವೇಳೆ ಜೆಟ್ ವಿಮಾನ ಸ್ಫೋಟಗೊಂಡು ಸಾವನ್ನಪ್ಪಿದ್ದಾರೆ. ಅವರ ಪೂರ್ಣ ವಿವರಗಳು ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ವಿಮಾನಯಾನ ಸಿಬ್ಬಂದಿ ತಿಳಿಸಿದ್ದಾರೆ.

ಸೌದಿ ಅರೇಬಿಯಾದ ಮಾಧ್ಯಮಗಳು ಕೂಡ ಇದನ್ನು ಖಚಿತಪಡಿಸಿವೆ. ಆದರೆ   ಅವರ ಹೆಸರುಗಳು ಮತ್ತು ಪೂರ್ಣ ವಿವರಗಳನ್ನು ಬಹಿರಂಗಪಡಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!