ವಿದೇಶ

ನಕಲಿ ಉತ್ಪನ್ನಗಳ ಆನ್‍ಲೈನ್ ವಹಿವಾಟು

Mainashree
ಬೀಜಿಂಗ್: ಆನ್‍ಲೈನ್ ವಹಿವಾಟಿಗೆ ಸಂಬಂಧಿಸಿ ದಂತೆ ಇಲ್ಲಿನ ಸಂಸದರಿಗೆ ಸಲ್ಲಿಸಿರುವ ಅಧಿಕೃತ ವರದಿ ಈ ವಹಿವಾಟಿನ ಕುರಿತು ಇದ್ದ ಅನುಮಾನಗಳನ್ನು ದೃಢಪಡಿಸಿವೆ. 
ಇದೇ ಸಂದರ್ಭದಲ್ಲಿ ಆನ್‍ಲೈನ್ ಟ್ರೇಡಿಂಗ್ ಕಂಪನಿಗಳ ಕುರಿತು ಇದ್ದ ವಿಶ್ವಾಸಾರ್ಹತೆ ಕುಂಠಿತಗೊಳಿಸುವಂತಿವೆ. 
ಆನ್‍ಲೈನ್ ವಹಿವಾಟಿನಲ್ಲಿ ಸರಬರಾಜು ಮಾಡುವ ಶೇ.41.3ರಷ್ಟು ನಕಲಿ ಮತ್ತು ಖೋಟಾ ಉತ್ಪನ್ನಗಳಾಗಿವೆ ಎಂದು ಇಲ್ಲಿನ ಸಂಸದರಿಗೆ ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ. 
ಕಳೆದ ವರ್ಷ ಗ್ರಾಹಕರ ಕುಂದುಕೊರತೆ ನಿವಾರಣೆ, ಹಕ್ಕುಗಳ ರಕ್ಷಣೆ ಜಾರಿ ಇಲಾಖೆಗೆ ನಕಲಿ ಉತ್ಪನ್ನಗಳನ್ನು ಸರಬರಾಜು ಮಾಡಿರುವುದಕ್ಕೆ ಸಂಬಂಧಿಸಿದಂತೆ 77,800 ದೂರುಗಳು ಬಂದಿವೆ. ಆನ್ ಲೈನ್ ವಂಚನೆ ಪ್ರಕರಣಗಳು ಶೇ.356.6ರಷ್ಟು ಏರಿಕೆ ಕಂಡಿವೆ ಎಂದು ವರದಿ ಹೇಳಿದೆ. 
ಚೀನಾ ಸಂಸತ್ತಿನ ಸ್ಥಾಯಿ ಸಮಿತಿ ಸಭೆಯಲ್ಲಿ ವರದಿ ಕುರಿತು ಚರ್ಚೆ ನಡೆದಿದ್ದು ಆನ್‍ಲೈನ್ ವಹಿವಾಟು ನಿಯಮಗಳನ್ನು ಕಠಿಣಗೊಳಿಸುವಂತೆ ಸಮಿತಿ ಒತ್ತಾಯಿಸಿದೆ. ಆನ್‍ಲೈನ್ ವಹಿವಾಟಿನಲ್ಲಿ ಚೀನಾ ಅಮೆರಿಕವನ್ನು ಹಿಂದಿಕ್ಕಿದ್ದು ಕಳೆದ ವರ್ಷ 30,000 ಕೋಟಿ ಡಾಲರ್ ವಹಿವಾಟು ನಡೆಸಿದೆ. 
ನಕಲಿ ಮತ್ತು ಖೊಟ್ಟಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಆನ್ ಲೈನ್ ವಹಿವಾಟಿನ ಪ್ರಮುಖ ಕೊಂಡಿ ಯಾಗಿದೆ ಎಂದು ವಾಣಿಜ್ಯ ಸಚಿವಾಲ ಯ ತನ್ನ ವರದಿಯಲ್ಲಿ ವಿವರಿಸಿದೆ. ಕಳೆದ ಐದು ವರ್ಷಗಳಲ್ಲಿ ಚೀನಾದ ಆರ್ಥಿಕ ಪ್ರಗತಿಯಲ್ಲಿ ಇಂಟರ್ ನೆಟ್ ಪ್ರಮುಖ ಪಾತ್ರ ವಹಿಸಿದ್ದು ಜಿಡಿಪಿಗೆ ಶೇ.7ರಷ್ಟು ಕೊಡುಗೆ ನೀಡಿದೆ. 
ಸರಾಸರಿ ಲೆಕ್ಕದಲ್ಲಿ ಇದು ಅಮೆರಿಕಕ್ಕಿಂತಲೂ ಹೆಚ್ಚು. ಚೀನಾದಲ್ಲಿ ಆನ್‍ಲೈನ್ ನಕಲಿ ವಹಿವಾಟು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 200ಕ್ಕಿಂತಲೂ ಹೆಚ್ಚು ಪಟ್ಟು ಏರಿದೆ. ಈ ಆನ್‍ಲೈನ್ ವಹಿವಾಟು ಚೀನಾದ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ ಶೇ.7ರಷ್ಟು ಕೊಡುಗೆ ನೀಡಿದರೂ ಈ ನಕಲಿ ವ್ಯವಹಾರ ಗ್ರಾಹಕರು ಮತ್ತು ಸರ್ಕಾರವನ್ನು ಚಿಂತೆಗೀಡುಮಾಡಿದೆ. ಈಗ ವಾಣಿಜ್ಯ ಸಚಿವಾಲಯ ಈ ನಕಲಿ ದಂಧೆ ನಿಯಂತ್ರಿಸಲು ಕಠಿಣ ಕಾನೂನುಗಳನ್ನು ರೂಪಿಸುವತ್ತ ಚಿಂತನೆ ನಡೆಸಿದೆ.
SCROLL FOR NEXT