ಮಾಲೆ: ಮೂವತ್ತು ದಿನಗಳ ತಾತ್ಕಾಲಿಕ ತುರ್ತು ಪರಿಸ್ಥಿತಿ ಘೋಷಣೆಗೆ ಮಾಲ್ಡೀವ್ ಸಂಸತ್ ನಲ್ಲಿ ಒಪ್ಪಿಗೆ ದೊರೆತಿದೆ.
ದ್ವೀಪ ರಾಷ್ಟ್ರದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ತಾತ್ಕಾಲಿಕ ತುರ್ತು ಪರಿಸ್ಥಿತಿ ಹೇರುವುದಕ್ಕೆ ಸಂಬಂಧಿಸಿದಂತೆ ಅಲ್ಲಿನ ಸಂಸತ್ ನಲ್ಲಿ ಎರಡು ಗಂಟೆಗಳ ಚರ್ಚೆ ನಡೆದಿದ್ದು, ಅಂತಿಮವಾಗಿ ತುರ್ತು ಪರಿಸ್ಥಿತಿ ಘೋಷಣೆಗೆ ಬೆಂಬಲ ದೊರೆತಿದೆ. ತುರ್ತು ಪರಿಸ್ಥಿತಿಯ ವಿರುದ್ಧ ಮಾತನಾಡುವುದನ್ನು ರಾಷ್ಟ್ರಧ್ರೋಹ ಅಪರಾಧವೆಂದು ಪರಿಗಣಿಸಲಾಗಿದೆ ಎಂದು ಆಡಳಿತಾರೂಢ ಮಾಲ್ಡೀವ್ಸ್ ಪ್ರೊಗ್ರೆಸಿವ್ ಪಾರ್ಟಿಯಾ ಉಪಾಧ್ಯಕ್ಷ ರಹೀಂ ಅಬ್ದುಲ್ಲಾ ತಿಳಿಸಿದ್ದಾರೆ.
ಪ್ರತಿಪಕ್ಷವಾಗಿರುವ ಮಾಲ್ಡೀವ್ ಡೆಮಾಕ್ರೆಟಿಕ್ ಪಕ್ಷ(ಎಂಡಿಪಿ) ತುರ್ತು ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ್ದು ಅಧ್ಯಕ್ಷರ ಅಸಮರ್ಥತೆಗೆ ಸಾಕ್ಷಿ ಎಂದು ಹೇಳಿದೆ. ಆಡಳಿತ ಪಕ್ಷದ 58 ಜನರು ತುರ್ತು ಪರಿಸ್ಥಿತಿ ಘೋಷಣೆ ಪರವಾಗಿ ಮತ ಚಲಾಯಿಸಿದರೆ 14 ಜನರು ತುರ್ತು ಪರಿಸ್ಥಿತಿ ಘೋಷಣೆ ವಿರುದ್ಧ ಮತ ಚಲಾಯಿಸಿದ್ದಾರೆ.
ಸೇನೆಗೆ ಸಂಪೂರ್ಣ ಅಧಿಕಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ಮುವತ್ತು ದಿನಗಳ ತಾತ್ಕಾಲಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು.