ವಿದೇಶ

29 ವರ್ಷಕ್ಕೇ ಅಜ್ಜಿಯಾದ ಅರ್ಜೆಂಟಿನಾ ಮಹಿಳೆ

Srinivas Rao BV

ಅರ್ಜೆಂಟೀನ: ಅಜ್ಜಿಯಾಗುವುದಕ್ಕೆ ವಯಸ್ಸು ಎಷ್ಟಾಗಿರಬೆಕು? ಇದೆಂಥಾ ಪ್ರಶ್ನೆ ಅಂತ ಹುಬ್ಬೇರಿಸಬೇಡಿ, ಅರ್ಜೆಂಟಿನಾದ ಮಹಿಳೆಯೊಬ್ಬರು 29 ವರ್ಷಕ್ಕೆ ಅಜ್ಜಿಯಾಗಿ ಅಜ್ಜಿಯಾಗುವುದಕ್ಕೆ ವಯಸ್ಸಿನ ಅಡ್ಡಿ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಅಂದಹಾಗೆ ಅಜ್ಜಿಯಾಗುವುದಕ್ಕೆ ಹೇಗೆ ವಯಸ್ಸಿನ ಅಡ್ಡಿ ಇಲ್ಲವೋ ಸಾಧ್ಯವಾದಷ್ಟು ಕಿರಿಯ ವಯಸ್ಸಿನಲ್ಲೇ ತಂದೆಯೂ ಆಗಬಹುದೆಂದು ಈ ಘಟನೆ ಸಾಬೀತುಪಡಿಸಿದೆ.
ಅದು ಹೇಗೆ ಅಂತೀರಾ? 29 ವರ್ಷದ ಮಹಿಳೆಯ 14 ವರ್ಷದ ತಂದೆಯಾಗಿದ್ದು ತಾನು ಅತಿ ಕಿರಿಯ ವಯಸ್ಸಿನಲ್ಲೇ ಅಜ್ಜಿಯಾಗಿದ್ದಾಳೆ. ಅರ್ಜೆಂಟಿನಾದ ಮೆಂಡೋಜ ರಾಜ್ಯದ ಲೂಸೀ ಡೆಸಿರೀ ಎಂಬ ಮಹಿಳೆ ತನ್ನ ಮಗ 14 ವರ್ಷಕ್ಕೇ ತಂದೆಯಾಗಿದ್ದಾನೆ ಎಂದು ಹೇಳಿರುವುದರ ಬಗ್ಗೆ ವರದಿಯಾಗಿದೆ. ಪ್ರೌಢಶಾಲೆಯಲ್ಲಿ ಓದುತ್ತಿರುವ ತನ್ನ ಮಗ ಅವನ ಮಗನನನ್ನೂ ನೋಡಿಕೊಳ್ಳುತ್ತಾನೆ ಎಂದು 29 ವರ್ಷದ ಲುಸಿ ಡೇಸಿರಿ ಹೇಳಿದ್ದಾರೆ.
ಹಲವು ವಯಸ್ಕ ಅಪ್ಪಂದಿರು ತಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದಿರುವ ಡೇಸಿರಿ, ತನ್ನ ಮಗ ಹಾಗೂ ಮೊಮ್ಮಗುವಿನ ತಾಯಿಯ ಸಂಬಂಧದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ. ವಿವಾಹವಾಗುವಂತೆ ಅಥವಾ ಜೊತೆಯಲ್ಲಿರುವಂತೆ ಅವರನ್ನು ಒತ್ತಾಯಿಸುವುದಿಲ್ಲ ಎಂದು ಡೇಸಿರಿ ಹೇಳಿದ್ದಾರೆ. ಹದಿಹರೆಯದ ವಯಸ್ಸಿಗೆ ತಂದೆಯಾಗದಂತೆ ತನ್ನ ಮಗನಿಗೆ ಸಲಹೆ ನೀಡಿದ್ದೆ ಎಂದು ಡೇಸಿರಿ ತಿಳಿಸಿದ್ದಾರೆ.

SCROLL FOR NEXT