ಒಟ್ಟಾವ: ಕೆನಡಾ ಪ್ರಧಾನಿಯಾಗಿ ಆಯ್ಕೆಯಾಗಿರುವ ಜಸ್ಟಿನ್ ತ್ರೂಡೋ ಇದೇ ಮೊದಲ ಬಾರಿಗೆ ದಾಖಲೆಯ 4 ಮಂದಿ ಭಾರತೀಯ ಮೂಲದವರನ್ನು ತಮ್ಮ ಸಂಪುಟಕ್ಕೆ ಆಯ್ಕೆಮಾಡಿದ್ದಾರೆ.
ವಿಶೇಷವೆಂದರೆ 30 ಮಂದಿ ಸಚಿವ ಸಂಪುಟದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಆದ್ಯತೆ ನೀಡುವ ಮೂಲಕ ಕೆನಡಾದ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ಒಟ್ಟಾರೆ ಈ ಬಾರಿ ದಾಖಲೆಯ ಭಾರತೀಯ ಮೂಲದ 19 ಮಂದಿ ಸಂಸತ್ತಿಗೆ ಆಯ್ಕೆಯಾಗಿದ್ದರು.
ಇವರಲ್ಲಿ 3 ಪುರುಷರು, ಒಬ್ಬ ಮಹಿಳೆ ಸಚಿವರಾಗಿದ್ದಾರೆ. ಇವರಲ್ಲಿ ಹರ್ಜಿತ್ ಸಿಂಗ್ ಸಜ್ಜನ್ ರಕ್ಷಣಾ ಸಚಿವರಾಗಿ ಆಯ್ಕೆಯಾಗಿರುವುದು ವಿಶೇಷ. ಉಳಿದಂತೆ ಬರ್ದಿಶ್ ಚಗ್ಗರ್, ಅಮರ್‍ಜೀತ್ ಸೋಹಿ, ನವದೀಪ್ ಬೈನ್ಸ್ ಸಚಿವರಾಗಿ ನೇಮಕಗೊಂಡಿದ್ದಾರೆ.