ಪಾಕಿಸ್ತಾನ ತೆಹರಿಕ್-ಇ-ಇನ್ಸಾಫ್ (ಪಿಟಿಐ) ನ ಅಧ್ಯಕ್ಷ ಇಮ್ರಾನ್ ಖಾನ್ 
ವಿದೇಶ

ಪಾಕಿಸ್ತಾನಿ ಹಿಂದೂಗಳಿಗೆ ರಕ್ಷಣೆ ನೀಡಲು ಬದ್ಧ: ಇಮ್ರಾನ್ ಖಾನ್

ಭಾರತದಲ್ಲಿ ಮುಸ್ಲಿಮರನ್ನು ಶಿವಸೇನೆ ಕಡೆಗಣಿಸಿರುವ ಹಾಗೆ ಪಾಕಿಸ್ತಾನದಲ್ಲಿ ಹಿಂದೂಗಳನ್ನು ಕಡೆಗಣಿಸುವುದಿಲ್ಲ ಎಂದು ಪಾಕಿಸ್ತಾನ ತೆಹರಿಕ್-ಇ-ಇನ್ಸಾಫ್ (ಪಿಟಿಐ) ನ

ಇಸ್ಲಾಮಾಬಾದ್: ಭಾರತದಲ್ಲಿ ಮುಸ್ಲಿಮರನ್ನು ಶಿವಸೇನೆ ಕಡೆಗಣಿಸಿರುವ ಹಾಗೆ ಪಾಕಿಸ್ತಾನದಲ್ಲಿ ಹಿಂದೂಗಳನ್ನು ಕಡೆಗಣಿಸುವುದಿಲ್ಲ ಎಂದು ಪಾಕಿಸ್ತಾನ ತೆಹರಿಕ್-ಇ-ಇನ್ಸಾಫ್ (ಪಿಟಿಐ) ನ ಅಧ್ಯಕ್ಷ ಇಮ್ರಾನ್ ಖಾನ್ ವಚನ ನೀಡಿದ್ದಾರೆ.

ಉಮರ್ಕೋಟ್ ನಲ್ಲಿ ದೀಪಾವಳಿ ಹಬ್ಬ ಆಚರಿಸಲು ಸಾರ್ವಜನಿಕರೊಂದಿಗೆ ಅವರು ಪಾಲ್ಗೊಂಡಿದ್ದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

"ಪಿಟಿಐ ಸರ್ಕಾರದಡಿ ಹೊಸ ಪಾಕಿಸ್ತಾನ ಹೊರಹೊಮ್ಮಲಿದೆ. ಇಲ್ಲಿ ತೊಂದರೆ ನೀಡಲು ಪೊಲೀಸರನ್ನು ಬಳಸುವುದಿಲ್ಲ. ನ್ಯಾಯ ಉಳಿಯಲಿದೆ ಹಾಗೂ ಎಲ್ಲ ಪ್ರಾಂತ್ಯಗಳಿಗೂ ಸಮಾನ ಹಕ್ಕು ನೀಡಲಾಗುವುದು" ಎಂದು ಖಾನ್ ತಿಳಿಸಿದ್ದಾರೆ.

"ನಮಗೆ ಖೈಬರ್ ಪಖ್ತುಂಕ್ವ ಪರೀಕ್ಷೆಯಿದ್ದಂತೆ. ಇಲ್ಲಿನ ಜನರಿಗೆ ಉತ್ತಮ ಜೀವನ ನಡೆಸಲು ಕನಿಷ್ಠ ಸೌಲಭ್ಯಗಳನ್ನು ಒದಗಿಸಿ ನಮ್ಮ ಸಾಮರ್ಥ್ಯ ಸಾಬೀತುಪಡಿಸಲಿದ್ದೇವೆ" ಎಂದು ಅವರು ಹೇಳಿದ್ದಾರೆ.

ಭ್ರಷ್ಟಾಚಾರದ ಖಾಯಿಲೆಯಿಂದ ನರಳುತ್ತಿರುವ ಪಾಕಿಸ್ತಾನಕ್ಕೆ ಮುಕ್ತ ಮತದಾನವಷ್ಟೇ ಮಾರ್ಗ ಎಂದು ಕ್ರಿಕೆಟರ್ ಆಗಿದ್ದ ಈಗ ರಾಜಕಾರಣಿಯಾಗಿರುವ ಇಮ್ರಾನ್ ಖಾನ್ ಹೇಳಿದ್ದಾರೆ.

ಇದಕ್ಕೂ ಮುಂಚೆ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಪ್ ಕೂಡ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡು ಶುಭಾಶಯ ಕೋರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!