ಮೋದಿ ವಿರುದ್ಧ ಲಂಡನ್ ನಲ್ಲಿ ಪ್ರತಿಭಟನೆಯ ಬಿಸಿ 
ವಿದೇಶ

ಕೆಂಪು ಹಾಸಷ್ಟೇ ಅಲ್ಲ, ಪ್ರಧಾನಿ ಮೋದಿಗೆ ಕೆಂಪು ಬಾವುಟ ಹಾರಿಸಿ: ಅಮ್ನೆಸ್ಟಿ

ಬ್ರಿಟನ್ ಗೆ ಭೇಟಿ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೆಂಪು ಹಾಸಿನ ಸ್ವಾಗತವಷ್ಟೇ ಅಲ್ಲ, ಮಾನವ ಹಕ್ಕುಗಳ ಬಗ್ಗೆ ಕೆಂಪು ಬಾವುಟ ಹಾರಿಸಿ ಎಂದು...

ಲಂಡನ್: ಬ್ರಿಟನ್ ಗೆ ಭೇಟಿ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೆಂಪು ಹಾಸಿನ ಸ್ವಾಗತವಷ್ಟೇ ಅಲ್ಲ, ಮಾನವ ಹಕ್ಕುಗಳ ಬಗ್ಗೆ ಕೆಂಪು ಬಾವುಟ ಹಾರಿಸಿ ಎಂದು ಅಮ್ನೆಸ್ಟಿ ಇಂಟರ್ನ್ಯಾಶನಲ್ ಬ್ರಿಟಿಶ್ ಪ್ರಧಾನಿ ಡೇವಿಡ್ ಕೆಮರೂನ್ ಅವರಿಗೆ ಆಗ್ರಹಿಸಿದೆ.

"ಎನ್ ಜಿ ಒಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತಮ್ಮ ಕೆಲಸಗಳನ್ನು ಮಾಡಲು ಒತ್ತಡದಲ್ಲಿದ್ದಾರೆ. ದೇಶ ವಿರೋಧಿ ಪಟ್ಟ ಕಟ್ಟಿ ಅವರ ನಿಧಿ ಸಂಗ್ರಹಕ್ಕೆ ಕೊಕ್ಕೆ ಹಾಕಿ ಅವರ ವಿರುದ್ಧ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ" ಎಂದು ಅಮ್ನೆಸ್ಟಿ ಯು.ಕೆಯ ನೀತಿ ಸಮಿತಿಯ ಅಧ್ಯಕ್ಷ ಆಲನ್ ಹೊಗ್ರಾಥ್ ದೂರಿದ್ದಾರೆ.

"ಮತ್ತೊಬ್ಬ ವಿಶ್ವ ನಾಯಕನಿಗೆ ಕೆಂಪು ಹಾಸಿನ ಸ್ವಾಗತವನ್ನಷ್ಟೇ ನೀಡದೆ ಕೆಮರೂನ್ ಅವರು ಮಾನವ ಹಕ್ಕುಗಳ ಬಗೆಗೆ ಕೆಂಪು ಬಾವುಟವನ್ನು ಹಾರಿಸಬೇಕಿದೆ" ಎಂದು ಅವರು ಹೇಳಿದ್ದಾರೆ.

ವಿದೇಶಿ ನಿಧಿಯನ್ನು ಪಡೆಯುವುದರಿಂದ ತಡೆಯಲು ಸುಮಾರು ೧೦೦೦೦ ಮಾನವ ಹಕ್ಕುಗಳ ಸಂಸ್ಥೆಗಳ ನೊಂದಣಿಯನ್ನು ಕಳೆದ ವರ್ಷ ರದ್ದು ಮಾಡಿರುವುದನ್ನು ತಿಳಿಸಿರುವ ಅವರು ಕಳೆದ ವಾರವಷ್ಟೇ ಗ್ರೀನ್ ಪೀಸ್ ಎನ್ ಜಿ ಒದ ನೊಂದಣಿಯನ್ನು ರದ್ದು ಮಾಡಿರುವುದಾಗಿ ಹೇಳಿದ್ದಾರೆ.

"ಮೋದಿ ವಿರುದ್ಧ ಭಾರತದಲ್ಲಿ ಟೀಕೆಗೆ ಅವಕಾಶವಿಲ್ಲ ಆದುದರಿಂದ ಅವರ ಪ್ರವಾಸದ ವೇಳೆಯಲ್ಲಿ ಕೆಮರೂನ್ ಅವರು ಮಾನವ ಹಕ್ಕುಗಳ ಬಗ್ಗೆ ಮಾತನಾಡುವುದು ಅತಿ ಅವಶ್ಯಕ. ಟೀಕಿಸುವವರನ್ನು ಭಾರತದಲ್ಲಿ ಹತ್ತಿಕ್ಕಲಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ.

ಮೋದಿ ಅವರ ಲಂಡನ್ ಭೇಟಿ ವೇಳೆಯಲ್ಲಿ ಮುನ್ನೂರಕ್ಕೂ ಹೆಚ್ಚು ಜನ ಬೀದಿಗಿಳಿದು ಪ್ರತಿಭಟಿಸಿದ್ದ ಸಮಯದಲ್ಲೇ ಅಮ್ನೆಸ್ಟಿ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT