ಯುನೈಟೆಡ್ ನೇಷನ್ಸ್: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿ ಅಂತಾರಾಷ್ಟ್ರೀಯ ಸಮುದಾಯ ಎಚ್ಚೆತ್ತುಕೊಳ್ಳುವಂತೆ ಮಾಡಿದ್ದು, ಭಯೋತ್ಪಾದಕ ಸಂಘಟನೆಗಳಿಗೆ ಸಿಗುತ್ತಿರುವ ಹಣಕಾಸಿನ ಮೂಲಕ್ಕೆ ಕತ್ತರಿ ಹಾಕಬೇಕೆಂದು ಭಾರತ ಕರೆ ನೀಡಿದೆ.
ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ- ತೋಯ್ಬಾ ಹಾಗೂ ಇಸ್ಲಾಮಿಕ್ ಸ್ಟೇಟ್ ಗಳಿಗೆ ಹಣಕಾಸಿನ ನೆರವು ಸಿಗದಂತೆ ಅಂತಾರಾಷ್ಟ್ರೀಯ ಸಮುದಾಯ ಕಠಿಣ ಕ್ರಮ ಕೈಗೊಳ್ಳಬೇಕು. ಫ್ರಾನ್ಸ್ ನಲ್ಲಿ ನಡೆದ ಉಗ್ರರ ದಾಳಿ ಭಯೋತ್ಪಾದನೆ ನಿರ್ಮೂಲನೆ ಮಾಡುವ ವಿಷಯದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಪ್ರಯತ್ನ ವಿಫಲವಾಗಿರುವುದನ್ನು ತೋರುತ್ತದೆ. ಭಯೋತ್ಪಾದನೆ ನಿರ್ಮೂಲವಾಗಬೇಕಾದರೆ ಉಗ್ರರಿಗೆ ಸಿಗುತ್ತಿರುವ ಆರ್ಥಿಕ ಸಹಾಯಕ್ಕೆ ಕತ್ತರಿ ಹಾಕಬೇಕಲು ಭಯೋತ್ಪಾದನೆ ವಿರುದ್ಧ ಹೋರಾಡುವ ರಾಷ್ಟ್ರಗಳು ಕ್ರಮ ಕೈಗೊಳ್ಳಬೇಕಿದೆ ಎಂದು ವಿಶ್ವಸಂಸ್ಥೆಯ ಭಾರತದ ಉಪಪ್ರತಿನಿಧಿ ಭಗವಂತ್ ಸಿಂಗ್ ಬಿಷ್ಣೋಯಿ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ.
ಭಯೋತ್ಪಾದಕರಿಗೆ ಸಿಗುತ್ತಿರುವ ಆರ್ಥಿಕ ನೆರವನ್ನು ಸ್ಥಗಿತಗೊಳಿಸುವುದು ವಿಳಂಬವಾದಷ್ಟೂ ನಾವು ಜೀವ ಹಾನಿ ಲೆಕ್ಕದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಭಗವಂತ್ ಸಿಂಗ್ ಎಚ್ಚರಿಸಿದ್ದಾರೆ.