ಕೊಲಂಬೊ: ಶ್ರೀಲಂಕಾದ ಕಾರ್ಯನಿರ್ವಾಹಕ ಅಧ್ಯಕ್ಷೀಯ ವ್ಯವಸ್ಥೆಯನ್ನು ರದ್ದುಗೊಳಿಸಿ ಅಧ್ಯಕ್ಷರ ಬಹುತೇಕ ಅಧಿಕಾರವನ್ನು ಸಂಸತ್ ಗೆ ವರ್ಗಾಯಿಸುವ ನಿರ್ಣಯವನ್ನು ಲಂಕಾ ಸಂಸತ್ ಅಂಗೀಕರಿಸಿದೆ.
ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಕಾರ್ಯನಿರ್ವಾಹಕ ಅಧ್ಯಕ್ಷೀಯ ವ್ಯವಸ್ಥೆಯನ್ನು ರದ್ದುಗೊಳಿಸುವುದು ಹಾಗೂ ಹೊಸ ಚುನಾವಣಾ ವ್ಯವಸ್ಥೆ ಜಾರಿಗೊಳಿಸುವ ಸಂಸತ್ ತೀರ್ಮಾನಕ್ಕೆ ಸಮ್ಮತಿ ಸೂಚಿಸಿದ್ದಾರೆ. ಸಂಸತ್ ನ ಜವಾಬ್ದಾರಿಯಾದ ಹೊಸ ಚುನಾವಣಾ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ನಿರೀಕ್ಷಿಸುತ್ತೇನೆ ಎಂದು ಮೈತ್ರಿಪಾಲ ಸಿರಿಸೇನಾ ಹೇಳಿದ್ದಾರೆ.
ಶ್ರೀಲಂಕಾ ಚುನಾವಣೆಯ ವೇಳೆ ನೀಡಿದ್ದ ಭರವಸೆಯ ಭಾಗವಾಗಿ ಚುನಾವಣಾ ಹೊಸ ಸಂವಿಧಾನದ ಸ್ಥಾಪನೆ ಕುರಿತು ಚರ್ಚೆ ನಡೆಯುತ್ತಿದೆ ಎಂದು ಸಿರಿಸೇನಾ ಹೇಳಿದ್ದಾರೆ. ಚುನಾವಣಾ ಆಯೋಗ ರಚನೆ ಮಾನವ ಹಕ್ಕು, ಸಾರ್ವಜನಿಕ ಸೇವೆ, ನ್ಯಾಯಾಂಗಕ್ಕೆ ಸಂಬಂಧಿಸಿದ ಆಯೋಗ ರಚನೆಗೆ ಮಾಡುವುದಕ್ಕೆ ಹೊಸ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಿರಿಸೇನಾ ತಿಳಿಸಿದ್ದಾರೆ.