ವಿದೇಶ

ನೇತಾಜಿ ರಹಸ್ಯ ಕಡತ ಬಹಿರಂಗ ಪಡಿಸುವ ಬಗ್ಗೆ ನಿರ್ಧರಿಸಲು ಕಾಲಾವಕಾಶ ಕೋರಿದ ಬ್ರಿಟನ್

Srinivas Rao BV

ನವದೆಹಲಿ: ಸುಭಾಷ್ ಚಂದ್ರಬೋಸರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಹಿರಂಗಪಡಿಸುವುದರ ಬಗ್ಗೆ ನಿರ್ಧರಿಸಲು ಬ್ರಿಟನ್ ಕಾಲಾವಕಾಶ ಕೇಳಿದೆ.
1945 ಬೋಸ್ ಕಣ್ಮರೆಯಾಗಿದ್ದರ ಬಗ್ಗೆ ಬ್ರಿಟನ್ ಬಳಿ ಇರುವ ರಹಸ್ಯ ಕಡತಗಳನ್ನು ಬಹಿರಂಗಗೊಳಿಸಬೇಕೆಂದು ನೇಜಾಜಿ ಕುಟುಂಬದವರು ಬ್ರಿಟನ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು. "ಸುಭಾಷ್ ಚಂದ್ರಬೋಸರ ಸಂಬಂಧಿ  ಮಾಧುರಿ ಬೋಸ್ ಗೆ ಬ್ರಿಟನ್ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ನೇತಾಜಿಗೆ ಸಂಬಂಧಿಸಿದ ರಹಸ್ಯ ಕಡತಗಳು ತಮ್ಮ ಬಳಿ ಇರುವುದಾಗಿ ಒಪ್ಪಿಕೊಂಡಿದೆ. ಆದರೆ ಅದನ್ನು ಬಹಿರಂಗಗೊಳಿಸಬೇಕೋ ಬೇಡವೋ ಎಂಬ ಬಗ್ಗೆ ನಿರ್ಧರಿಸಲು ಸಮಯ ಕೋರಿದೆ ಎಂದು ಸೂರ್ಯ ಕುಮಾರ್ ಬೋಸ್ ಪಿಟಿಐಗೆ ತಿಳಿಸಿದ್ದಾರೆ.    
ಪ್ರಧಾನಿ ನರೇಂದ್ರ ಮೋದಿ ಬರ್ಲಿನ್ ಗೆ ಭೇಟಿ ನೀದಿದ್ದಾಗ ಅವರನ್ನು ಭೇಟಿ ಮಾಡಿದ್ದ ಸೂರ್ಯ ಕುಮಾರ್ ಬೋಸ್, ತಮ್ಮ ಬಳಿ ಇರುವ ನೇತಾಜಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಹಿರಂಗಪಡಿಸಲು ಯುಎಸ್ಎ, ರಷ್ಯಾ, ಜಪಾನ್ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದರು.

SCROLL FOR NEXT