ತೆವಳುವ ಶಿಕ್ಷೆ 
ವಿದೇಶ

ಟಾರ್ಗೆಟ್ ರೀಚಾಗದಕ್ಕೆ ತೆವಳು ಶಿಕ್ಷೆ

ಇದು ಟಾರ್ಗೆಟ್ ಯುಗ. ಪ್ರತಿದಿನ ಪ್ರತಿಕ್ಷಣ ಟಾರ್ಗೆಟ್ ತಲುಪಲು ಹರಸಾಹಸ ನಡೆದೇ ಇರುತ್ತದೆ. ಟಾರ್ಗೆಟ್ ತಲುಪದಿದ್ದರೆ ಆತನೇ ಕಂಪನಿಯಿಂದ ಮೊದಲ...

ಬೀಜಿಂಗ್: ಇದು ಟಾರ್ಗೆಟ್ ಯುಗ. ಪ್ರತಿದಿನ ಪ್ರತಿಕ್ಷಣ ಟಾರ್ಗೆಟ್ ತಲುಪಲು ಹರಸಾಹಸ ನಡೆದೇ ಇರುತ್ತದೆ. ಟಾರ್ಗೆಟ್ ತಲುಪದಿದ್ದರೆ ಆತನೇ ಕಂಪನಿಯಿಂದ ಮೊದಲ ಗುರಿಯಾಗುತ್ತಾನೆ.
ಖಾಸಗಿ ಕಂಪನಿಗಳ ಪ್ರತಿ ಉದ್ಯೋಗಿ ಈ ಟಾರ್ಗೆಟ್ ಎಂಬ ಭೂತದ ಭಯದಿಂದಲೇ ದಣಿಯುತ್ತಿರುತ್ತಾನೆ. ಅದರಲ್ಲೂ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿದ್ದರಂತೂ ಆತನ ಕನಸು ಮನಸಲ್ಲೂ ಇದೇ ಒತ್ತಡ. ಬಾಸ್‍ನಿಂದ ಬಯ್ಗುಳದ, ಕೆಲಸ ಕಳೆದುಕೊಳ್ಳುವ ಭಯ ಇತ್ಯಾದಿ. ಆದರೆ ಚೀನಾದ ಕಂಪನಿಯೊಂದರಲ್ಲಿ ನೀಡುವ ಶಿಕ್ಷೆ ನೋಡಿದವರು, ಇದಕ್ಕಿಂತ ನಮ್ಮ ಪರಿಸ್ಥಿತಿಯೇ ಬೆಟರ್ ಎಂದು ಸಮಾಧಾನ ಪಟ್ಟುಕೊಳ್ಳಬಹುದೇನೋ!
ಚೀನಾದ ಕಂಪನಿಯೊಂದರಲ್ಲಿ ಸೇಲ್ಸ್ ಟಾರ್ಗೆಟ್ ರೀಚ್ ಮಾಡದ ಉದ್ಯೋಗಿಗಳಿಗೆ ನೀಡುತ್ತಿರುವ ಶಿಕ್ಷೆ ಏನು ಗೊತ್ತೆ? ಕಂಪನಿ ಬಳಿಯ ರಸ್ತೆಯಲ್ಲಿ ಅವರು ಸಾರ್ವಜನಿಕವಾಗಿ ಉರುಳುಸೇವೆ ಮಾಡಬೇಕು, ತೆವಳಿ ನಡೆಯಬೇಕು, ಬಿರುಬಿಸಿಲ ನೆಲಗಳ ಮೇಲೆ ಕೈಗಳಲ್ಲಿ ನಡೆಯಬೇಕು. ನೀವು ನಂಬಲಿಕ್ಕಿಲ್ಲ ಸುಮಾರು 12ಕ್ಕೂ ಹೆಚ್ಚು ಉದ್ಯೋಗಿಗಳು ಮಧ್ಯಚೀನಾದ ಝೆನ್ ಜಾವ್ ನಗರದಲ್ಲಿರುವ ಸರೋವರದ ಬದಿಯ ರಸ್ತೆಗಳಲ್ಲಿ ತೆವಳಾಡಿ, ಅಂಬೆಗಾಲಿಟ್ಟು ನಡೆಯುತ್ತಿದುದನ್ನು ನೋಡಿ ಸಾರ್ವಜನಿಕರು ದಂಗಾಗಿದ್ದಾರೆ. 
ಇದು ಸೇಲ್ಸ್ ಟಾರ್ಗೆಟ್ ತಲುಪದೇ ಹೋದದ್ದಕ್ಕೆ ನೀಡಿದ ಶಿಕ್ಷೆ ಎಂದು ಅಲ್ಲಿನ ಉದ್ಯೋಗಿಗಳೇ ಖಚಿತಪಡಿಸಿದ್ದಾರೆ. ಕಳೆದ ವಾರ ರಾಷ್ಟ್ರೀಯ ರಜೆಯಂದು ಬಹುತೇಕ ಚೀನೀ ಮಂದಿ ಖುಷಿಯಿಂದ ಕಳೆಯುತ್ತಿದ್ದರೆ, ಈ ನತದೃಷ್ಟರು ಮಾತ್ರ 23 ಎಕರೆ ಇರುವ ಕಂಪನಿ ಆವರಣವನ್ನು ತೆವಳಿ ರೌಂಡ್ ಹೊಡೆಯುವ ಶಿಕ್ಷೆ ಅನುಭವಿಸುತ್ತಿದ್ದರು. ಶಿಕ್ಷೆ ಪೂರೈಸುತ್ತಿದ್ದಾರೋ ಇಲ್ವೋ ನೋಡಲು ಮೇಲ್ವಿಚಾರಕನನ್ನೂ ಇಡಲಾಗಿತ್ತು. ಆದರೆ ಈ ಕಂಪನಿಯ ಬಗ್ಗೆ ಮಾತ್ರ ಮಾಹಿತಿ ತಿಳಿದು ಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!

ಮಧ್ಯಪ್ರದೇಶ: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಮರಿ ಸಾವು!

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!