ಚೀನಿ ಯುವಕರು(ಸಾಂದರ್ಭಿಕ ಚಿತ್ರ) 
ವಿದೇಶ

ಚೀನಾ ಯುವಕರಿಗೆ ಬಾಡಿಗಿಗೆ ಹುಡಿಗಿಯರು ಬೇಕಂತೆ..!

ಮಕ್ಕಳು ಮದುವೆ ವಯಸ್ಸಿಗೆ ಬಂದ ತಕ್ಷಣ ತಂದೆ - ತಾಯಿರದ್ದು ಒಂದೇ ಗೋಳು, ಮದುವೆ ಮಾಡಬೇಕೆನ್ನುವುದು. ಇದನ್ನು ತಪ್ಪಿಸಲು ಗೆಳತಿಯರನ್ನು ಮನೆಗೆ ಕರೆತಂದು ಸುಳ್ಳು...

ಬೀಜಿಂಗ್: ಮಕ್ಕಳು ಮದುವೆ ವಯಸ್ಸಿಗೆ ಬಂದ ತಕ್ಷಣ ತಂದೆ-ತಾಯಿರದ್ದು ಒಂದೇ ಗೋಳು, ಮದುವೆ ಮಾಡಬೇಕೆನ್ನುವುದು. ಇದನ್ನು ತಪ್ಪಿಸಲು ಗೆಳತಿಯರನ್ನು ಮನೆಗೆ ಕರೆತಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದನ್ನು ನೋಡಿರುತ್ತೀರಾ. ಆದರೆ ಇದಕ್ಕಾಗಿ ಹುಡುಗಿಯರನ್ನು ಬಾಡಿಗೆಗೆ ಪಡೆಯುವುದನ್ನು ನೋಡಿದ್ದೀರ!.
ಹೌದು, ಚೀನಾದಲ್ಲಿ ಯುವಕರು ಮದುವೆಯಿಂದ, ಪೋಷಕರ ಕಾಟದಿಂದ ತಪ್ಪಿಸಿಕೊಳ್ಳಲು ಯುವತಿಯರನ್ನು ಬಾಡಿಗೆಗೆ ಪಡೆಯುತ್ತಿದ್ದರಂತೆ. ಇದೀಗ ಚೀನಾದಲ್ಲಿ ಟ್ರೆಂಡ್ ಆಗಿ ಬೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಅಲ್ಲದೇ, ಚೀನಾದ ಮೊಬೈಲ್ ಆಪ್‌ನಲ್ಲಿ ಇದೊಂದು ವ್ಯವಹಾರವಾಗಿ ಬೆಳೆಯತೊಡೆಗಿದೆಯಂತೆ.
ಬಾಡಿಗೆಗೆ ಹುಡುಗಿಯರನ್ನು ಪಡೆಯುವ ಯುವಕರು 10 ಸಾವಿರದವರೆಗೆ ಸಂಭಾವನೆ ನೀಡುತ್ತಾರಂತೆ. ಸದ್ಯ ಚೀನಾದ ವೀಚಾಟ್ ಹಾಗೂ ವಾಟ್ಸಪ್‌ನಲ್ಲಿ ಇದರದ್ದೇ ಕಾರುಬಾರು. ಅದರಲ್ಲೂ ಚೀನಾದಲ್ಲಿ ನ್ಯಾಷನಲ್ ಹಾಲಿಡೇ ಇರುವ ಕಾರಣ ಯುವಕರೆಲ್ಲಾ ಪೋಷಕರ ಕಣ್ಣುತಪ್ಪಿಸಲು ಹೀಗೆ ಮಾಡುತ್ತಿದ್ದಾರಂತೆ.
ಬಾಡಿಗೆಗೆ ಹುಡುಗಿ ಯಾಕೆ?
ಚೀನಾದಲ್ಲಿ 27ನೇ ವಯಸ್ಸಿಗೆ ಮದುವೆ ಎಂಬ ನಿಯಮವಿದೆಯಂತೆ. ಅದಾದ ಮೇಲೂ ಮದುವೆಯಾಗದೇ ಇದ್ದರೆ ತ್ಯಾಜ್ಯದ ರೀತಿ ಸ್ವೀಕರಿಸಲಾಗುತ್ತದೆಯಂತೆ. ಒಂದು ವೇಳೆ ಯುವಕ ಯುವತಿಯರು ಪ್ರೀತಿ - ಪ್ರೇಮ ಸಂಬಂಧದಲ್ಲಿದ್ದರೆ ಎಲ್ಲದ್ದಕ್ಕೂ ಮಾಫಿ ಸಿಗುತ್ತದೆ. ಹೀಗಾಗಿಯೇ ಯುವಕರು ಈ ಮಾರ್ಗವನ್ನು ಕಂಡುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಸೇರಿ 150ಕ್ಕೂ ಹೆಚ್ಚು ಮಂದಿ ಪೊಲೀಸ್ ವಶ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!