ವಿದೇಶ

ಉಗ್ರ ಸಂಘಟನೆಗಳಲ್ಲಿ ಭೇದ ಬೇಡ, ಎಲ್ಲವೂ ಒಂದೇ: ಒಬಾಮಾ

Rashmi Kasaragodu
ವಾಷಿಂಗ್ಟನ್: ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಗಳಲ್ಲಿ ಭೇದ ಬೇಡ, ಉಗ್ರ ಸಂಘಟನೆಗಳೆಲ್ಲವೂ ಒಂದೇ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
ಉಗ್ರ ಸಂಘಟನೆಗಳು ಎಲ್ಲವೂ ಒಂದೇ ಮೂಲದವುಗಳು. ಅವುಗಳಲ್ಲಿ ವರ್ಗೀಕರಣ ಬೇಡ ಎಂದು ಪಾಕ್ ಪ್ರಧಾನಿ ನವಾಜ್ ಶರೀಫ್ ಅವರಿಗೆ ಒಬಾಮಾ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಶ್ವೇತಭವನದ ವಕ್ತಾರ ಎರಿಕ್ ಚುಲೆಟ್ಜ್ ಹೇಳಿದ್ದಾರೆ. ಶರೀಫ್  ಅವರು ಭಾರತದ ವಿರುದ್ಧದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಶ್ವೇತಭವನ ಒಬಾಮಾ- ಶರೀಫ್ ನಡುವಿನ ಮಾತುಕತೆಯ ವಿಷಯಗಳನ್ನು  ಬಹಿರಂಗ ಪಡಿಸಿದೆ.
ಒಬಾಮಾ ಮತ್ತು ಶರೀಫ್ ಭಯೋತ್ಪಾದನೆ ವಿಷಯದ ಬಗ್ಗೆ ಮಾತುಕತೆ ನಡೆಸಿದ್ದು ಉಭಯ ರಾಷ್ಟ್ರಗಳು ಭಯೋತ್ಪಾದನೆಯ ಭೀತಿಗೊಳಗಾಗಿವೆ. ಭಯೋತ್ಪಾದನೆಯಿಂದಾಗಿ ಪಾಕಿಸ್ತಾನವೇ ಹೆಚ್ಚು ಯಾತನೆ ಅನುಭವಿಸಿದೆ. 
ಈ ಇಬ್ಬರು ನಾಯಕರು ಭಯೋತ್ಪಾದನೆಯ ವಿರುದ್ಧ ಹೋರಾಡಲು ಪಣ ತೊಟ್ಟಿದ್ದಾರೆ. ಆದಾಗ್ಯೂ, ಜಗತ್ತಿನಲ್ಲಿ ಶಾಂತಿ ನೆಲೆಸಲು ಉಗ್ರ ಸಂಘಟನೆಗಳನ್ನು ಪಾಕ್ ಮಟ್ಟ ಹಾಕಬೇಕೆಂದು ಒಬಾಮಾ ಹೇಳಿರುವುದಾಗಿ ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ.
SCROLL FOR NEXT